-: ವಿವಿಧ ಭೂ-ಬಳಕೆಯ ಶೇಖಡಾ ಪ್ರಮಾಣ :-
* 58.1% -> ಸಾಗುವಳಿ ಭೂಮಿ
* 9.5% -> ಅರಣ್ಯ ಪ್ರದೇಶ
* 7.2% -> ಸಾಗುವಳಿಗೆ ಲಭ್ಯವಿಲ್ಲದ ಭೂಮಿ
* 10.2 % -> ಸಾಗುವಳಿ ಮಾಡದ ಇತರ ಭೂಮಿ
* 14.5% -> ಬೀಳು ಭೂಮಿ
ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಉತ್ತಮ ಸ್ಥಾನದಲ್ಲಿದ್ದು,ಒಟ್ಟು 19.05 ಲಕ್ಷ ಹೆಕ್ಟರ್ ಭೌಗೋಳಿಕ ಪ್ರದೇಶವನ್ನು ಹೊಂದಿದೆ.
-: ಕರ್ನಾಟಕ ಭೂ ಬಳಕೆಯ ಮಾದರಿಗಳು :-
1) ನಿವ್ವಳ ಸಾಗುವಳಿ ಭೂಮಿ (58.1%):-
* ಕಲ್ಬುರ್ಗಿ ಜಿಲ್ಲೆಯು ಕರ್ನಾಟಕದಲ್ಲಿಯೇ ಅತೀ ಹೆಚ್ಚು ಸಾಗುವಳಿ ಭೂಮಿಯನ್ನು ಹೊಂದಿದೆ. ನಂತರದ ಸ್ಥಾನದಲ್ಲಿ.ಬೆಳಗಾವಿ, ವಿಜಯಪುರ, ತುಮಕೂರು, ರಾಯಚೂರು, ಬಾಗಲಕೋಟೆ
* ತೀವ್ರ ನಗರಿಕರಣದಿಂದ ಬೆಂಗಳೂರು ಜಿಲ್ಲೆ ಕನಿಷ್ಠ ಸಾಗುವಳಿ ಭೂಮಿಯನ್ನು ಹೊಂದಿದೆ.
2) ಅರಣ್ಯ ಪ್ರದೇಶ(14.5%):-
* ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದ ಜಿಲ್ಲೆ ಉತ್ತರ ಕನ್ನಡ ನಂತರದಲ್ಲಿ ಶಿವಮೊಗ್ಗ,ಚಾಮರಾಜನಗರ, ಚಿಕ್ಕಮಂಗಳೂರು, ಕೊಡಗು, ಬೆಳಗಾವಿ ಮುಂತಾದವು.
*ವಿಜಯಪುರ ಜಿಲ್ಲೆಯು ಅತಿ ಕನಿಷ್ಠ ಅರಣ್ಯ ಪ್ರದೇಶವನ್ನು ಹೊಂದಿದೆ ನಂತರದಲ್ಲಿ ಕೊಪ್ಪಳ ಮತ್ತು ರಾಯಚೂರು.
3) ಸಾಗುವಳಿ ಲಭ್ಯವಿಲ್ಲದ ಭೂಮಿ (10.2%):-
* ಈ ಭೂಮಿಯು ರೈಲು ಮಾರ್ಗ,ರಸ್ತೆ ಮಾರ್ಗ, ವಸತಿ, ಕೈಗಾರಿಕೆ ಮುಂತಾದವುಗಳಿಗೆ ಬಳಕೆಯಾಗಿರುತ್ತದೆ.
* ಇಂತಹ ಭೂಮಿ ಬೆಂಗಳೂರು ನಗರದಲ್ಲಿ ಜಾಸ್ತಿ ಇದೆ.
* ಬೀದರ್ ಜಿಲ್ಲೆಯಲ್ಲಿ ಅತಿ ಕಡಿಮೆ ಇದೆ.
4) ಸಾಗುವಳಿ ಮಾಡದ ಇತರೆ ಭೂಮಿ (7.2%):-
* ಇದರಲ್ಲಿ ಕಾಯಂ ಗೋಮಾಳ ವೃಕ್ಷ ಮತ್ತು ತೋಪುಗಳು ಸೇರುತ್ತವೆ.
