-: ಮೊಘಲರು ( ಸಾ.ಶ 1526-1707):-
ದೆಹಲಿಯ ಸುಲ್ತಾನರ ಆಡಳಿತ ದುರ್ಬಲಗೊಂಡಗ ಬಾಬರನು ಸಾ.ಶ 1526 ರಲ್ಲಿ ಮೊಘಲ್ ಸಾಮ್ರಾಜ್ಯವನ್ನು ಆರಂಭಿಸಿದನು.
ಬಾಬರ್(ಸಾಮಾನ್ಯ ಶಕ 1526-1530).
* ಮೊಘಲ್ ರಾಜ್ಯ ವಂಶದ ಸ್ಥಾಪಕ.
* ಕಾಬೂಲ್ ನಲ್ಲಿ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಿದ್ದರಿಂದ ಇವನನ್ನು ಉದ್ಯಾನವನಗಳ ರಾಜ ಎನ್ನುವರು.
* ಬಾಬರ್ ನ ಆತ್ಮಚರಿತ್ರೆ – ಬಾಬರ್ ನಾಮ/ ತುಝಕ- ಇ-ಬಾಬರಿ ಎಂಬ ಕೃತಿಯನ್ನು ತುರ್ಕಿ ಭಾಷೆಯಲ್ಲಿ ಬರೆದನು. ಈ ಗ್ರಂಥದಲ್ಲಿ ರಾಜಕೀಯ ಸಂಘಟನೆ ಅಲ್ಲದೆ ವಿವಿಧ ನಾಡುಗಳ ಪ್ರಾಕೃತಿಕ ಸ್ವರೂಪ, ಸೌಂದರ್ಯ,ಪ್ರಾಣಿಸಂಕುಲ, ಸಸ್ಯವರ್ಗ, ಪಕ್ಷಿ, ತೋಟಗಳ ಬಗ್ಗೆ ವರ್ಣಿಸಲಾಗಿದೆ.
-: ಭಾಷಾಂತರ :-
1. ಅಬ್ದುಲ್ ರಹೀಮ್ ಖಾನ್- ಪರ್ಷಿಯನ್
2. ಶ್ರೀ ಮತಿ. ಎ.ಎಸ್. ಬ್ರಿವರಿಡ್ಜ್ – ಇಂಗ್ಲಿಷ್
-: ಭಾರತದ ಮೇಲಿನ ಐತಿಹಾಸಿಕ ದಾಳಿಗಳು :-
1. ಮೊದಲ ಪಾಣಿಪತ್ ಕದನ(ಸಾಮಾನ್ಯ ಶಕ 1526).
ದೆಹಲಿಯನ್ನು ಆಳುತ್ತಿದ್ದ ಇಬ್ರಾಹಿಂ ಲೋಧಿ ಹಾಗೂ ಬಾಬರ್ ನ ಮಧ್ಯ ಪಾಣಿಪತ್ ಎಂಬಲ್ಲಿ ಯುದ್ಧ ಜರುಗಿ ಬಾಬರ್ ನು ಜಯಶಾಲಿಯಾದನು.
2. ಕಣ್ವ ಕದನ( ಸಾಮಾನ್ಯ ಶಕ 1527 ಮಾರ್ಚ್ 16).
ರಜಪೂತ ದೊರೆ ರಾಣಾ ಸಂಗ ಮತ್ತು ಬಾಬರ್ ನ ಮಧ್ಯ ಯುದ್ಧ ಜರುಗಿ ಬಾಬಾರನ ಜಯಶಾಲಿಯಾದನು.
3. ಚಂದೇರಿ ಕದನ ( ಸಾಮಾನ್ಯ ಶಕ 1528).
4. ಗೋಗ್ರ ಕದನ (ಸಾಮಾನ್ಯ ಶಕ 1529).
-: ಹುಮಾಯೂನ್( ಸಾಮಾನ್ಯ ಶಕ 1530-1540,1555-1556).:-
* ಹುಮಾಯೂನ್ ಎಂದರೆ ಅದೃಷ್ಟವಂತ.
* ಈತ ಎರಡು ಅವಧಿಗಳಲ್ಲಿ ದೆಹಲಿ ಸಿಂಹಾಸವನ್ನು ಆಳಿದ ಏಕೈಕ ಭಾರತದ ಚಕ್ರವರ್ತಿ.
