7th Pay Commission: ಕೇಂದ್ರ ಮತ್ತು ರಾಜ್ಯ ಸರ್ಕಾರದ ವೇತನ ಸರಿ ಸಮಾನತೆ ಅಂಶಗಳು-2024.

7th Pay Commission: ಕೇಂದ್ರ ಮತ್ತು ರಾಜ್ಯ ಸರ್ಕಾರದ ವೇತನ ಸರಿ ಸಮಾನತೆ ಅಂಶಗಳು-2024.

 

ಬೆಂಗಳೂರು, ಆಗಸ್ಟ್ 12: ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಕರ್ನಾಟಕ ಸರ್ಕಾರ ಅಂಗೀಕಾರ ಮಾಡಿ ಜಾರಿಗೊಳಿಸುತ್ತಿದೆ. ವರದಿಯಲ್ಲಿ ಆಯೋಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೇತನ ರಚನೆ, ವೇತನ ಶ್ರೇಣಿ ಮುಂತಾದವುಗಳನ್ನು ಅಧ್ಯಯನ ಮಾಡಿ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಆಯೋಗಕ್ಕೆ ನಿಗದಿಗೊಳಿಸಲಾಗಿತ್ತು.

 

7th Pay Commission:
7ನೇ ರಾಜ್ಯ ವೇತನ ಆಯೋಗ 558 ಪುಟಗಳ ಸಂಪುಟ-1ರ ವರದಿಯಲ್ಲಿ ರಾಜ್ಯದ ಹೊಸ ವೇತನ ರಚನೆಯನ್ನು ಶಿಫಾರಸು ಮಾಡುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿರುವ ವಿವಿಧ ವೃಂದಗಳ ನಡುವಿನ ಹುದ್ದೆಗಳ ಸರಿಸಮಾನತೆಯನ್ನು ನಿರ್ಧರಿಸುವ ಮೂಲಕ ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸುವ ಕಾರ್ಯವನ್ನು ಆಯೋಗಕ್ಕೆ ನಿಗದಿಪಡಿಸಲಾಗಿದೆ ಎಂದು ಹೇಳಿದೆ.

https://mahitikannada.com/466-driver-and-various-posts-recruitment-bro-recruitment-2024/

ಹಿಂದಿನ ವೇತನ ಆಯೋಗ/ ಸಮಿತಿಗಳು, ಇತರೆ ವಿಷಯಗಳೊಂದಿಗೆ, ಮುಖ್ಯವಾಗಿ ಭಾರತ ಸರ್ಕಾರ ಮತ್ತು ನೆರೆಯ ರಾಜ್ಯಗಳ ವೇತನ ಶ್ರೇಣಿಗಳನ್ನು ಪರಿಶೀಲಿಸಿ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯನ್ನು ಶಿಫಾರಸ್ಸು ಮಾಡಬೇಕಾಗಿತ್ತು. ಪ್ರಸಕ್ತ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದಲ್ಲಿ ಜಾರಿಯಲ್ಲಿರುವ ವೇತನ ರಚನೆ ಮತ್ತು ವೇತನ ಶ್ರೇಣಿಗಳು ಕಾಲಾಂತರದಲ್ಲಿ ವಿಭಿನ್ನ ರೀತಿಯಲ್ಲಿ ವಿಕಸನಗೊಂಡಿದ್ದು, ಈ ಪರಿಣಾಮವಾಗಿ ಅವುಗಳೆರಡರ ನಡುವೆ ಕೆಲ ಕಾಲದಿಂದ ಗಮನಾರ್ಹ ವ್ಯತ್ಯಾಸವಿರುತ್ತದೆ ಎಂದು ವರದಿ ತಿಳಿಸಿದೆ.

7th Pay Commission:

ರಾಜ್ಯವು ಈಗ, ಕೇಂದ್ರ ಸರ್ಕಾರ ಮಾದರಿಯ ವೇತನ ರಚನೆಯನ್ನು ದೀರ್ಘಕಾಲದ ಗಮನಾರ್ಹವಾದ ದಿಕ್ಚ್ಯುತಿಯ ನಂತರ ಅಳವಡಿಸಿಕೊಳ್ಳುವ ಸಂಭಾವ್ಯತೆಯ ಮೊದಲನೆಯ ಹೆಜ್ಜೆಯಾಗಿ, ಈ ಎರಡು ವೇತನ ವ್ಯವಸ್ಥೆಗಳು ಹಲವು ವರ್ಷಗಳಿಂದ ಯಾವುದರ ಆಧಾರದ ಮೇಲೆ ಮತ್ತು ಹೇಗೆ ಬದಲಾವಣೆಯಾಗಿರುತ್ತದೆ ಎಂಬ ಬಗ್ಗೆ ಆಳವಾದ ಅಧ್ಯಯನ ನಡೆಸುವ ಅವಶ್ಯಕತೆ ಇದೆ. ಇದು ವೇತನ ರಚನೆಯ ನಿರ್ಧರಣೆಗೆ ಕಾರಣವಾದ ವಿವಿಧ ಅಂಶಗಳ ವ್ಯಾಪಕ ವಿಶ್ಲೇಷಣೆಯನ್ನು ಒಳಗೊಂಡಿದ್ದು, ವೇತನ ಶ್ರೇಣಿಗಳು, ವೇತನ ಶ್ರೇಣಿಗಳನ್ನು ರೂಪಿಸಲಾದ ಸೂಚ್ಯಂಕ ಬಿಂದುಗಳು, ತಟಸ್ಥಗೊಳಿಸಲಾದ ತುಟ್ಟಿ ಭತ್ಯೆಯ ಪ್ರಮಾಣ, ಮತ್ತು ವೇತನ ಶ್ರೇಣಿಗಳ ಪರಿಷ್ಕರಣೆಗಳಲ್ಲಿ ನೀಡಲಾದ ವೇತನ ಹೆಚ್ಚಳ ಮುಂತಾದ ಅಂಶಗಳಿರುತ್ತದೆ.

https://mahitikannada.com/recruitment-of-anganwadi-vacancies-in-dharwad-application-invitation-2024/

ಕನಿಷ್ಠ ಮತ್ತು ಗರಿಷ್ಠ ವೇತನವನ್ನು ನಿರ್ಧರಿಸಲು ಮತ್ತು ವಿವಿಧ ಪವರ್ಗಗಳ ಹುದ್ದೆಗಳಿಗೆ ವೇತನ ಶ್ರೇಣಿಗಳನ್ನು ಆಡಳಿತದ ಶ್ರೇಣೀಕೃತ ಹಂತಗಳಲ್ಲಿ ರಚಿಸುವಾಗ ಅನುಸರಿಸಬೇಕಾದ ಮಾನದಂಡಗಳನ್ನು ಸಹ ಅಧ್ಯಯನ ಮಾಡಬೇಕಾಗುತ್ತದೆ. ಇದಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿನ ವಿವಿಧ ವೃಂದಗಳಲ್ಲಿನ ಪ್ರತಿಯೊಂದು ಹುದ್ದೆಗೂ ನಿಗದಿಪಡಿಸಲಾದ ನೇಮಕಾತಿ ವಿಧಾನ, ವಿದ್ಯಾರ್ಹತೆ, ತರಬೇತಿ, ಹುದ್ದೆಗಳ ಜವಾಬ್ದಾರಿಗಳು ಮತ್ತು ಇಂತಹ ಇತರ ಅಂಶಗಳನ್ನು ಸಹ ಪರಿಗಣಿಸಬೇಕಾಗುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