* ಇಂತಹ ಭೂಮಿ ಗದಗ,ಬಾಗಲಕೋಟೆ, ಧಾರವಾಡಗಳಲ್ಲಿ ಕಡಿಮೆ ಇದೆ.
5) ಬೀಳು ಭೂಮಿ(9.5%):-
* 2/3 ವರ್ಷಗಳಿಗಿಂತ ಹೆಚ್ಚು ಅವಧಿಯವರೆಗೆ ನಿರಂತರವಾಗಿ ಸಾಗುವಳಿಯಾಗದ ಭೂಮಿ.
* ಕಲ್ಬುರ್ಗಿ ಜಿಲ್ಲೆ ಅಧಿಕ ಬೀಳು ಭೂಮಿಯನ್ನು ಹೊಂದಿದೆ.
-: ವ್ಯವಸಾಯ :-
ಭೂಮಿಯನ್ನು ಉಳಿಮೆ ಮಾಡಿ ಬೆಳೆಯುವುದನ್ನು ವ್ಯವಸಾಯ ಎಂದು ಕರೆಯುವರು, ಕರ್ನಾಟಕದ ಶೇಕಡಾ 61.4% ಭಾಗದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವುದರಿಂದ ಅವರು ವ್ಯವಸಾಯವನ್ನೇ ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ ವ್ಯವಸಾಯವು ನಮ್ಮ ರಾಜ್ಯದ ಆದಾಯದ ಮೂಲವಾಗಿದ್ದು, ಆರ್ಥಿಕತೆಯ ಬೆನ್ನೆಲುಬು ಆಗಿದೆ.ಆರ್ಥಿಕ ಅಭಿವೃದ್ಧಿಯು ವ್ಯವಸಾಯವನ್ನು ಆಧರಿಸಿದೆ.
-: ವ್ಯವಸಾಯದ ವಿಧಗಳು :-
1) ನೀರಾವರಿ ಬೇಸಾಯ
2) ಒಣ /ಶುಷ್ಕ ಬೇಸಾಯ
3) ನೆಡು ತೋಟದ ಬೇಸಾಯ
4) ವಾಣಿಜ್ಯ ಬೇಸಾಯ
5) ಜೀವನಾಧಾರ ಬೇಸಾಯ
6) ಮಿಶ್ರ ಬೇಸಾಯ
-: ಕರ್ನಾಟಕದ ಪ್ರಮುಖ ಬೆಳೆಗಳು :-
1) ಭತ್ತ :-
* ಇದು ಕರ್ನಾಟಕದ ಅತ್ಯಂತ ಪ್ರಮುಖ ಬೆಳೆಯಾಗಿದೆ ಒಟ್ಟು ಸಾಗುವಳಿ ಪ್ರದೇಶದಲ್ಲಿ ಶೇಕಡ 28.2% ಭಾಗದಲ್ಲಿ ಬೆಳೆಯಲಾಗುತ್ತದೆ.
* ಭತ್ತವು ಹುಲ್ಲಿನ ವರ್ಗದ ಸಸ್ಯ ಇದರ ವೈಜ್ಞಾನಿಕ ಹೆಸರು ಒರೈಸಾ ಸಟೈವಾ
* ಇದೊಂದು ಉಷ್ಣವಲಯದ ಬೆಳೆಯಾಗಿದೆ ಇದಕ್ಕೆ ಸಮತಟ್ಟಾದ ನೆಲ ಜೇಡಿಮಿಶ್ರಿತ ಮಣ್ಣು ಹಾಗೂ ಮೆಕ್ಕಲು ಮಣ್ಣು ಈ ಬೆಳೆಗೆ ಸೂಕ್ತವಾಗಿದೆ.
* ಸುಮಾರು ಶೇಕಡ 70% ಬೆಳೆಯನ್ನು ಜೂನ್ ನಿಂದ ಆಗಸ್ಟ್ ನಲ್ಲಿ ನಾಟಿ ಮಾಡಿ ನಾಟಿ ಮಾಡಿ ನವಂಬರ್ ಮತ್ತು ಡಿಸೆಂಬರ್ ನಲ್ಲಿ ಕಟಾವು ಮಾಡಲಾಗುವುದು ಇದನ್ನು “ಹೈನು ಬೆಳೆ” ಎನ್ನುವರು.
