Voter ID Name Check 2026: ಮತದಾರರೇ ಗಮನಿಸಿ! ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ? ಈಗಲೇ ಚೆಕ್ ಮಾಡಿ!

Table of Contents

Voter ID Name Check 2026: ಮತದಾರರೇ ಗಮನಿಸಿ! ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ? ಈಗಲೇ ಚೆಕ್ ಮಾಡಿ!

Voter ID Name Check 2026: ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಮೊಬೈಲ್‌ನಲ್ಲಿ ಪರಿಶೀಲಿಸುವ ವಿಧಾನ ತಿಳಿಯಿರಿ. Voter ID, EPIC ಸಂಖ್ಯೆ, ಹೆಸರು ಮೂಲಕ ಹುಡುಕಾಟ, ಹೊಸ ನೋಂದಣಿ ಮತ್ತು ಅಧಿಕೃತ ಲಿಂಕ್‌ಗಳ ಸಂಪೂರ್ಣ ಮಾಹಿತಿ.

Voter ID Name Check 2026: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಮೊಬೈಲ್‌ನಲ್ಲೇ ಹೀಗೆ ಚೆಕ್ ಮಾಡಿ!

ಈ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಈಗ ನೀವು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತುಕೊಂಡು ನಿಮ್ಮ ಮೊಬೈಲ್ ಫೋನ್ ಮೂಲಕವೇ ಆನ್‌ಲೈನ್‌ನಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದು. ಭಾರತದ ಚುನಾವಣಾ ಆಯೋಗವು ಮತದಾರರ ಹೆಸರು, ಮತದಾರರ ಗುರುತಿನ ಚೀಟಿ ವಿವರಗಳು ಮತ್ತು ಮತಗಟ್ಟೆಯ ಮಾಹಿತಿಯನ್ನು ಪರಿಶೀಲಿಸಲು ಆನ್‌ಲೈನ್ ಸೌಲಭ್ಯವನ್ನು ಒದಗಿಸಿದ್ದಾರೆ.

ನೀವು ಈಗಾಗಲೇ ಮತದಾರರ ಗುರುತಿನ ಚೀಟಿ (Voter ID Card) ಹೊಂದಿದ್ದರೂ, ನಿಮ್ಮ ಹೆಸರು ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಒಮ್ಮೆ ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಏಕೆಂದರೆ ಮತದಾರರ ಗುರುತಿನ ಚೀಟಿ ಹೊಂದಿರುವುದಷ್ಟೇ ಮತದಾನ ಮಾಡಲು ಸಾಕಾಗುವುದಿಲ್ಲ; ಬದಲಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಬೇಕು.

ಹಾಗಾದರೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಮೊಬೈಲ್‌ನಲ್ಲಿ ಹೇಗೆ ಖಚಿತಪಡಿಸಿಕೊಳ್ಳಬೇಕು? ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ ಮುಂದೆ ಏನು ಮಾಡಬೇಕು? ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಹೇಗೆ? ನಾವು ಈ ಬಗ್ಗೆ  ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

Voter ID Name Check 2026 ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವುದು ಏಕೆ ಮುಖ್ಯ?

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ಅರ್ಹ ನಾಗರಿಕನ ಪ್ರಮುಖ ಹಕ್ಕಾಗಿರುತ್ತದೆ. ಚುನಾವಣೆಯ ಸಂದರ್ಭದಲ್ಲಿ ಮತದಾನ ಮಾಡಲು ನಿಮ್ಮ ಹೆಸರು ಸಂಬಂಧಪಟ್ಟ ಮತದಾರರ ಪಟ್ಟಿಯಲ್ಲಿ ದಾಖಲಾಗಿರಬೇಕು.

ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವುದರಿಂದ ಈ ಕೆಳಗೆ ನೋಡಿ ಪ್ರಯೋಜನಗಳಿವೆ.

  • ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ತಿಳಿಯಬಹುದು.
  • ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಬಳಸಿ ವಿವರಗಳನ್ನು ಹುಡುಕಬಹುದು.
  • ಹೆಸರು, ಸಂಬಂಧಿಕರ ಹೆಸರು ಮತ್ತು ಇತರೇ ವೈಯಕ್ತಿಕ ವಿವರಗಳ ಮೂಲಕ ಹುಡುಕಬಹುದು.
  • ನಿಮ್ಮ ಮತಗಟ್ಟೆಯ ವಿವರಗಳನ್ನು ತಿಳಿದುಕೊಳ್ಳಬಹುದು.
  • ನಿಮ್ಮ ವಿಧಾನಸಭಾ ಕ್ಷೇತ್ರದ ಹಾಗೂ ಮತದಾರರ ನೋಂದಣಿ ವಿವರಗಳನ್ನು ಪರಿಶೀಲಿಸಬಹುದು.
  • ನಿಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ ಮುಂದೆ ಏನು ಕ್ರಮಗ ಗಳನ್ನು ಕೈಗೋಳ್ಳಬಹುದು ಎಂಬ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

Voter ID Name Check 2026: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಆನ್‌ಲೈನ್‌ನಲ್ಲಿ ಪರಿಶೀಲಿಸುವ ವಿಧಾನ

ಭಾರತದ ಚುನಾವಣಾ ಆಯೋಗದ ಅಧಿಕೃತ Electoral Search ವೆಬ್‌ಸೈಟ್ ಮೂಲಕವೇ ನಿಮ್ಮ ಹೆಸರನ್ನು ಸುಲಭವಾಗಿ ಪರಿಶೀಲಿಸಬಹುದು.

ಅಧಿಕೃತ ವೆಬ್‌ಸೈಟ್: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ

  • ಹಂತ 1: ಅಧಿಕೃತ ವೆಬ್‌ಸೈಟ್ ತೆರೆಯಿರಿ

ನೀವು ಮೊದಲು ನಿಮ್ಮ ಮೊಬೈಲ್‌ನಲ್ಲಿ ಇಂಟರ್‌ನೆಟ್ ಸಂಪರ್ಕವನ್ನು ಸಕ್ರಿಯಗೊಳಿಸಿ. ಆನಂತರ ಮೇಲಿನ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

  • ಹಂತ 2: ಹುಡುಕುವ ವಿಧಾನವನ್ನು ಆಯ್ಕೆಮಾಡಿ

ವೆಬ್‌ಸೈಟ್‌ನಲ್ಲಿ ನಿಮ್ಮ ವಿವರಗಳನ್ನು ಹುಡುಕಲು ಸಾಮಾನ್ಯವಾಗಿ ಈ ಆಯ್ಕೆಗಳು ಲಭ್ಯವಿರುತ್ತವೆ:

  1. Search by EPIC
  2. Search by Details
  3. Search by Mobile

ನಿಮ್ಮ ಬಳಿಯಲ್ಲಿ ಮತದಾರರ ಗುರುತಿನ ಚೀಟಿ ಇದ್ದರೆ EPIC ಸಂಖ್ಯೆಯ ಮೂಲಕ ಹುಡುಕಬಹುದು. ಗುರುತಿನ ಚೀಟಿ ಸಂಖ್ಯೆ ತಿಳಿದಿಲ್ಲದಿದ್ದರೆ ವೈಯಕ್ತಿಕ ವಿವರಗಳ ಮೂಲಕ ಹುಡುಕುವ ಆಯ್ಕೆಯನ್ನು ಬಳಸಬಹುದು.

  • ಹಂತ 3: EPIC ಸಂಖ್ಯೆಯ ಮೂಲಕ ಹುಡುಕಿ

EPIC ಎಂದರೆ ಮತದಾರರ ಗುರುತಿನ ಚೀಟಿಯಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆ.

ಈ ವಿಧಾನದಲ್ಲಿ:

  1. Search by EPIC ಆಯ್ಕೆಯನ್ನು ಆರಿಸಿ.
  2. ನಿಮ್ಮ Voter ID ಕಾರ್ಡ್‌ನಲ್ಲಿರುವಂತಹ EPIC ಸಂಖ್ಯೆಯನ್ನು ನಮೂದಿಸಿ.
  3. ರಾಜ್ಯದ ಆಯ್ಕೆಯಲ್ಲಿ Karnataka ವನ್ನು ಆಯ್ಕೆಮಾಡಿ.
  4. ಪರದೆಯ ಮೇಲೆ ಕಾಣಿಸುವ CAPTCHA ಕೋಡ್ ಅನ್ನು ನಮೂದಿಸಿ.
  5. ಆಮೇಲೆ Search ಬಟನ್ ಮೇಲೆ ಕ್ಲಿಕ್ ಮಾಡಿ.

ನೀವು ನಿಮ್ಮ ವಿವರಗಳು ಮತದಾರರ ಪಟ್ಟಿಯಲ್ಲಿ ಲಭ್ಯವಿದ್ದರೆ ಸಂಬಂಧಪಟ್ಟ ಮಾಹಿತಿಯೂ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.

