7th Pay Commission: ವೇತನ ಬಡ್ತಿ ದರ, ನೌಕರರ ಬೇಡಿಕೆ, ಶಿಫಾರಸು ಏನು? 2024.
7th Pay Commission:ಹಾಯ್ ಗೆಳೆಯರೇ; ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಅಂಗೀಕರಿಸಿ, ಜಾರಿಗೊಳಿಸುತ್ತಿದೆ. ಆಯೋಗ ತನ್ನ 558 ಪುಟಗಳ ಸಂಪುಟ-1ರ ವರದಿಯಲ್ಲಿ ಹಲವಾರು ಶಿಫಾರಸುಗಳನ್ನು ಮಾಡಿದೆ. ವೇತನ ಬಡ್ತಿ ರಚನೆ, ಆರ್ಥಿಕ ಸೌಲಭ್ಯಗಳ ಕುರಿತು ಸಹ ಶಿಫಾರಸುಗಳನ್ನು ಸಲ್ಲಿಕೆ ಮಾಡಿದೆ.
ಒಬ್ಬ ನೌಕರನಿಗೆ ವಾರ್ಷಿಕವಾಗಿ ನೀಡಲಾಗುವ ವಾರ್ಷಿಕ ವೇತನ ಬಡ್ತಿ ದರವು ವೇತನ ರಚನೆಯ ಪರಿಷ್ಕರಣೆಯಲ್ಲಿ ಪರಿಗಣಿಸಬೇಕಾಗಿರುವ ಅಂಶವಾಗಿದೆ. ಪರಿಷ್ಕೃತ ವೇತನ ಬಡ್ತಿ ದರಗಳು ಚಾಲ್ತಿಯಲ್ಲಿರುವ ವೇತನ ಬಡಿ ದರಗಳಿಂದ ಲಭ್ಯವಾಗುವ ಆರ್ಥಿಕ ಸೌಲಭ್ಯವನ್ನು ಸಂರಕ್ಷಿಸುವುದರೊಂದಿಗೆ, ಮುಖ್ಯ ವೇತನ ಶ್ರೇಣಿಯಲ್ಲಿನ ಕನಿಷ್ಟ ಹಂತದಿಂದ ಗರಿಷ್ಟ ಹಂತದವರೆಗಿನ ವೇತನ ಬಡ್ಡಿದರಗಳ ಪ್ರಗತಿಯನ್ನು ಉಳಿಸಿಕೊಳ್ಳಬೇಕಾಗುತ್ತದೆ.
ರಾಜ್ಯದಲ್ಲಿನ ಕಳೆದ ವೇತನ ಪರಿಷ್ಕರಣೆಗಳಲ್ಲಿ ಮುಖ್ಯ ವೇತನ ಶ್ರೇಣಿಯಲ್ಲಿನ ವೇತನ ಬಡ್ತಿ ದರಗಳು ಶೇ.24 ರಿಂದ ಶೇ.2 ರವರೆಗಿನ ಶ್ರೇಣಿಯಲ್ಲಿದ್ದಾಗ್ಯೂ, ಕೇಂದ್ರ ಸರ್ಕಾರ ಮತ್ತು ಕೇಂದ್ರ ವೇತನ ರಚನೆಯನ್ನು ಅಳವಡಿಸಿಕೊಂಡಂತಹ ರಾಜ್ಯಗಳು ಏಕರೂಪವಾಗಿ ಮೂಲ ವೇತನದ ಶೇ.3 ರಷ್ಟನ್ನು ವೇತನ ಬಡ್ತಿದರ ಒದಗಿಸಿರುತ್ತವೆ. ತುಲನಾತ್ಮಕವಾಗಿ ನೋಡಿದಾಗ, ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶದಲ್ಲಿ ವೇತನ ಬಡ್ತಿ ದರಗಳು ಶೇ 3 ರಿಂದ ಶೇ 235 ಮತ್ತು ಕೇರಳದಲ್ಲಿ ಶೇ 3.04 ರಿಂದ ಶೇ 2.08 ರಷ್ಟಿರುತ್ತದೆ.
