* ಒಂದು ದೇಶವು ತನ್ನ ಸಂಸ್ಕೃತಿ ಮತ್ತು ಪರಂಪರೆಗಳ ವಿಶೇಷತೆಗಳನ್ನು ಪ್ರತಿಬಿಂಬಿಸುವ ಕೆಲವು ಚಿಹ್ನೆಗಳನ್ನು ಬಳಕೆ ಮಾಡುತ್ತದೆ. ಇವುಗಳನ್ನು ರಾಷ್ಟ್ರೀಯ ಚಿಹ್ನೆಗಳು ಎನ್ನುವರು.
-: ನಮ್ಮ ರಾಷ್ಟ್ರಗೀತೆ :-
* ರಚನೆ – 1911
* ಸಂವಿಧಾನ ಸಭೆಯು ಅಂಗೀಕರಿಸಿದ್ದು 24 ಜನವರಿ 1950.
* ರಾಷ್ಟ್ರಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ 52 ಸೆಕೆಂಡುಗಳು.
* ಜನಗಣಮನ ಭಾರತದ ರಾಷ್ಟ್ರಗೀತೆ – ರಚನಕಾರರು ರವೀಂದ್ರನಾಥ ಟಾಗೋರ್.
* ಗೀತಾಂಜಲಿಯಿಂದ ಮೊದಲ 5 ಸಾಲುಗಳನ್ನು ಆಯ್ದುಕೊಳ್ಳಲಾಗಿದೆ.
-: ನಮ್ಮ ರಾಷ್ಟ್ರಧ್ವಜ :-
* ಮೇಲೆ ಕೇಸರಿ ಮಧ್ಯ ಬಿಳಿ ಮತ್ತು ಕೆಳಗೆ ಹಸಿರು ಬಣ್ಣಗಳಿಂದ ಕೂಡಿದೆ.
* ಬಿಳಿ ಬಣ್ಣದ ಮಧ್ಯದಲ್ಲಿ ನೀಲಿ ಬಣ್ಣದ ಚಕ್ರವಿದೆ.
* ಚಕ್ರದಲ್ಲಿ 24 ಗೆರೆಗಳಿವೆ.
* ರಾಷ್ಟ್ರಧ್ವಜವು ಸ್ವಾತಂತ್ರ, ದೇಶಪ್ರೇಮ, ಒಗ್ಗಟ್ಟು ಹಾಗೂ ನಿಷ್ಠೆಯ ಪ್ರತಿಕ.
* ಧ್ವಜವು ಆಯತಾಕಾರವಾಗಿದೆ.
* ಧ್ವಜದ ಉದ್ದಗಲ ಅನುಪಾತ 3:2.
-: ರಾಷ್ಟ್ರಧ್ವಜದ ವಿಶೇಷತೆ:-
* ಕೇಸರಿ ಬಣ್ಣ – ನಿಸ್ವಾರ್ಥ ಹಾಗೂ ತ್ಯಾಗ.
* ಬಿಳಿ ಬಣ್ಣ – ಸತ್ಯ, ಶಾಂತಿ, ಪರಿಶುದ್ಧತೆಯ ಪ್ರತಿಕ.
* ಹಸಿರು ಬಣ್ಣ – ಭೂಮಿಯ, ಸಮೃದ್ಧಿಯ ಸಂಕೇತ.
* ಅಶೋಕ ಚಕ್ರ ನಿರಂತರ ಚಲನೆಯ ಹಾಗೂ ಪ್ರಗತಿಯ ಪ್ರತೀಕ.
-: ರಾಷ್ಟ್ರಧ್ವಜದ ಸಂಹಿತೆ :-
* ಧ್ವಜ ಕೊಳೆಯಾಗಿರಬಾರದು, ಹರಿದಿಬಾರದು.
* ಕೇಸರಿ ಬಣ್ಣ ಮೇಲೆ ಬರುವಂತೆ ಹಾರಿಸಬೇಕು.
* ರಾಷ್ಟ್ರಧ್ವಜದ ಎತ್ತರಕ್ಕೆ ಬೇರಾವ ಧ್ವಜವನ್ನು ಹಾರಿಸಬಾರದು.
* ಕಂಬದ ತುದಿಯವರೆಗೂ ಮೇಲೇರಿಸಿ ಹಾರಿಸಬೇಕು.