* ಚೌಸಾ ಕದನ 1539 ಶೇರ್ ಷಾ ಹುಮಾಯೂನನನ್ನು ಸೋಲಿಸಿದನು.
* ಕನೋಜ್ ಕದನ 1540, ಶೇರ್ ಷಾ ನಿಂದ ಸೋತ ಹುಮಾಯೂನ್ ಪಲಾಯನ ಮಾಡಿದರು.
* ಇವನ ಸಹೋದರಿ ಗುಲ್ಬದನ್ ಬೇಗಮ್ ರಚಿಸಿರುವ ಕೃತಿ ಹುಮಾಯೂನ್ ನಾಮಾ.
-: ಶೇರ್ ಷಾ ( ಕ್ರಿ.ಶ 1540-1545):-
* ಇವನ ಬಾಲ್ಯದ ಹೆಸರು ಫರೀದ್.
* ಸೂರ್ ಸಂತತಿಯ ಸ್ಥಾಪಕ.
* ಬಹರ್ ಖಾನ್ ಸುಲ್ತಾನನೊಂದಿಗೆ ಬೇಟೆಗೆ ಹೋದಾಗ ಒಬ್ಬನೇ ಹುಲಿಯನ್ನು ಕೊಂದದ್ದರಿಂದ ಶೇರ್ ಖಾನ್ ಎಂಬ ಬಿರುದು ಪಡೆದುಕೊಂಡನು.
ದಿಗ್ವಿಜಯಗಳು.
* ಸಾಮಾನ್ಯ ಶಕ 1534 ಸುರಜಘರ್ ಕದನದಲ್ಲಿ ಬಂಗಾಳದ ಮಹಮದ್ ಷಾ ಮತ್ತು ಬಿಹಾರದ ಲೋಹಾನಿ ನೋಬಲರನ್ನು ಸೋಲಿಸಿದನು.
* ಸಾಮಾನ್ಯ ಶಕ 1539 ರಲ್ಲಿ ಚೌಸಾ ಕದನದಲ್ಲಿ ಹುಮಾಯೂನ್ನನ್ನು ಸೋಲಿಸಿದನು.
* ಸಾಮಾನ್ಯ ಶಕ 1540 ರಲ್ಲಿ ನಡೆದ ಕನೋಜ ಅಥವಾ ಬಿಲ್ಗಾಂ ಕದನದಲ್ಲಿ ಹುಮಾಯೂನ್ ನನ್ನ ಸೋಲಿಸಿ ಶೇರ್ ಷಾ ಎಂಬ ಬಿರುದಿನೊಂದಿಗೆ ದೆಹಲಿಯಲ್ಲಿ ಅಧಿಕಾರಕ್ಕೆ ಬಂದನು. ತನ್ನ ಹೆಸರಿನಲ್ಲಿ ನಾಣ್ಯ ಟಂಕಿಸಿದನು.
-: ಶೇರ್ ಷಾ ನ ಆಡಳಿತ ಸುಧಾರಣೆ :-
* ಇವನನ್ನು ಅಕ್ಬರ್ ನ ಮುನ್ಸೂಚಕ ಎಂದು ಕರೆಯುತ್ತಾರೆ.
* ತನ್ನ ಸಾಮ್ರಾಜ್ಯವನ್ನು 47 ಸರ್ಕಾರ( ಜಿಲ್ಲೆ) ಗಳನ್ನಾಗಿ ವಿಂಗಡಿಸಲಾಗಿತ್ತು.
ಭೂ ಕಂದಾಯ ನೀತಿ.
* ಭೂಮಿಯನ್ನು ಪೋಲಜ್ ಅಂದರೆ ಉತ್ತಮ, ಚಚ್ಚಾರ್ ಅಂದರೆ ಮಧ್ಯಮ, ಬಂಜರ್ ಎಂದರೆ ಕನಿಷ್ಠ ಎಂದು ಮೂರು ವಿಭಾಗ ಮಾಡಿದನು.
* ಜಾರಿಬ್ ಎಂಬ ಭೂಮಿಯ ಅಳತೆ ಮಾಪನವನ್ನು ಜಾರಿಗೆ ತಂದನು.