* ಬೇಸಿಗೆಯಲ್ಲಿ ನೀರು ಸೌಲಭ್ಯವಿರುವವರು ಭತ್ತ ಬೆಳೆಯುತ್ತಾರೆ.( ಫೆಬ್ರವರಿ ಯಿಂದ ಜೂನ್) ಇದನ್ನು” ಕಾರು ಬೆಳೆ” ಎನ್ನುವರು.
* ರಾಯಚೂರು ಜಿಲ್ಲೆಯು ಭತ್ತದ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ನಂತರದಲ್ಲಿ ದಾವಣಗೆರೆ ಮೈಸೂರು ಶಿವಮೊಗ್ಗ.
* ಕೃಷ್ಣ,ಕಾವೇರಿ, ತುಂಗಭದ್ರಾ ನದಿ ಕಣಿವೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ.
2) ಜೋಳ :-
* ಒಟ್ಟು ಸಾಗುವಳಿ ಶೇಕಡ 26% ರಷ್ಟು ಜೋಳದ ಬೆಳೆಗೆ ಭೂಮಿ ಬಳಕೆಯಾಗುತ್ತದೆ.
* ಭತ್ತದ ನಂತರ ಜೋಳ ಕರ್ನಾಟಕದ ಎರಡನೇ ಪ್ರಮುಖ ಬೆಳೆಯಾಗಿದೆ.
* ಕರ್ನಾಟಕ ಜೋಳದ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ ಮೊದಲನೇ ಸ್ಥಾನದಲ್ಲಿ ಮಹಾರಾಷ್ಟ್ರ.
* ಇದಕ್ಕೆ ಸೂಕ್ತ ಮಣ್ಣು ಕಪ್ಪು ಮಣ್ಣು,ಕೆಂಪು ಮಣ್ಣು ಮತ್ತು ಮೆಕ್ಕಲು ಮಿಶ್ರಿತ ಮಣ್ಣು.
* ವಿಜಯಪುರ ಜಿಲ್ಲೆ ಕರ್ನಾಟಕದಲ್ಲಿ ಜೋಳ ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ.
* ಉತ್ತರ ಕರ್ನಾಟಕದಲ್ಲಿ ಜೋಳ ಬೆಳೆಯುತ್ತಾರೆ.
3) ರಾಗಿ :-
* ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಆಹಾರ ಧಾನ್ಯವಾಗಿದೆ.
* ಇದು ಕೆಂಪು ಮತ್ತು ಮೆಕ್ಕಲು ಮಿಶ್ರಿತ ಮಣ್ಣಿನಲ್ಲಿ ಬೆಳೆಯುತ್ತಾರೆ.
* ರಾಗಿ ಉತ್ಪಾದನೆಯಲ್ಲಿ,ಭಾರತದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ.
* ಒಟ್ಟು ಸಾಗುವಳಿಯ ಭೂಮಿಯಲ್ಲಿ ಶೇಕಡಾ 14% ಭಾಗದಲ್ಲಿ ಬೆಳೆಯಲಾಗುತ್ತಿದೆ.
* ಮೈಸೂರು ಪ್ರಾಂತ್ಯದ ಸಾಂಪ್ರದಾಯಿಕ ಬೆಳೆ.ದಕ್ಷಿಣ ಕರ್ನಾಟಕದಲ್ಲಿ ರಾಗಿಯೆ ಪ್ರಧಾನ .
* ಕರ್ನಾಟಕದಲ್ಲಿ ತುಮಕೂರು ಅತಿ ಹೆಚ್ಚಾಗಿ ರಾಗಿ ಬೆಳೆಯುವ ಜಿಲ್ಲೆ ನಂತರದಲ್ಲಿ ರಾಮನಗರ.
-: ವಾಣಿಜ್ಯ ಬೆಳೆಗಳು:-
1) ಕಬ್ಬು :-
* ಇದು ಕರ್ನಾಟಕದ ಪ್ರಮುಖ ವಾಣಿಜ್ಯ ಹಾಗೂ ಕೈಗಾರಿಕಾ ಬೆಳೆಯಾಗಿದೆ.
* ಕರ್ನಾಟಕ ಕಬ್ಬು ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
* ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ ಬೆಳಗಾವಿ ಎರಡನೇ ಸ್ಥಾನ ಬಾಗಲಕೋಟೆ.