ವೇತನ ಬಡ್ತಿ ದರದ ವ್ಯತ್ಯಾಸಗಳು:
ಕೇಂದ್ರ ವೇತನ ರಚನೆಯಲ್ಲಿ ವಾರ್ಷಿಕ ವೇತನ ಬಡ್ತಿ ದರವನ್ನು ಶೇ.3 ರಷ್ಟು ನಿಗದಿಪಡಿಸಿದಾಗಿನಿಂದಲೂ, ಅಂದರೆ 2006 ರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕಾನೂನುಬದ್ಧ ವೇತನ ಬಡ್ತಿ ಲಾಭವನ್ನು ನಿರಾಕರಿಸಲಾಗಿದೆ ಎಂದು ವಾದಿಸಿ ಕೆಎಸ್‌ಇಎ ಮತ್ತು ಕೆಲವು ಇತರ ಸಂಘಗಳು ಮತ್ತು ವ್ಯಕ್ತಿಗಳು, ಕೇಂದ್ರ ಸರ್ಕಾರ ಮತ್ತು ಕೇರಳ ಮಾದರಿಯಂತೆ ಅನುಕ್ರಮವಾಗಿ ಶೇ 3 ಅಥವಾ ಶೇ 3.04 ರಷ್ಟು ವೇತನ ಬಡ್ತಿ ದರವನ್ನು ಶಿಫಾರಸ್ಸು ಮಾಡುವಂತೆ ಆಯೋಗಕ್ಕೆ ಒತ್ತಾಯ ಮಾಡಿರುತ್ತವೆ.
ಮೂಲ ವೇತನದ ಶೇ 3ರಷ್ಟು ವಾರ್ಷಿಕ ವೇತನ ಬಡ್ತಿ ದರವನ್ನು ಏಕರೂಪವಾಗಿ ನಿಗದಿಪಡಿಸುವಂತೆ ಕೋರಿರುವ ನೌಕರರ ಮನವಿಯನ್ನು ಪರಿಶೀಲಿಸಲಾಗಿದೆ. ಮುಖ್ಯ ವೇತನ ಶ್ರೇಣಿ ಮತ್ತು ಅದರ 25 ವೇತನ ಶ್ರೇಣಿಗಳನ್ನು ಮುಂದುವರೆಸಲು ಪ್ರಸ್ತಾಪಿಸಲಾಗಿರುವುದರಿಂದ, ಶೇ 3ರಷ್ಟು ಏಕರೂಪದ ವಾರ್ಷಿಕ ವೇತನ ಬಡ್ತಿ ದರವು ಮುಖ್ಯ ವೇತನ ಶ್ರೇಣಿಯ ಗರಿಷ ಮೊತ್ತದಲ್ಲಿ ಮಾತ್ರವಲ್ಲದೆ ಪ್ರತ್ಯೇಕ ವೇತನ ಶ್ರೇಣಿಗಳ ಆರಂಭದಲ್ಲಿಯೂ ಅಸಮ್ಮತ ಏರಿಕೆಗೆ ಕಾರಣವಾಗುತ್ತದೆ.
ಅಲ್ಲದೆ, ಶೇ 3ರಷ್ಟು ಏಕರೂಪದ ವಾರ್ಷಿಕ ವೇತನ ಬಡ್ತಿ ದರವು ಕನಿಷ್ಟ ಮತ್ತು ಗರಿಷ್ಟ ವೇತನದ ನಡುವಿನ ಅನುಪಾತವನ್ನು ವಿರೂಪಗೊಳಿಸುತ್ತದೆ. ಈ ಸಂದರ್ಭಗಳಲ್ಲಿ ಕೆಎಸ್‌ಇಎ ಬೇಡಿಕೆಯನ್ನು ಅಂಗೀಕರಿಸಲು ಆಗುವುದಿಲ್ಲ. ಶಿಫಾರಸ್ಸು ಮಾಡಲಾದ ಪರಿಷ್ಕೃತ ವೇತನವನ್ನಾಧರಿಸಿ, ಆಯೋಗವು, ಮುಖ್ಯ ವೇತನ ಶ್ರೇಣಿಯಲ್ಲಿ ವಾರ್ಷಿಕ ವೇತನ ಬಡ್ತಿ ದರಗಳನ್ನು ಶೇ 2.41 ರಿಂದ ಶೇ 2.11 (ರೂ.650 ರಿಂದ ರೂ.5,000) ವರೆಗೆ ಶಿಫಾರಸ್ಸು ಮಾಡುತ್ತದೆ.