ನಾಣ್ಯ ಸುಧಾರಣೆ.
* ದಾಮ್ ಎಂಬ ಬೆಳ್ಳಿಯ ರೂಪಾಯಿ ನಾಣ್ಯವನ್ನು ಪರಿಚಯಿಸಿದನು.
ಸಾರಿಗೆ ಸಂಪರ್ಕ ವ್ಯವಸ್ಥೆ.
* ಸಿಂಧೂ ನದಿಯಿಂದ ಬಂಗಾಳದ ಸೋನಾರ್ ಗಾಂವ್ ರವರಿಗೆ ಹೆದ್ದಾರಿ ನಿರ್ಮಿಸಿದನು. ಇದನ್ನು ಗ್ರಾಂಡ್ ಟ್ರಂಕ್ ರೋಡ್ ಅಥವಾ ಸಡಕ್ – ಈ- ಅಜುಂ ಎನ್ನುವರು.
* ಇವನ ದಂಡ ನಾಯಕ ಹೇಮು.
* ಈ ಮನೆತನದ ಕೊನೆಯ ದೊರೆ ಆದಿಲ್ ಷಾ ಸೂರಿಯನ್ನು ಹುಮಾಯೂನ್ ಸೋಲಿಸಿದನು.
-: ಅಕ್ಬರ್ ಮಹಾಶಯ ( ಸಾಮಾನ್ಯ ಶಕ 1556-1605):-
* ಇವನು ಸಾಮಾನ್ಯ ಶಕ 1542 ಸಿಂದನ ಅಮರಕೋಟೆಯಲ್ಲಿ ಜನಿಸಿದನು. ಮೊದಲ ಹೆಸರು ಜಲಾಲುದ್ದೀನ್ ಮಹಮ್ಮದ್, ತಂದೆ ಹುಮಾಯುನ್ ಮತ್ತು ತಾಯಿ ಹಮೀದಾ ಬಾನು ಬೇಗಂ.
* ಇವನ ಗುರು ಅಬ್ದುಲ್ ಲತಿಫ್, ಇವನ ಬಾಲ್ಯದ ಗೆಳೆಯ ಅಬ್ದುಲ್ ಫಜಲ್.
* ಇವನು ಅಧಿಕಾರಕ್ಕೆ ಬಂದಾಗ ಅವನಿಗೆ 14 ವರ್ಷ.
ಅಕ್ಬರ್ ದಿಗ್ವಿಜಯಗಳು.
ಎರಡನೇ ಪಾಣಿಪತ್ ಕದನ ಸಾಮಾನ್ಯ ಶಕ 1556.
ಈ ಕದನದಲ್ಲಿ ಮಧ್ಯಕಾಲೀನ ಭಾರತದಲ್ಲಿ ದೆಹಲಿಯನ್ನಾಳಿದ ಕೊನೆಯ ಹಿಂದೂ ಸಾಮ್ರಾಟ ಹೇಮು ನನ್ನು ಕೊಂದನು.
* ಸಾಮಾನ್ಯ ಶಕ 1564 ರಲ್ಲಿ ಗೊಂಡ್ವಾನದ ಮೇಲೆ ಆಕ್ರಮಣ ಈ ಗೆಲುವಿನ ಸ್ಮರಣಾರ್ಥಕ ಪತೇಪುರ್ ಸಿಕ್ರಿಯಲ್ಲಿ ಬುಲಂದರ್ ದರ್ವಾಜ್ ಕಟ್ಟಡವನ್ನು ನಿರ್ಮಿಸಿದನು. ಇದನ್ನು ಭಾರತದ ಅತ್ಯಂತ ದೊಡ್ಡ ಬಾಗಿಲು ಎಂದು ಕರೆಯುವರು. ಈ ಕಟ್ಟಡದ ಮೇಲೆ ಜಗತ್ತು ಒಂದು ಸೇತುವೆ ಅದನ್ನು ನೀನು ಮೊದಲು ದಾಟು ಎಂದು ಕೆತ್ತಲಾಗಿದೆ.
ಹಲ್ದಿಘಾಟ್ ಕದನ.