  • ಹಂತ 4: ಹೆಸರಿನ ಮೂಲಕ ಹುಡುಕಿ

ನಿಮ್ಮ ಬಳಿ EPIC ಸಂಖ್ಯೆ ಇಲ್ಲದಿದ್ದರೆ Search by Details ಆಯ್ಕೆಯನ್ನು ಬಳಸಬಹುದು.

ಈ ಆಯ್ಕೆಯಲ್ಲಿ ವೆಬ್‌ಸೈಟ್ ಕೇಳುವ ವಿವರಗಳನ್ನು ನಮೂದಿಸಿ. ಸಾಮಾನ್ಯವಾಗಿ ಈ ರೀತಿಯ ಮಾಹಿತಿಗಳು ಅಗತ್ಯವಾಗಬಹುದು:

  • ನಿಮ್ಮ ಹೆಸರು
  • ತಂದೆ ಅಥವಾ ಗಂಡನ ಹೆಸರು
  • ವಯಸ್ಸು ಅಥವಾ ಜನ್ಮದಿನಾಂಕಕ್ಕೆ ಸಂಬಂಧಿಸಿದ ವಿವರ
  • ರಾಜ್ಯ
  • ಜಿಲ್ಲೆ ಅಥವಾ ವಿಧಾನಸಭಾ ಕ್ಷೇತ್ರ
  • ಇತರೇ ಅಗತ್ಯ ಮಾಹಿತಿಗಳು

ನೀವು ನಮೂದಿಸುವಂತಹ ವಿವರಗಳು ಸರಿಯಾಗಿವೆಯೇ ಎಂದು ಒಮ್ಮೆ ಪರಿಶೀಲಿಸಿ. ಆನಂತರ CAPTCHA ಪೂರ್ಣಗೊಳಿಸಿ Search ಆಯ್ಕೆಯನ್ನು ಒತ್ತಿರಿ.

ಒಂದೇ ಹೆಸರಿನ ಹಲವಾರು ಮತದಾರರು ಇರಬಹುದಾದ್ದರಿಂದ, ಫಲಿತಾಂಶದಲ್ಲಿ ನಿಮ್ಮ ಹೆಸರು ಮತ್ತು ಇತರೇ ವಿವರಗಳನ್ನು ಸರಿಯಾಗಿ ಪರಿಶೀಲಿಸಿ.

  • ಹಂತ 5: ಮೊಬೈಲ್ ಸಂಖ್ಯೆಯ ಮೂಲಕ ಹುಡುಕಿ

ವೆಬ್‌ಸೈಟ್‌ನಲ್ಲಿ Search by Mobile ಆಯ್ಕೆ ಲಭ್ಯವಿದ್ದರೆ ಅದನ್ನು ಬಳಸಬಹುದು.

ಅಗತ್ಯವಿರುವಂತಹ ಮೊಬೈಲ್ ವಿವರಗಳನ್ನು ನಮೂದಿಸಿ, ಪರದೆಯ ಮೇಲಿನ ಎಲ್ಲಾ ಸೂಚನೆಗಳನ್ನು ಅನುಸರಿಸಿ. ಈ ವಿಧಾನದಲ್ಲಿ ಮಾಹಿತಿ ಸಿಗದಿದ್ದರೆ EPIC ಸಂಖ್ಯೆ ಅಥವಾ ವೈಯಕ್ತಿಕ ವಿವರಗಳ ಮೂಲಕ ಹುಡುಕಿ.

ಗಮನಿಸಿ: ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ಹುಡುಕುವ ಸೌಲಭ್ಯವು ನೋಂದಾಯಿತ ಮಾಹಿತಿ ಹಾಗೂ ಪೋರ್ಟಲ್‌ನ ಪ್ರಸ್ತುತ ವ್ಯವಸ್ಥೆಯನ್ನು ಅವಲಂಬಿಸಿರಬಹುದು.

ಈ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸಿಕ್ಕಿದರೆ ಮುಂದೆ ಏನು ಮಾಡಬೇಕು?

