ಮಧ್ಯಕಾಲೀನ ಭಾರತ ಮತ್ತು ರಾಜಕೀಯ ( HSTR.GPSTR.TET.SDA.FDA.All Competative exam notes.)

* 12ನೇ ಶತಮಾನದ ಉತ್ತರಾರ್ಧ ಭಾಗದಿಂದ 13ನೇ ಶತಮಾನದ ಮೊದಲ ಭಾಗವನ್ನು ಭಾರತದ ಇತಿಹಾಸದಲ್ಲಿ ಸಂಕ್ರಮಣ ಕಾಲವೆಂದು ಗುರುತಿಸಲಾಗಿದೆ.

* ಸಂಕ್ರಮಣ ವೆಂದರೆ ಯಾವುದೇ ಸಮಾಜ ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಪ್ರವೇಶಿಸಲು ಸಿದ್ಧವಾಗಿರುವುದು ಸೂಚಿಸುತ್ತದೆ.

-: ರಜಪೂತ ಮನೆತನಗಳು:-

* ವರ್ಧನರ ಮನೆತನದ ಆಳ್ವಿಕೆ ನಂತರ ಪಶ್ಚಿಮ ಮತ್ತು ಉತ್ತರ ಭಾರತದ ಬಹು ಭಾಗಗಳನ್ನು ಮಧ್ಯಕಾಲದ ಆರಂಭದವರೆಗೆ ಗುರ್ಜರ ಪ್ರತಿಹಾರರು, ಗುಂದೇಲಖಂಡದ ಚಂದೇಲರು, ಗಹಡ್ವಾಲರು, ಸೋಳಂಕಿಗಳು, ಪರಮಾರರು ಮತ್ತು ಚೌಹಾಣರು ರಜಪೂತ ಕುಲಗಳಿಗೆ ಸೇರಿದ ವಿವಿಧ ಮನೆತನಗಳು ಆಳ್ವಿಕೆ ಮಾಡಿದವು.

* 12ನೆಯ ಶತಮಾನದ ಕೊನೆಗೆ ಉತ್ತರ ಭಾರತದಲ್ಲಿ ರಜಪೂತಮೂಲದ ಪೃಥ್ವಿರಾಜ್ ಚೌಹಾಣ್, ಜಯಚಂದ್ರ ಗಹಡ್ವಾಲ್, ಪರಮರ್ದಿ ದೇವ ಬಾಂದೇಲ ಪ್ರಬಲ ರಾಜರಾಗಿದ್ದರು.

-: ಗುರ್ಜರ ಪ್ರತಿಹಾರರು :-

* ಸ್ಥಾಪಕ – ನಾಗಭಟ್ಟ, ರಾಜಧಾನಿ – ಕನೋಜ್

* ಬಲಶಾಲಿ ಅರಸರು – ಮಿಹರಭೋಜ ಮತ್ತು ಮಹೇಂದ್ರ ಪಾಲ ( ಇವರಿಬ್ಬರೂ ಬಂಗಾಳದ ಪಾಲರನ್ನು ಸೋಲಿಸಿ ಬಂಗಾಳದವರೆಗೂ ಪ್ರತಿವಾರದ ಸಾಮ್ರಾಜ್ಯವನ್ನು ವಿಸ್ತರಿಸಿದ್ದರು.)

* ಅರಬ್ ಪ್ರವಾಸಿಗನಾದ ಸುಲೈಮಾನ ಮಿಹಿರ್ ಭೋಜನ ಆಸ್ಥಾನಕ್ಕೆ ಭೇಟಿ ನೀಡಿ ಆ ಸಾಮ್ರಾಜ್ಯದಲ್ಲಿ ಸುಖ – ಶಾಂತಿಗಳು ನೆಲೆಸಿದ್ದವು ಎಂದು ಪ್ರಶಂಸಿಸಿದ್ದಾನೆ.

  -: ಗಹಡ್ವಾಲರು :-

* ಸ್ಥಾಪಕ – ಚಂದ್ರದೇವ, ರಾಜಧಾನಿ – ವಾರಣಾಸಿ

* ಇನ್ನೊಬ್ಬ ಪ್ರಸಿದ್ಧ ಅರಸ – ಗೋವಿಂದಚಂದ್ರ ( ಇವನು ಪಾಲರನ್ನು ಸೋಲಿಸಿ, ಮಾನವ ಮತ್ತು ಮಗದದವರೆಗೂ ಗಹಡ್ವಾಲರ ಅಧಿಪತ್ಯವನ್ನು ವಿಸ್ತರಿಸಿದನು ಕಳಿಂಗ ಮತ್ತು ಒರಿಸ್ಸಾ ರಾಜರನ್ನು ಪರಭವಗೊಳಿಸಿದನು.

