7th Pay Commission: ಎರಡನೇ ತುಟ್ಟಿಭತ್ಯೆ, ತುಟ್ಟಿ ಪರಿಹಾರ 3% ಘೋಷಣೆ ದಿನಾಂಕ, ಅಪ್ಡೇಟ್ ಮಾಹಿತಿ-2024.
7th Pay Commission: ಕೇಂದ್ರ ಸರ್ಕಾರದ ಕೋಟ್ಯಾಂತರ ನೌಕರರು 7ನೇ ವೇತನ ಆಯೋಗ ಪ್ರಸಕ್ತ ವರ್ಷದ ಎರಡನೇಯ ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಘೋಷಿಸುವುದನ್ನೆ ಕಾಯುತ್ತಿದ್ದಾರೆ. ಕಳೆದ ಜನವರಿಯಲ್ಲಿ ಸರ್ಕಾರ ಶೇಕಡಾ 4 ರಷ್ಟು ಡಿಆರ್ ಏರಿಕೆ ಮಾಡಿತ್ತು. ಇದೀಗ 2024ನೇ ವರ್ಷದ ಎರಡನೇ ಡಿಎ ಘೋಷಣೆ ಆಗುವ ದಿನಾಂಕ? ಎಷ್ಟು ಹೆಚ್ಚಳ ಆಗಲಿದೆ? ಉದ್ಯೋಗಿಗಳು ಏನೆಲ್ಲ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಇದೇ ಸೆಪ್ಟಂಬರ್ ಮೊದಲ ವಾರದ ಕೇಂದ್ರವು ಏಳನೇ ವೇತನ ಆಯೋಗದಡಿ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಹೆಚ್ಚಳದ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ. ಈ ಸಲ ಕೇಂದ್ರವು DA ಮತ್ತು DR ನಲ್ಲಿ ಶೇಕಡಾ 3ರಷ್ಟು ಹೆಚ್ಚಳ ಮಾಡಿ ಘೋಷಿಸಬಹುದು ಎಂದು ಅಂದಾಜಿಸಲಾಗಿದೆ.
ಕಾಲ ಕಾಲಕ್ಕೆ ತಕ್ಕಂತೆ ಹೆಚ್ಚಾಗುವ ಬೆಲೆ ಏರಿಕೆ, ಹಣದುಬ್ಬರ ನಿರ್ವಹಿಸುವ ಉದ್ದೇಶದಿಂದ ತನ್ನ ನೌಕರರಿಗೆ ಕೇಂದ್ರ ಸರ್ಕಾರ ವರ್ಷದಲ್ಲಿ ಎರಡು ಬಾರಿ ಅಂದರೆ ಆರು ತಿಂಗಳಿಗೆ ಒಮ್ಮೆ ಈ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಏರಿಕೆ ಮಾಡುತ್ತದೆ. ಜನವರಿಯಲ್ಲಿ ಏರಿಕೆ ಆಗುವುದನ್ನು ಮಾರ್ಚ್ ನಲ್ಲಿ ಹಾಗೂ ಜುಲೈ ನಲ್ಲಿ ಏರಿಕೆ ಆಗುವುದನ್ನು ಸೆಪ್ಟಂಬರ್‌ನಲ್ಲಿ ಘೋಷಣೆ ಮಾಡುತ್ತದೆ.