* ಸ್ವಾತಂತ್ರ್ಯ ಪೂರ್ವದಿಂದಲೂ ಕಬ್ಬು ಬೆಳೆಯಲ್ಲಿ ಮಂಡ್ಯ ಜಿಲ್ಲೆಯ ಹೆಸರುವಾಸಿಯಾಗಿದೆ.
* ಇದು ಹುಲ್ಲು ಜಾತಿಗೆ ಸೇರಿದ ಸಸ್ಯ ಅಧಿಕ ಉಷ್ಣಾಂಶ ಮತ್ತು ಮಳೆಯಾಗುವ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.
2) ಹತ್ತಿ :-
* ನಾರಿನ ಬೆಳೆಯಾಗಿದ್ದು,ಹತ್ತಿ ಬಟ್ಟೆ ಕೈಗಾರಿಕೆಯ ಪ್ರಮುಖ ಕಚ್ಚಾ ವಸ್ತು.
* ಉಷ್ಣ ಮತ್ತು ಉಪ ಉಷ್ಣವಲಯದ ವಾಣಿಜ್ಯ ಬೆಳೆ.
* ಕಪ್ಪು ಮಣ್ಣು ಹತ್ತಿ ಬೆಳೆಗೆ ಸೂಕ್ತವಾಗಿದೆ.
* ಹಾವೇರಿ ಅತಿ ಉತ್ಪಾದನೆಯಲ್ಲಿ ಕರ್ನಾಟಕದಲ್ಲಿ ಮೊದಲನೆ ಸ್ಥಾನದಲ್ಲಿದೆ ಎರಡನೇ ಸ್ಥಾನದಲ್ಲಿ ಧಾರವಾಡ.
* ಹತ್ತಿಯನ್ನು ಆಗಸ್ಟ್ ಇಂದ ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಲಾಗುತ್ತದೆ.
3) ತಂಬಾಕು :-
* ಇದು ನಿಕೋಷಿಯಾನ ವರ್ಗಕ್ಕೆ ಸೇರಿದ ಸಸ್ಯವಾಗಿದೆ ಇದರಲ್ಲಿ ” ನಿಕೋಟಿನ್” ಎಂಬ ಮಾದಕ ವಸ್ತುವಾಗಿದೆ.
* ಪೋರ್ಚುಗೀಸರು 17ನೇ ಶತಮಾನದಲ್ಲಿ ತಂಬಾಕನ್ನು ಭಾರತಕ್ಕೆ ಪರಿಚಯಿಸಿದರು.
* ” ವರ್ಜೀನಿಯಾ” ತಂಬಾಕು ಉತ್ತಮ ದರ್ಜೆಯದ್ದಾಗಿದ್ದು,ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆ ಗಳಿಸಿದೆ.
* ಇದನ್ನು ಉತ್ಪಾದಿಸುವ ಸ್ಥಾನಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ.
* ಮೈಸೂರು ಜಿಲ್ಲೆ ತಂಬಾಕು ಉತ್ಪಾದನೆಯಲ್ಲಿ ಒಂದನೇ ಸ್ಥಾನದಲ್ಲಿದೆ.
* ಬೆಳಗಾವಿ ಜಿಲ್ಲೆಯ ” ನಿಪ್ಪಾಣಿ ” ಯು ದೇಶದಲ್ಲಿ ಬೀಡಿ ತಯಾರಿಕಾ ತಂಬಾಕು ಮಾರುಕಟ್ಟೆಗೆ ಅತ್ಯಂತ ಪ್ರಸಿದ್ಧವಾಗಿದೆ.
4) ಕಾಫಿ :-
* ಕಾಫಿಯು ಕರ್ನಾಟಕದ ಪ್ರಸಿದ್ಧ ನೆಡು ತೋಟದ ಹಾಗೂ ಪಾನೀಯ ಬೆಳೆ.