- https://mahitikannada.com/recruitment-of-anganwadi-vacancies-in-dharwad-application-invitation-2024/
ಪ್ರಸ್ತುತ ಜಾರಿಯಲ್ಲಿರುವಂತೆ, ಒಂದು ಕ್ಯಾಲೆಂಡರ್ ವರ್ಷದಲ್ಲಿ ಸಂದರ್ಭಾನುಸಾರ ವರ್ಷದ 1ನೇ ಜನವರಿ ಅಥವಾ 1ನೇ ಜುಲೈನಲ್ಲಿ ವಾರ್ಷಿಕ ವೇತನ ಬಡ್ತಿ ದರಗಳನ್ನು ಮಂಜೂರು ಮಾಡುವುದನ್ನು ಮುಂದುವರೆಸಲು ಸಹ ಆಯೋಗವು ಶಿಫಾರಸ್ಸು ಮಾಡುತ್ತದೆ ಎಂದು ವೇತನ ಆಯೋಗ ತನ್ನ ವರದಿಯಲ್ಲಿ ಸರ್ಕಾರಕ್ಕೆ ತಿಳಿಸಿದೆ.
ಈ ಹಿಂದೆ ಉಲ್ಲೇಖಿಸಲಾದ ಮುಖ್ಯ ವೇತನ ಶ್ರೇಣಿಗಳ ಪರಿಕಲ್ಪನೆಯನ್ನು ರಾಜ್ಯದಲ್ಲಿ ಬಹುತೇಕ ನಾಲ್ಕು ದಶಕಗಳಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ. ಇದು ಎಲ್ಲಾ ರಾಜ್ಯ ಸರ್ಕಾರಿ ನೌಕರರನ್ನು ಒಳಗೊಂಡಿರುವ ಏಕೈಕ ಚಲಿತ ವೇತನ ಶ್ರೇಣಿಯಾಗಿರುತ್ತದೆ.
ಈ ಮುಖ್ಯ ವೇತನ ಶ್ರೇಣಿಯ ಅಂಶಗಳೆಂದರೆ ಕನಿಷ್ಠ ಮತ್ತು ಗರಿಷ್ಠ ವೇತನ, ವೇತನ ಬಡ್ತಿ ದರಗಳು, ಹಂತಗಳ ಸಂಖ್ಯೆ ಹಾಗೂ ಇದರಿಂದ ವಿಭಾಗ ಮಾಡಲಾದ ಪ್ರತ್ಯೇಕ ವೇತನ ಶ್ರೇಣಿಗಳು. ಮುಖ್ಯ ವೇತನ ಶ್ರೇಣಿಯ ರಚನೆಯ ವಿಶಿಷ್ಟತೆಯೆಂದರೆ ಒಬ್ಬ ನೌಕರನು ಯಾವುದೇ ವೇತನ ಶ್ರೇಣಿಯಲ್ಲಿ ಒಂದು ನಿರ್ದಿಷ್ಠ ಹಂತಕ್ಕೆ ತಲುಪಿದಾಗ ಆತ ಅಥವ ಆಕೆಯ ಒಂದೇ ದರದ ವೇತನ ಬಡ್ತಿಯಯನ್ನು ಪಡೆಯಲು ಅರ್ಹರಾಗುತ್ತಾರೆ.
ಧನ್ಯವಾದಗಳು…