ಈ ಹುಡುಕಾಟದ ಫಲಿತಾಂಶದಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ ಈ ಕೆಳಗಿನ ವಿವರಗಳನ್ನು ಪರಿಶೀಲಿಸಿ:

  • ನಿಮ್ಮ ಹೆಸರು ಸರಿಯಾಗಿದೆಯೇ?
  • ತಂದೆ ಅಥವಾ ಗಂಡನ ಹೆಸರು ಸರಿಯಾಗಿದೆಯೇ?
  • ನಿಮ್ಮ ವಿಧಾನಸಭಾ ಕ್ಷೇತ್ರ ಸರಿಯಾಗಿದೆಯೇ?
  • ಮತದಾರರ ಗುರುತಿನ ಚೀಟಿ ಸಂಖ್ಯೆ ಸರಿಯಾಗಿದೆಯೇ?
  • ನಿಮ್ಮ ಮತಗಟ್ಟೆಯ ವಿವರಗಳು ಯಾವುವು?

ನಿಮ್ಮ ಹೆಸರು ಹಾಗೂ ಇತರೇ ವಿವರಗಳು ಸರಿಯಾಗಿದ್ದರೆ, ಭವಿಷ್ಯದ ಚುನಾವಣೆಯ ಮೊದಲು ಮತ್ತೊಮ್ಮೆ ಪರಿಶೀಲಿಸಿಕೊಳ್ಳುವುದು ಬಲು ಉತ್ತಮ.

ಮತದಾನಕ್ಕೆ ತೆರಳುವ ಮುನ್ನ ನೀವು ನಿಮ್ಮ ಮತಗಟ್ಟೆಯ ಸ್ಥಳ ಹಾಗೂ ಸಂಬಂಧಪಟ್ಟ ಚುನಾವಣೆಯ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಒಮ್ಮೆ ಖಚಿತಪಡಿಸಿಕೊಳ್ಳಿ.

ಮತದಾರರ ಪಟ್ಟಿಯಲ್ಲಿ ಹೆಸರು ಕಾಣಿಸದಿದ್ದರೆ ಮುಂದೆ ಏನು ಮಾಡಬೇಕು?

ನಿಮ್ಮ ಹೆಸರು ಹುಡುಕಾಟದಲ್ಲಿ ಕಾಣಿಸದಿದ್ದರೆ ತಕ್ಷಣವೇ ನೀವು ನಿಮ್ಮ ಹೆಸರು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ನಿಮಗೆ ನೀವೇ ನಿರ್ಧರಿಸಬೇಡಿ.

ಈ ಹುಡುಕಾಟದಲ್ಲಿ ನಿಮ್ಮ ಹೆಸರು ಕಾಣಿಸದಿರಲು ಹಲವಾರು ಕಾರಣಗಳಿರಬಹುದು:

  • ಹೆಸರಿನ ಕಾಗುಣಿತದಲ್ಲಿ ವ್ಯತ್ಯಾಸವಿರುವುದು.
  • EPIC ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರುವುದು.
  • ತಪ್ಪಾದ ರಾಜ್ಯ ಅಥವಾ ವಿಧಾನಸಭಾ ಕ್ಷೇತ್ರದ ಹೆಸರನ್ನು ಆಯ್ಕೆ ಮಾಡಿರುವುದು.
  • ನಿಮ್ಮ ವಿವರಗಳು ಮತದಾರರ ಪಟ್ಟಿಯಲ್ಲಿ ನವೀಕರಿಸದಿರುವುದು.
  • ನಿಮ್ಮ ಹೆಸರು ಬೇರೆ ಬೇರೆ ಕ್ಷೇತ್ರದ ಪಟ್ಟಿಯಲ್ಲಿ ದಾಖಲಾಗಿರುವುದು.
  • ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ಅಥವಾ ಇತರೇ ಆಡಳಿತಾತ್ಮಕ ಪ್ರಕ್ರಿಯೆಗಳಿಂದಾಗಿ ದಾಖಲೆಗಳಲ್ಲಿ ಬದಲಾವಣೆಗಳಾಗಿರುವುದು.

ನೀವು ಮೊದಲು ನಿಮ್ಮ ಹೆಸರು ಹಾಗೂ ಇತರೇ ವಿವರಗಳನ್ನು ಸರಿಪಡಿಸಿ ಮತ್ತೊಮ್ಮೆ ಹುಡುಕಿ. ಆದರೂ ಸಹ ನಿಮ್ಮ ಹೆಸರು ಸಿಗದಿದ್ದರೆ ಅಧಿಕೃತ ಮತದಾರರ ಸೇವಾ ಪೋರ್ಟಲ್‌ಗೆ ಭೇಟಿ ನೀಡಿ ಅಥವಾ ನಿಮ್ಮ ಪ್ರದೇಶದ BLO (Booth Level Officer) ಅವರನ್ನು ಸಂಪರ್ಕಿಸಿ.