* ಸೂರ್ಯೋದಯದ ನಂತರ ಹರಿಸಬೇಕು ಮತ್ತು ಸೂರ್ಯಾಸ್ತಕ್ಕೆ ಮೊದಲು ಇಳಿಸಿ ಮಡಿಚಿ ಇಡಬೇಕು.
* ರಾಷ್ಟೀಯ ಶೋಕವನ್ನು ಆಚರಿಸುವ ಸಮಯದಲ್ಲಿ ಧ್ವಜವನ್ನು ಅರ್ಧ ಎತ್ತರಕ್ಕೆ ಹಾರಿಸಬೇಕು.
* ಧ್ವಜವನ್ನು ಬಲಗೈಯಲ್ಲಿ ಹಿಡಿದು ನಡೆಯಬೇಕು.
* ಧ್ವಜವನ್ನು ನೆಲಕ್ಕೆ ತಾಗಿಸಬಾರದು .
-: ನಮ್ಮ ರಾಷ್ಟ್ರ ಲಾಂಛನ:-
* ಸಾರಾನಾಥದ ಅಶೋಕನ ಶಿಲಾಸ್ತಂಬದ ಬೋದಿಗೆಯ ರೂಪಾಂತರ. ಇದನ್ನು ಸಿಂಹ ಬೋದಿಗೆ ಎನ್ನುವರು.
* ಪೀಠದಲ್ಲಿರುವ ಚಕ್ರವನ್ನು ಧರ್ಮ ಚಕ್ರ ಎನ್ನುವರು.
* 26 ಜನವರಿ 1950 ರಂದು ಭಾರತ ಸರ್ಕಾರವು ನಮ್ಮ ರಾಷ್ಟ್ರ ಲಾಂಛನವನ್ನು ಅಂಗೀಕರಿಸಿತು.
* ಪೀಠದ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆದ ಸತ್ಯಮೇವ ಜಯತೇ ಎಂಬ ಮುಂಡಕ ಉಪನಿಷತ್ತಿನ ವಾಕ್ಯವಿದೆ.
* ರಾಷ್ಟ್ರೀಯ ಪ್ರಾಣಿ ಹುಲಿ ಮತ್ತು ರಾಷ್ಟ್ರೀಯ ಪಕ್ಷಿ – ನವಿಲು.
-: ರಾಷ್ಟ್ರೀಯ ಭಾವೈಕ್ಯತೆ:-
* ಒಂದು ರಾಷ್ಟ್ರದ ಜನರು ನಾವೆಲ್ಲ ಒಂದೇ ಎನ್ನುವ ಭಾವನೆ.
-: ವಿವಿಧತೆಯಲ್ಲಿ ಏಕತೆ ಮೂಡಿಸುವ ಅಂಶಗಳು :-
ಭೌಗೋಳಿಕ ಐಕ್ಯತೆ, ರಾಜಕೀಯ ಐಕ್ಯತೆ, ಧಾರ್ಮಿಕ ಐಕ್ಯತೆ, ಭಾಷಾ ಐಕ್ಯತೆ, ಸಾಂಸ್ಕೃತಿ ಐಕ್ಯತೆ.
-: ರಾಷ್ಟ್ರೀಯ ಐಕ್ಯತೆಯನ್ನು ವೃದ್ಧಿಸುವ ಅಥವಾ ಪ್ರೋತ್ಸಾಹಿಸುವ ಅಂಶಗಳು :-
* ಜಾತ್ಯಾತೀತತೆ ಅಥವಾ ಮತ ನಿರಪೇಕ್ಷತೆ.
* ಪ್ರಜಾಪ್ರಭುತ್ವ.
* ರಾಷ್ಟ್ರೀಯ ಹಬ್ಬಗಳು.
* ಪರಸ್ಪರ ಅನ್ಯೋನ್ಯತೆ.
-: ರಾಷ್ಟೀಯ ಐಕ್ಯತೆಗೆ ಇರುವ ಅಡೆತಡೆಗಳು :-
* ಕೋಮುವಾದ
* ಭಾಷಾಭಿಮಾನ
* ಜಾತಿಯ ಮನೋಭಾವ
* ಪ್ರಾಂತೀಯ ಮನೋಭಾವ
* ಗಡಿ ವಿವಾದ
* ಜಲ ವಿವಾದ
* ಭಾಷಾ ವಿವಾದ
Super sir it very usefull in our competative exams.
Thank you very much sir
Thank you sir
Thank you sir
Thank you sir
Thank you so much sir for help