* ಕರ್ನಾಟಕ ಭಾರತದಲ್ಲಿ ಕಾಫಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
* ಕ್ರಿಸ್ತಶಕ 10670ರ ಸುಮಾರಿಗೆ ಬಾಬಾಬುಡನ್ ಎಂಬ ಮುಸ್ಲಿಂ ಸಂತನು ಚಿಕ್ಕಮಂಗಳೂರಿನ ಬೆಟ್ಟಗಳ ಸಾಲಿನಲ್ಲಿ ಕಾಪಿ ಸಸಿಗಳನ್ನು ಬೆಳೆಸಿದನು. ಆ ಬೆಟ್ಟಗಳನ್ನು ಬಾಬಾಬುಡನ್ ಗಿರಿ ( ಇನಾಮ್ ದತ್ತಾತ್ರೇಯ ಪೀಠ) ಎನ್ನುವರು ಆದರೆ ಕ್ರಮಬದ್ಧವಾಗಿ ಪ್ರಾರಂಭವಾದದ್ದು 1826ರಲ್ಲಿ.
* ಕರ್ನಾಟಕವು ‘ ಅರೇಬಿಕಾ’ ಮತ್ತು ‘ ರೊಬೊಸ್ಟಾ’ ಎಂಬ ಎರಡು ಪ್ರಭೇದದ ಕಾಫಿ ಉತ್ಪಾದಿಸುತ್ತದೆ ಇದರಲ್ಲಿ ಅರೇಬಿಕಾ ಶ್ರೇಷ್ಠ ದರ್ಜೆಯದ್ದಾಗಿದೆ.
* ಈ ಬೆಳೆಗೆ ಜೇಡಿ ಮಿಶ್ರಿತ ಮಣ್ಣು ಸೂಕ್ತವಾಗಿದ್ದು ಕಾಫಿ ಗಿಡಕ್ಕೆ ಸೂರ್ಯನ ನೇರ ಕಿರಣಗಳು ಬೀಳದಂತೆ ಮರಗಳನ್ನು ಬೆಳೆಸಬೇಕು.
* ದೇಶದ ಕಾಫಿ ಉತ್ಪಾದನೆಯಲ್ಲಿ ಶೇಕಡ 70ರಷ್ಟು ಕರ್ನಾಟಕವೇ ಉತ್ಪಾದಿಸುತ್ತದೆ.
* ಕೊಡಗು ಜಿಲ್ಲೆ ಕರ್ನಾಟಕದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ಜಿಲ್ಲೆ ಎರಡನೇ ಸ್ಥಾನದಲ್ಲಿ ಚಿಕ್ಕಮಂಗಳೂರು ಮೂರನೇ ಸ್ಥಾನದಲ್ಲಿ ಹಾಸನ.
* ಕರ್ನಾಟಕವನ್ನು ” ಕಾಫಿ ನಾಡು ” ಎಂದು ಕರೆಯುತ್ತಾರೆ.
-: ಅರ್ಥಶಾಸ್ತ್ರ :-
-: ಆರ್ಥಿಕ ರಚನೆ :-
1) ಸ್ಥಿರಾತ್ಮಕ ಅರ್ಥಶಾಸ್ತ್ರ :-
ಸ್ಥಿರಾತ್ಮಕ ( Statics) ಎಂಬ ಪದವು ಗ್ರೀಕ್ ನ ಸ್ಟಾಟಿಕ ( Statike) ಎಂಬ ಪದದಿಂದ ಬಂದಿದೆ ಇದರರ್ಥ ” ಸ್ಥಿರವಾಗಿ ನಿಲ್ಲು ” ಅರ್ಥಶಾಸ್ತ್ರದಲ್ಲಿ ಇದು ಯಾವುದೇ ಬದಲಾವಣೆಗಳಿಲ್ಲದ ಸನ್ನಿವೇಶವನ್ನು ಸೂಚಿಸುತ್ತದೆ.
2) ಚಲನಾತ್ಮಕ ಅರ್ಥಶಾಸ್ತ್ರ
ಈ ಚಲನಾತ್ಮಕ ಎಂಬ ಪದವು ಗ್ರೀಕಿನ “Dynamikos ” ಎಂಬ ಪದದಿಂದ ಬಂದಿದೆ ಇದರರ್ಥ ಶಕ್ತಿಶಾಲಿಯಾದ ಬದಲಾವಣೆ ಇಲ್ಲದೆ ನಿರಂತರ ಬದಲಾವಣೆಯನ್ನು ಸೂಚಿಸುತ್ತದೆ.
Best contact……
Thank you