ಹೊಸದಾಗಿ ಮತದಾರರ ಪಟ್ಟಿಗೆ ನಿಮ್ಮ ಹೆಸರನ್ನು ಸೇರಿಸುವುದು ಹೇಗೆ?

ನೀವು ಅರ್ಹರಾಗಿದ್ದು, ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ಹೊಸ ಮತದಾರರ ನೋಂದಣಿಗೆ ಅರ್ಜಿ ಸಲ್ಲಿಸುವ ಅಗತ್ಯವಿರಬಹುದು.

ಇದಕ್ಕಾಗಿಯೇ ಚುನಾವಣಾ ಆಯೋಗದ ಅಧಿಕೃತವಾದ Voters’ Services Portal ಅನ್ನು ಬಳಸಬಹುದು.

ಅಧಿಕೃತ ವೆಬ್‌ಸೈಟ್: ಈ ಹೊಸ ಮತದಾರರ ನೋಂದಣಿ ಹಾಗೂ ಇತರೇ ಸೇವೆಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸರ್ವೆ ಸಾಮಾನ್ಯವಾಗಿ ಮತದಾರರಿಗೆ ಹೊಸದಾಗಿ ನೋಂದಾಯಿಸಿಕೊಳ್ಳಲು Form 6 ಬಳಸಲಾಗುತ್ತದೆ. ಅರ್ಜಿಯನ್ನು ಸಲ್ಲಿಸುವ ಮುನ್ನ ನೀವು ಮೊದಲು ನಿಮ್ಮ ಅರ್ಹತೆ ಹಾಗೂ ಅಗತ್ಯ ದಾಖಲೆಗಳ ಬಗ್ಗೆ ಪೋರ್ಟಲ್‌ನಲ್ಲಿರುವ ಇತ್ತೀಚಿನ ಸೂಚನೆಗಳನ್ನು ಓದಿಕೊಳ್ಳಿ.

ಅರ್ಜಿ ಸಲ್ಲಿಸಿದ ಅನಂತರ ಅದರ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಅರ್ಜಿ ಸಲ್ಲಿಸಿದ ತಕ್ಷಣವೇ ಹೆಸರು ಪಟ್ಟಿಯಲ್ಲಿ ಸೇರುತ್ತದೆ ಎಂದು ಭಾವಿಸಬೇಡಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ.

ಮತದಾರರ ಪಟ್ಟಿಯಲ್ಲಿರುವಂತಹ ವಿವರಗಳನ್ನು ತಿದ್ದುಪಡಿ ಮಾಡುವುದು ಹೇಗೆ?

ನಿಮ್ಮ ಹೆಸರು, ವಿಳಾಸ ಅಥವಾ ಇತರೇ ದಾಖಲೆಗಳಲ್ಲಿ ತಪ್ಪುಗಳಿದ್ದರೆ ಅಥವಾ ಅನ್ವಯಿಸುವ ನಿಯಮಗಳ ಪ್ರಕಾರ ತಿದ್ದುಪಡಿ ಅಗತ್ಯವಿದ್ದರೆ, Form 8 ಮೂಲಕವೇ ನೀವು ಅರ್ಜಿಯನ್ನು ಸಲ್ಲಿಸುವ ಅವಕಾಶವಿದೆ.

Form 8 ಅನ್ನು ಸಾಮಾನ್ಯವಾಗಿ ಈ ಕೆಳಗಿನ ಉದ್ದೇಶಗಳಿಗೆ ಬಳಸಲಾಗುತ್ತದೆ:

  • ಮತದಾರರ ಪಟ್ಟಿಯಲ್ಲಿರುವಂತಹ ವಿವರಗಳ ತಿದ್ದುಪಡಿ.
  • ನಿವಾಸದ ಸ್ಥಳ ಬದಲಾದಾಗ ವಿಳಾಸ ವರ್ಗಾವಣೆ.
  • ಅನ್ವಯಿಸುವ ನಿಯಮಗಳ ಪ್ರಕಾರ ಬದಲಿ ಮತದಾರರ ಗುರುತಿನ ಚೀಟಿ ಪಡೆಯುವುದು.
  • ಸಂಬಂಧಪಟ್ಟ ಅರ್ಹತಾ ವರ್ಗದವರಿಗೆ ಅಂಗವೈಕಲ್ಯ ಗುರುತು ಸೇರಿಸುವುದು.