* ಕಾಶ್ಮೀರ, ಗುಜರಾತ್ ಮತ್ತು ಚೋಳ ರಾಜರು ಗೋವಿಂದ ಚಂದ್ರನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

  -: ಪರಮಾರರು :-

* ಸ್ಥಾಪಕ – ಉಪೇಂದ್ರ ಕೃಷ್ಣರಾಜ ( ರಾಷ್ಟ್ರಕೂಟರ ಸಾಮಂತ )

* ಪ್ರಸಿದ್ಧ ಅರಸ – ಎರಡನೇ ಮೂಲ ರಾಜ ( ಎರಡನೇ ಮೂಲ ರಾಜ ಮೊಹಮ್ಮದ್ ಗಜನಿಯನ್ನು ಮೌಂಟ್ ಅಬುವಿನ ಬಳಿ ಸೋಲಿಸಿದ)

* ಖ್ಯಾತ ಪಂಡಿತ – ಹೇಮಚಂದ್ರ ಈತನ ಕೃತಿ ದೇಶಿಮಾಲಾ ( ಪ್ರಾಕೃತ ಭಾಷೆ)

* ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ದಂಡನಾಯಕರಾದ ಉಲುಫ್ ಖಾನ್ ಮತ್ತು ನುಸ್ರತ್ ಖಾನ್ ರು ಕರ್ಣ ದೇವನನ್ನು ಸೋಲಿಸಿ ಸೋಳಂಕಿಯರ ರಾಜ್ಯವನ್ನು ದೆಹಲಿ ಸುಲ್ತಾನರ ಸಾಮ್ರಾಜ್ಯದೊಳಕ್ಕೆ ಸೇರಿಸಿದರು.

   -: ಚಂದೇಲರು :-

* ಪ್ರಸಿದ್ಧ ಅರಸ – ಢಂಗ ಇವನು ಮಹಾರಾಜಾಧಿರಾಜ ಎಂಬ ಬಿರುದನ್ನು ಹೊಂದಿದ್ದ.

* ಬಾಲ ಮತ್ತು ಆಂಧ್ರರನ್ನು ಸೋಲಿಸಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು.

  -: ಚೌಹಾಣರು :-

* ರಜಪೂತ ಮನೆತನಗಳಲ್ಲಿ ಪ್ರಮುಖ ಮನೆತನ.

* ರಾಜಸ್ಥಾನದ ಅಜ್ಮೀರ್ ಪ್ರದೇಶದಲ್ಲಿ ಆಳ್ವಿಕೆ ಆರಂಭ.

* ಪ್ರಸಿದ್ಧ ಅರಸ ಮೂರನೇ ಪೃಥ್ವಿರಾಜ್ ಚೌಹಾನ್

* ಮೂರನೇ ಪೃಥ್ವಿರಾಜ್ ಚೌಹಾಣನ 1191ರಲ್ಲಿ ಮಹಮ್ಮದ್ ಘೋರಿಯನ್ನು ಸೋಲಿಸಿದನು.ಯುದ್ಧವನ್ನು ಮೊದಲನೇ ತರೈನ್ ಯುದ್ಧ ಎಂದು ಕರೆಯುತ್ತಾರೆ.

* ಎರಡನೇ ತರೈನ್ ಯುದ್ಧದಲ್ಲಿ ಮಹಮ್ಮದ್ ಘೋರಿಂದ ಸೋಲನ್ನು ಅನುಭವಿಸಿದನು.