ವೇತನ ರಚನೆ ವ್ಯತ್ಯಾಸ:-

ರಾಜ್ಯ ವೇತನ ಆಯೋಗಗಳು ಮತ್ತು ಸಮಿತಿಗಳು ಮಾಡುವ ಶಿಫಾರಸ್ಸುಗಳ ಆಧಾರದ ಮೇಲೆ ಕರ್ನಾಟಕ ರಾಜ್ಯವು ಸರ್ಕಾರಿ ನೌಕರರಿಗೆ ತನ್ನದೇ ಆದ ವೇತನ ರಚನೆಯನ್ನು ಅನೇಕ ವರ್ಷಗಳಿಂದ ರೂಪಿಸುತ್ತಿದೆ. ಈ ಆಯೋಗಗಳು/ ಸಮಿತಿಗಳು ಸಾಮಾನ್ಯವಾಗಿ, ಪ್ರತಿ ಬಾರಿಯ ಪರಿಷ್ಕರಣೆಯಲ್ಲಿನ ಅಂಶಗಳಲ್ಲಿ ಸಲಹ ಮಾಡುವಾಗ, ಹಲವು ವರ್ಷಗಳಿಂದಲೂ ಒಂದೇ ಮಾದರಿಯ ಮೂಲ ವೇತನ ರಚನೆಯನ್ನೇ ಮುಂದುವರೆಸಲು ಶಿಫಾರಸ್ಸು ಮಾಡಿವೆ. ಸಾಮಾನ್ಯವಾಗಿ, ಹಿಂದಿನ ವೇತನ ಆಯೋಗ/ ಸಮಿತಿಗಳು ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಒಲವು ತೋರಿಸಿರುವುದಿಲ್ಲ ಅಥವಾ ಕಾರ್ಯ ಸಾಧ್ಯವೆಂದು ಪರಿಗಣಿಸಿರುವುದಿಲ್ಲ. ಆದಾಗ್ಯೂ, ವಾಡಿಕೆಯಂತೆ ರಾಜ್ಯ ವೇತನ ಶ್ರೇಣಿಗಳನ್ನು ಪರಿಷ್ಕರಿಸುವಾಗ ಕೇಂದ್ರ ಸರ್ಕಾರವು ಜಾರಿ ಮಾಡಿದ ಪರಿಷ್ಕೃತ ವೇತನ ಶ್ರೇಣಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

7th Pay Commission:

 

ಪ್ರಸಕ್ತ ರಾಜ್ಯ ಸರ್ಕಾರದ ವೇತನ ರಚನೆಯು ಒಂದು ಮುಖ್ಯ ವೇತನ ಶ್ರೇಣಿ ಹೊಂದಿದ್ದು, ಅದರಿಂದ ವಿಂಗಡಿಸಲಾದ 25 ವೇತನ ಶ್ರೇಣಿಗಳು, 18 ವೇತನ ಬಡ್ತಿ ದರಗಳು ಮತ್ತು 92 ಹಂತಗಳನ್ನು ಒಳಗೊಂಡಿದೆ. ವೇತನ ಶ್ರೇಣಿಗಳ ಕಾಲಾವಧಿಯು 13 ರಿಂದ 29 ವರ್ಷಗಳಾಗಿರುತ್ತದೆ. ಕನಿಷ್ಠ ಮೂಲ ವೇತನವು ಮಾಸಿಕ ರೂ. 17,000 ಮತ್ತು ಗರಿಷ್ಠ ರೂ.1,50,600 ಗಳಾಗಿರುತ್ತದೆ. ವಾರ್ಷಿಕ ವೇತನ ಬಡ್ತಿ ದರಗಳು ಕನಿಷ್ಠ ರೂ. 400 ರಿಂದ ಗರಿಷ್ಠ ರೂ. 3,100 ಗಳವರೆಗೆ ಇರುತ್ತವೆ.

https://mahitikannada.com/reliance-foundation-good-news-for-degree-pg-students-scholarship-from-reliance-foundation-2024/

ವೇತನ ರಚನೆಯನ್ನು ದಿನಾಂಕ 1ನೇ ಜುಲೈ, 2017ರಲ್ಲಿದ್ದಂತೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ 276.9 (ಮೂಲ 2001=100) ಕ್ಕೆ ಲೆಕ್ಕ ಹಾಕಿ ಕನಿಷ್ಠ ಮತ್ತು ಗರಿಷ್ಠ ವೇತನವನ್ನು ನಿರ್ಧರಿಸಿ ರೂಪಿಸಲಾಗಿದೆ. ದಿನಾಂಕ 1ನೇ ಜುಲೈ, 2017ರಿಂದ ಜಾರಿಗೆ ಬರುವಂತೆ ಮತ್ತು ಹಣಕಾಸು ಸೌಲಭ್ಯವನ್ನು ದಿನಾಂಕ 1ನೇ ಏಪ್ರಿಲ್, 2018 ರಿಂದ ಅನ್ವಯವಾಗುವಂತ ಪರಿಷ್ಕರಿಸಲಾದ ವೇತನ ಶ್ರೇಣಿಗಳನ್ನು ತೋರಿಸಲಾಗಿದೆ.