ಅರ್ಜಿ ಸಲ್ಲಿಸುವ ಮೊದಲು ನೀವು ನಿಮ್ಮ ಪ್ರಕರಣಕ್ಕೆ ಯಾವ ಸೇವೆ ಅನ್ವಯಿಸುತ್ತದೆ ಎಂಬುದನ್ನು ಒಮ್ಮೆ ಅಧಿಕೃತ ಪೋರ್ಟಲ್‌ನಲ್ಲಿ ಖಚಿತಪಡಿಸಿಕೊಳ್ಳಿ.

ಅಧಿಕೃತ ಪೋರ್ಟಲ್: Voters’ Services Portal

ನೀವು ಮತದಾರರ ಪಟ್ಟಿಯನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ಅಲವು ಸಂದರ್ಭಗಳಲ್ಲಿ ನೀವು ನಿಮ್ಮ ಹೆಸರು ಮಾತ್ರ ಹುಡುಕುವುದಕ್ಕಿಂತ ಸಂಪೂರ್ಣವಾಗಿ ಮತದಾರರ ಪಟ್ಟಿಯನ್ನು ಒಮ್ಮೆ ಪರಿಶೀಲಿಸುವುದು ಉಪಯುಕ್ತವಾಗಬಹುದು.

ಇದಕ್ಕಾಗಿ:

  1. ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. Electoral Roll ಅಥವಾ Download Electoral Roll ಆಯ್ಕೆಯನ್ನು ಹುಡುಕಿ.
  3. ನಿಮ್ಮ ರಾಜ್ಯವನ್ನು ಆಯ್ಕೆಮಾಡಿ.
  4. ಪೋರ್ಟಲ್ ಕೇಳುವ ವರ್ಷ, ಜಿಲ್ಲೆ, ವಿಧಾನಸಭಾ ಕ್ಷೇತ್ರ ಅಥವಾ ಮತಗಟ್ಟೆಗೆ ಸಂಬಂಧಿಸಿದ ವಿವರಗಳನ್ನು ಆಯ್ಕೆಮಾಡಿ.
  5. ಲಭ್ಯವಿರುವ ಪಟ್ಟಿಯನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಿ.
  6. PDFನಲ್ಲಿ ನಿಮ್ಮ ಹೆಸರು ಅಥವಾ EPIC ಸಂಖ್ಯೆಯನ್ನು ಹುಡುಕಿ.

ಮತದಾರರ ಪಟ್ಟಿಯನ್ನು ಡೌನ್‌ಲೋಡ್ ಮಾಡಲು:
ಅಧಿಕೃತ Electoral Roll Download ಪುಟಕ್ಕೆ ಭೇಟಿ ನೀಡಿ

ಈ ವೆಬ್‌ಸೈಟ್‌ನ ಆಯ್ಕೆಗಳು ಹಾಗೂ ಲಭ್ಯವಿರುವ ಪಟ್ಟಿಗಳ ವಿವರಗಳು ರಾಜ್ಯ ಮತ್ತು ಪ್ರಸ್ತುತವಾಗಿ ಚುನಾವಣಾ ಪರಿಷ್ಕರಣೆಯ ಪ್ರಕಾರ ಬದಲಾಗಬಹುದು.

ಮತದಾರರ ಸಹಾಯವಾಣಿ ಸಂಖ್ಯೆ

ನೀವು ಮೊದಲು ಆನ್‌ಲೈನ್‌ನಲ್ಲಿ ನಿಮ್ಮ ಹೆಸರು ಹುಡುಕಲು ತೊಂದರೆಯಾದರೆ ಅಥವಾ ಮತದಾರರ ನೋಂದಣಿ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ ಚುನಾವಣಾ ಆಯೋಗದ ಸಹಾಯವಾಣಿಯನ್ನು ಸಂಪರ್ಕಿಸಬಹುದು.

ಮತದಾರರ ಸಹಾಯವಾಣಿ: 1950

ಕರೆ ಮಾಡುವ ಮುನ್ನ ನೀವು ಮೊದಲು ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ STD ಕೋಡ್ ಅಗತ್ಯವಿದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿ. ನಿಮ್ಮ ಹೆಸರು, ನೋಂದಣಿ ಸ್ಥಿತಿ ಅಥವಾ ಮತಗಟ್ಟೆಯ ಕುರಿತು ಮಾಹಿತಿ ಪಡೆಯಲು ಸಹಾಯವಾಣಿಯನ್ನು ಬಳಸಬಹುದು.