ಸಾಮಾನ್ಯ ಶಕ 1576 ಜೂನ್ 18 ರಲ್ಲಿ ಇವನ ದಂಡ ನಾಯಕ ಮಾನಸಿಂಗ ನು ರಾಣಾ ಪ್ರತಾಪಸಿಂಗನನ್ನು ಹಲ್ದಿ ಘಾಟ್ ಕದನದಲ್ಲಿ ಸೋಲಿಸಿದನು.
ದಖನ್ ನೀತಿ.
ಸಾಮಾನ್ಯ ಶಕ 1595 ರಲ್ಲಿ ಅಹಮದ್ ನಗರದ ಮೇಲೆ ಆಕ್ರಮಣ ಮಾಡಿ ರಾಣಿ ಚಾಂದ್ ಬಿಬಿಯನ್ನು ಸೋಲಿಸಿದನು.
ಅಕ್ಬರನ ಆಡಳಿತ ಸುಧಾರಣೆ.
ಮನ್ಸಬ್ದಾರಿ ಪದ್ಧತಿ.
ಅಕ್ಬರ್ ನು ಸೈನಿಕ ಮತ್ತು ನಾಗರಿಕ ಆಡಳಿತದಲ್ಲಿ ಮನ್ಸಬ್ದಾರಿ ಎಂಬ ಹೊಸ ಪದ್ದತಿಯನ್ನು ಜಾರಿಗೊಳಿಸಿದ. ಮನ್ಸಬ್ ಎಂದರೆ ಶ್ರೇಣಿ ಅಥವಾ ಸ್ಥಾನ ಎಂದರ್ಥ. ಇದು ನಸಬ್ಕರ್ದನ್ ಎಂಬ ಪರ್ಶಿಯನ್ ಪರಿಕಲ್ಪನೆಯಿಂದ ಉಗಮವಾಗಿದೆ. ನಿರ್ದಿಷ್ಟ ವ್ಯಕ್ತಿ ಒಬ್ಬನನ್ನು ನಿರ್ದಿಷ್ಟ ಸ್ಥಾನದಲ್ಲಿ ನೆಲೆಗೊಳಿಸುವುದು ಎಂಬುದು ಇದರ ಅರ್ಥವಾಗಿದೆ.
ರಾಜ ತೋದರ ಮಲ್ಲ ಕಂದಾಯ ಪದ್ಧತಿ.
ಸಾಮಾನ್ಯ ಶಕ 1581 ರಲ್ಲಿ ಅಕ್ಬರನ ಕಂದಾಯ ಮಂತ್ರಿ ರಾಜ ತೋದರ ಮಲ್ಲ ಭೂ ಕಂದಾಯ ಪದ್ಧತಿಯನ್ನು ಸಂಪೂರ್ಣವಾಗಿ ಪುನರ್ ಸಂಘಟಿಸಿದ ಪುನರ್ ಸಂಘಟಿಸಿದರು.
ಅಕ್ಬರನ ಧಾರ್ಮಿಕ ನೀತಿ.
ಅಕ್ಬರನು ಧರ್ಮ ಸಹಿಷ್ಣುತೆ ಹೊಂದಿದ್ದು ಸಾಮಾನ್ಯ ಶಕ 1581-82 ರಲ್ಲಿ din-e-ilahi ಅಥವಾ ದೈವದತ್ತ ಧರ್ಮ/ ತೌದಿದ್ ಇ ಇಲಾಹಿ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದನು.
ಸಾಹಿತ್ಯ ಪೋಷಣೆ.
* ಅಬ್ದುಲ್ ಫಝಲ್ – ಅಕ್ಬರ್ ನಾಮ ಮತ್ತು ಐನ್ ಈ ಅಕ್ಬರಿ
* ಬದೌನಿ – ಮುಂತಕಾಬ್ ಉಲ್ ತಯಾರಿಕ್
ಅಕ್ಬರನ ನವರತ್ನಗಳು.
ಅಬ್ದುಲ್ ರಹೀಂ, ಅಬ್ದುಲ್ ಫಝಲ್, ಬೀರಬಲ್, ಫೈಜಿ, ಹಮೀದ್ ಹುಮನ್, ರಾಜಮಾನ್ ಸಿಂಗ್, ಶೇಕ್ ಮುಬಾರಕ್, ತಾನ್ ಸೇನ್, ತೋದರ ಮಲ್ಲ.
ಕಲೆ ಮತ್ತು ವಾಸ್ತು ಶಿಲ್ಪ.