-: ರಜಪೂತರ ಕೊಡುಗೆಗಳು – ಸಾಹಿತ್ಯ :-

* ಜಯದೇವ – ಗೀತ ಗೋವಿಂದ

* ಭಾರವಿಯ – ಕಿರಾತಾರ್ಜುನೀಯ

* ಭರ್ತ್ ಹರಿಯ – ರಾವಣ ವಧಾ

* ಮಹೇಂದ್ರ ಪಾಲನ – ಕಾವ್ಯ ಮೀಮಾಂಸೆ

* ರಾಜಶೇಖರ – ಬಾಲರಾಮಾಯಣ ಮತ್ತು ಕರ್ಪೂರ ಮಂಜರಿ

* ಭವಭೂತಿ – ಮಹಾವೀರ ಚರಿತೆ ಹಾಗೂ ಉತ್ತರ ರಾಮ ಚರಿತೆ

* ಕಲ್ಹಣ – ರಾಜ ತರಂಗಿಣಿ

* ಜಯನಿಕ – ಪೃಥ್ವಿರಾಜ್ ವಿಜಯ

* ಬಲ್ಲಾಳ – ಭೋಜ ಪ್ರಬಂಧ

* ರಜಪೂತ ಅರಸರು ಚಿತ್ರಕಲೆಗೆ ಪ್ರೋತ್ಸಾಹ ನೀಡಿದರು ಇವರ ಚಿತ್ರಕಲಾ ಶೈಲಿಯನ್ನು ರಾಜಸ್ಥಾನಿ ಕಲಾ ಶೈಲಿ ( ಮೇವಾರ, ಬುಕಾನೇರ್,ಜೋಧ್ ಪುರ, ಜೈಸಲ್ಮೇರ್ ಮತ್ತು ಬುನಿ ) ಪಹಾರಿ ಕಲಾಶೈಲಿ ( ಕಸೋಲಿ, ಜಮ್ಮು, ಗರ್ವಾಲ್ ) ಎಂದು ವರ್ಗೀಕರಿಸಲಾಗಿದೆ.

   ಟರ್ಕರ ಆಗಮನ.

* ಟರ್ಕರು ಮಧ್ಯೆ ಏಷ್ಯಾ ಭೂಭಾಗದಲ್ಲಿರುವ ಮಂಗೋಲಿಯಾದಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಅಲೆಮಾರಿ ಬುಡಕಟ್ಟಿಗೆ ಸೇರಿದವರು.

  -: ಮಹಮ್ಮದ್ ಘಜ್ನಿ :-

* ಸಾಮಾನ್ಯ ಶಕ 999ರಲ್ಲಿ ಘಜ್ನಿಯ ಸಿಂಹಾಸನವೇರಿದ ಮಹಮ್ಮದ್ ಟರ್ಕರ ಆಕ್ರಮಣವನ್ನು ಮುಂದುವರಿಸಿ ಭಾರತದ ಮೇಲೆ 17 ಬಾರಿ ದಾಳಿಗಳನ್ನು ಮಾಡಿದನು.

* ಇವನ ದಾಳಿಗೆ ಪ್ರಖ್ಯಾತವಾದ ಗುಜರಾತಿನ ಸೋಮನಾಥ, ಸೌರಾಷ್ಟ್ರದ ದೇವಾಲಯಗಳು ನಾಶವಾದವು.

-: ಮಹಮ್ಮದ್ ಘೋರಿ :-

* ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ಶಾನ್ಸ್ ಬಾನಿ ಮನೆತನಕ್ಕೆ ಸೇರಿದ ಟರ್ಕರ ಸಂತತಿಯೊಂದು ಪ್ರಾಬಲಕ್ಕೆ ಬಂದು ಘಜ್ನಿ ಮನೆತನವನ್ನು ಕೊನೆಗಾಣಿಸಿತು.

* ಇವನು ಚೌಹಾಣರ ಪ್ರಸಿದ್ಧ ಅರಸ ಮೂರನೇ ಪೃಥ್ವಿರಾಜ್ ಚೌಹಾಣ್ ನೊಂದಿಗೆ ಯುದ್ಧ ಮಾಡಿ ಮೊದಲ ತರೈನ್ ಯುದ್ಧದಲ್ಲಿ 1191ರಲ್ಲಿ ಪರಭವಗೊಂಡರು.

* ಆದರೆ ಸಕಲ ಸಿದ್ಧತೆಗಳೊಂದಿಗೆ ಬಂದು 1192ನೇ ತರೈನ್ ಯುದ್ಧದಲ್ಲಿ ಪೃಥ್ವಿರಾಜ್ ಚೌಹಾಣನನ್ನು ಸೋಲಿಸಿದನು ಈ ಸಂದರ್ಭದಲ್ಲಿ ರಜಭೂತರಿಗೆ ಜಯವನ್ನು ತಂದು ಕೊಟ್ಟಿದ್ದ ಗೋವಿಂದರಾಯ ಮತ್ತು ಬೋಲಾ ಇಬ್ಬರು ಕೊಲ್ಲಲ್ಪಟ್ಟರು.

WhatsApp Group Join Now
Telegram Group Join Now