ಮತದಾರರ ಪಟ್ಟಿಯನ್ನು ಪರಿಶೀಲಿಸುವಾಗ ನೀವು ಮೊದಲು ಗಮನಿಸಬೇಕಾದ ಪ್ರಮುಖ ಅಂಶಗಳು

  1. ಯಾವಾಗಲೂ ಅಧಿಕೃತವಾದ ಚುನಾವಣಾ ಆಯೋಗದ ವೆಬ್‌ಸೈಟ್ ಬಳಸಿ.
  2. EPIC ಸಂಖ್ಯೆಯನ್ನು ನಮೂದಿಸುವಾಗ ಮೊದಲು ಅಕ್ಷರ ಹಾಗೂ ಸಂಖ್ಯೆಗಳು ಸರಿಯಾಗಿವೆಯೇ ಎಂದು ಒಮ್ಮೆ ನೀವು ಪರಿಶೀಲಿಸಿ.
  3. ನಿಮ್ಮ ಹೆಸರು ಸಿಗದೆ ಹೋದರೆ ಬೇರೆ ಹುಡುಕಾಟ ವಿಧಾನವನ್ನು ಪ್ರಯತ್ನಿಸಿ.
  4. ನಿಮ್ಮ ಹೆಸರು, ಕ್ಷೇತ್ರ ಹಾಗೂ ಮತಗಟ್ಟೆಯ ವಿವರಗಳನ್ನು ಒಮ್ಮೆ ಖಚಿತಪಡಿಸಿಕೊಳ್ಳಿ.
  5. ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ BLO ಅಥವಾ ಸಂಬಂಧಪಟ್ಟ ಚುನಾವಣಾ ನೋಂದಣಾಧಿಕಾರಿಗಳನ್ನು ಒಮ್ಮೆ ಸಂಪರ್ಕಿಸಿ.
  6. ಹೊಸದಾಗಿ ನೋಂದಣಿ ಅಥವಾ ತಿದ್ದುಪಡಿಯ ಅರ್ಜಿಯನ್ನು ಸಲ್ಲಿಸಿದರೆ ಅದರ ಸ್ಥಿತಿಯನ್ನು ನೀವು ಒಮ್ಮೆ ಪರಿಶೀಲಿಸಿ.
  7. ನಿಮ್ಮ OTP, ಪಾಸ್‌ವರ್ಡ್ ಅಥವಾ ಇತರೇ ಗೌಪ್ಯ ಮಾಹಿತಿಯನ್ನು ಅಪರಿಚಿತರೊಂದಿಗೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.

ಪ್ರಮುಖ ಲಿಂಕ್‌ಗಳು

1. ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಲು: https://electoralsearch.eci.gov.in/

2. ಹೊಸ ಮತದಾರರ ನೋಂದಣಿ ಮತ್ತು ತಿದ್ದುಪಡಿ ಸೇವೆಗಳಿಗೆ:
https://voters.eci.gov.in/

3. ಮತದಾರರ ಪಟ್ಟಿಯ PDF ಡೌನ್‌ಲೋಡ್ ಮಾಡಲು:
https://voters.eci.gov.in/download-eroll

4. ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್:
https://www.eci.gov.in/

FAQ – ಪದೇಪದೇ ಕೇಳಲಾಗುವ ಪ್ರಶ್ನೆಗಳು

1. ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇದೆಯೇ ಎಂದು ಎಲ್ಲಿ ಪರಿಶೀಲಿಸಬಹುದು?
ಭಾರತದ ಚುನಾವಣಾ ಆಯೋಗದ ಅಧಿಕೃತ https://electoralsearch.eci.gov.in/ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

2. Voter ID ಸಂಖ್ಯೆ ಇಲ್ಲದೆ ಹೆಸರು ಹುಡುಕಬಹುದೇ?
ಹೌದು. ವೆಬ್‌ಸೈಟ್‌ನಲ್ಲಿ Search by Details ಆಯ್ಕೆ ಲಭ್ಯವಿದ್ದರೆ ನಿಮ್ಮ ವೈಯಕ್ತಿಕ ವಿವರಗಳನ್ನು ಬಳಸಿ ಹುಡುಕಬಹುದು.

3. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ನೀವು ಏನು ಮಾಡಬೇಕು?
ಮೊದಲು ಸರಿಯಾದ ವಿವರಗಳೊಂದಿಗೆ ಮತ್ತೊಮ್ಮೆ ಹುಡುಕಿ. ಹೆಸರು ಸಿಗದಿದ್ದರೆ ಅಧಿಕೃತ ಪೋರ್ಟಲ್ ಮೂಲಕವೆ ನೀವು ನಿಮ್ಮ ನೋಂದಣಿ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯವಿದ್ದರೆ Form 6 ಸಲ್ಲಿಸಿ ಅಥವಾ BLO ಅವರನ್ನು ಸಂಪರ್ಕಿಸಿ.

4. ಹೊಸ ಮತದಾರರ ನೋಂದಣಿಗೆ ನೀವು ಯಾವ ಫಾರ್ಮ್ ಬಳಸಬೇಕು?
ಹೊಸ ಸಾಮಾನ್ಯ ಮತದಾರರ ನೋಂದಣಿಗೆ ಸಾಮಾನ್ಯವಾಗಿ Form 6 ಬಳಸಲಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಪೋರ್ಟಲ್‌ನ ಸೂಚನೆಗಳನ್ನು ಪರಿಶೀಲಿಸಿ.

5. ಮತದಾರರ ಪಟ್ಟಿಯನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಬಹುದೇ?
ಹೌದು. https://voters.eci.gov.in/download-eroll ಮೂಲಕ ಲಭ್ಯವಿರುವ ಮತದಾರರ ಪಟ್ಟಿಯನ್ನು ಡೌನ್‌ಲೋಡ್ ಮಾಡಬಹುದು.

6. ಮತದಾರರ ಸಹಾಯವಾಣಿ ಸಂಖ್ಯೆ ಯಾವುದು?
ಚುನಾವಣಾ ಆಯೋಗದ ಮತದಾರರ ಸಹಾಯವಾಣಿ ಸಂಖ್ಯೆ 1950.

7. Voter ID ಕಾರ್ಡ್ ಇದ್ದರೆ ಮತದಾನ ಮಾಡಬಹುದೇ?
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಬೇಕು. ಮತದಾನದ ವೇಳೆ ಅನ್ವಯಿಸುವ ಗುರುತಿನ ಪರಿಶೀಲನಾ ನಿಯಮಗಳನ್ನು ನೀವು ಸಹ ಪಾಲಿಸಬೇಕು.

ಕೊನೆಯ ಮಾತು

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸುವುದು ಸರಳವಾದರೂ ಅತ್ಯಂತ ಮುಖ್ಯವಾದ ಕಾರ್ಯವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ನಿಮ್ಮ ಹೆಸರು, ಮತದಾರರ ಗುರುತಿನ ಚೀಟಿ ವಿವರಗಳು ಹಾಗೂ ಮತಗಟ್ಟೆಯ ಮಾಹಿತಿಯನ್ನು ಮುಂಚಿತವಾಗಿಯೇ ಒಮ್ಮೆ ಪರಿಶೀಲಿಸಿಕೊಳ್ಳಿ.

ನಿಮ್ಮ ಹೆಸರು ಪಟ್ಟಿಯಲ್ಲಿ ಕಾಣಿಸದಿದ್ದರೆ ಆತಂಕಪಡುವ ಅಗತ್ಯವಿಲ್ಲ ಮತ್ತೊಮ್ಮೆ ಸರಿಯಾದ ವಿವರಗಳೊಂದಿಗೆ ಹುಡುಕಿ. ಆನಂತರವೂ ಮಾಹಿತಿ ಸಿಗದಿದ್ದರೆ ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್ ಅಥವಾ ನಿಮ್ಮ ಪ್ರದೇಶದ ಮತದಾರರ ನೋಂದಣಿ ಅಧಿಕಾರಿಯನ್ನು ಒಮ್ಮೆ ಸಂಪರ್ಕಿಸಿ.

ಈ ಮಾಹಿತಿಯನ್ನು ನಿಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಇತರೇ ಮತದಾರರೊಂದಿಗೆ ಹಂಚಿಕೊಳ್ಳಿ. ಪ್ರತಿಯೊಬ್ಬ ಅರ್ಹ ಮತದಾರರೂ ತಮ್ಮ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಒಮ್ಮೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡಿ.

Voter ID Name Check 2026

👉 CLICK HERE TO MORE INFORMATION DOWNLOAD

WhatsApp Group Join Now
Telegram Group Join Now