* ಬುಲಂದರ್ ದರ್ವಾಜ್, ಸಲೀಂ ಚಿಸ್ತಿಯ ಗೋರಿ, ಪಂಚ ಮಹಲ್ ಮತ್ತು ಜೋದಾಬಾಯಿ ಅರಮನೆಗಳು.
* ದಿವಾನ್-ಇ-ಆಮ್, ದಿವಾನ್-ಇ-ಖಾಸ್, ಆಗ್ರಾ ಕೋಟೆ ಮುಂತಾದ ಪ್ರಮುಖ ಕಟ್ಟಡಗಳು.
-: ಜಹಾಂಗೀರ್ ( ಸಾಮಾನ್ಯ ಶಕ 1605-1627):-
* ಜಹಾಂಗೀರನು 5ನೇ ಸಿಖ್ ಗುರು ಅರ್ಜುನ ದೇವನನ್ನು ಕೊಲೆ ಮಾಡಿದನು.
* ಇವನ ಆಳ್ವಿಕೆಯ ಕಾಲದಲ್ಲಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ವ್ಯಾಪಾರದ ಸವಲತ್ತುಗಳನ್ನು ಪಡೆಯಲು ಕ್ಯಾಪ್ಟನ್ ವಿಲಿಯಂ ಹಾಕಿನ್ಸ್ ಮತ್ತು ಸರ್ ಥಾಮಸ್ ರೋ ಎಂಬ ರಾಯಭಾರಿಗಳನ್ನು ಜಹಾಂಗೀರ್ ನ ಆಸ್ಥಾನಕ್ಕೆ ಕಳುಹಿಸಿತು. ಸರ್ ಥಾಮಸ್ ರೋ ಜಹಾಂಗೀರನಿಂದ ಸೂರತ್ ನಲ್ಲಿ ವ್ಯಾಪಾರದ ಕೋಟೆಯನ್ನು ಆರಂಭಿಸಲು ಅನುಮತಿಯನ್ನು ಪಡೆದನು.
* ಜಹಾಂಗೀರನು ಚಿತ್ರಕಲೆಗೆ ಉದಾರ ಪ್ರೋತ್ಸಾಹ ನೀಡಿದನು.
* ಇವನನ್ನು ಹುತಾತ್ಮ ಸಂತ ಎಂದು ಕರೆಯುತ್ತಾರೆ.
-: ಷಹಜಹಾನ್ ( ಸಾಮಾನ್ಯ ಶಕ 1627-1658):-
* ಷಹಜಹಾನ್ ಎಂದರೆ ಜಗತ್ತಿನ ಸಾರ್ವಭೌಮ ಎಂದರ್ಥ.
* ಇವನ ಕಾಲವನ್ನು ವಾಸ್ತುಶಿಲ್ಪ ಯುಗದ ಸುವರ್ಣ ಯುಗ ಎನ್ನುವರು.
* ಇವನ ಕಾಲದಲ್ಲಿ ಮಯೂರ ಸಿಂಹಾಸನ ನಿರ್ಮಾಣವಾಯಿತು.
ಇವನ ಕಾಲದಲ್ಲಿ ನಿರ್ಮಾಣವಾದ ಪ್ರಮುಖ ಕಟ್ಟಡಗಳು.
* ತಾಜ್ ಮಹಲ್, ಇದರ ಪ್ರಧಾನ ಶಿಲ್ಪಿ ಉಸ್ತಾದ್ ಇಸಾ, ದೆಹಲಿಯ ಕೆಂಪುಕೋಟೆ, ಆಗ್ರಾ ಕಟ್ಟಡಗಳು.
-: ಔರಂಗಜೇಬ ( ಸಾಮಾನ್ಯ ಶಕ 1658-1707):-
* ಅಲಂಗಿರ್ ಎಂಬ ಬಿರುದನ್ನು ಸ್ವೀಕರಿಸಿದನು.
* ಇವನನ್ನು ಜೀವಂತ ಫಕೀರ ಎಂದು ಕರೆಯಲಾಗುತ್ತದೆ.
* 9ನೇ ಸಿಖ್ ಗುರು ತೇಜ ಬಹದ್ದೂರನನ್ನು ಕೊಲೆ ಮಾಡಿದನು.