ಕೇಂದ್ರ ವೇತನ ರಚನೆಗೆ ಸಂಬಂಧಿಸಿದಂತೆ, 5ನೇ ಕೇಂದ್ರ ವೇತನ ಆಯೋಗದವರೆಗೆ ಪ್ರತ್ಯೇಕ ವೇತನ ಶ್ರೇಣಿ ಪದ್ಧತಿ (ಅಂದರ ಪ್ರತಿ ದರ್ಜೆಗೆ ನಿರ್ದಿಷ್ಟ ಶ್ರೇಣಿ) ಯನ್ನು ಮುಂದುವರೆಸಲಾಗಿದೆ. 6ನೇ ಕೇಂದ್ರ ವೇತನ ಆಯೋಗವು ಚಲಿತ ವೇತನ ಬ್ಯಾಂಡ್‌ಗಳನ್ನು (running pay bands ಶಿಫಾರಸ್ಸು ಮಾಡಿತು ಮತ್ತು ಹಂತ ವೇತನಗಳ (grade pay) ಹಂತಗಳಲ್ಲಿನ ವಿಭಿನ್ನತೆಯನ್ನು ಸೂಚಿಸಲು ಪರಿಚಯಿಸಿತು. ಒಂದು ಪ್ರಮುಖ ಹೊಸ ವಿಶೇಷತೆಯೆಂದರೆ ವಾರ್ಷಿಕ ವೇತನ ಬಡ್ತಿಗಳನ್ನು ಲೆಕ್ಕ ಹಾಕುವಾಗ ವೇತನ ಶ್ರೇಣಿಗಳಿಗೆ ನಿರ್ದಿಷ್ಟ ಪಡಿಸಿದ ದರಗಳ ನಿಶ್ಚಿತ ಮೊತ್ತದ ಬದಲಿಗೆ ಶೇಕಡಾವಾರು ಆಧಾರದ ಮೇಲೆ ನಿಗದಿಪಡಿಸಲಾಯಿತು.

https://mahitikannada.com/annabhagya-yojana-beneficiaries-will-no-longer-get-money-for-5-kg-of-rice-what-is-the-reason-2024/

6ನೇ ಕೇಂದ್ರ ವೇತನ ಆಯೋಗವು ಗ್ರೂಪ್ ‘ಡಿ’ ಹುದ್ದೆಗಳನ್ನು ರದ್ದುಪಡಿಸಲು ಮತ್ತು ಸಂದರ್ಭಾನುಸಾರ ಎಲ್ಲಿ ಅಗತ್ಯವಿದೆಯೋ ಅಲ್ಲಿ ಸೂಕ್ತ ತರಬೇತಿಯ ನಂತರ ಈ ಸಿಬ್ಬಂದಿಯನ್ನು ಗ್ರೂಪ್ ‘ಸಿ’ ಹುದ್ದೆಯಲ್ಲಿ ನಿಯುಕ್ತಿಗೊಳಿಸಲು ಸಹ ಶಿಫಾರಸ್ಸು ಮಾಡಿತು. 6ನೇ ಕೇಂದ್ರ ವೇತನ ಆಯೋಗದ ಮೊದಲು ಅಸ್ತಿತ್ವದಲ್ಲಿದ್ದ 36 ವೇತನ ಶ್ರೇಣಿಗಳನ್ನು ವಿಲೀನಗೊಳಿಸಿ 14 ವೇತನ ಹಂತಗಳನ್ನು 4 ಪ್ರತ್ಯೇಕ ವೇತನ ಬ್ಯಾಂಡ್‌ಗಳಲ್ಲಿ ಮತ್ತು 4 ಪ್ರತ್ಯೇಕ ಶ್ರೇಣಿಗಳಲ್ಲಿ ವ್ಯಾಪಿಸಿಕೊಂಡಂತೆ ರೂಪಿಸಲಾಯಿತು.

ಅದರಂತೆ, ಹಲವು ವರ್ಷಗಳ ಕಾಲಾವಧಿಯಲ್ಲಿ, ವೇತನ ಶ್ರೇಣಿಗಳ ಸಂಖ್ಯೆಯಲ್ಲಿ ಸ್ಥಿರವಾಗಿ ಇಳಿಕೆಯಾಗಿದ್ದಾಗ್ಯೂ, ಆಡಳಿತಾತ್ಮಕ ಅಗತ್ಯತೆಗಳ ಅನುಗುಣವಾಗಿ ಎರಡು ವೇತನ ಆಯೋಗಗಳ ಮಧ್ಯಂತರದ ಅವಧಿಯಲ್ಲಿ ಸರ್ಕಾರವು ವೇತನ ಶ್ರೇಣಿಗಳ ಸಂಖ್ಯೆಯನ್ನು ಏರಿಕೆ ಮಾಡಿರುವ ಉದಾಹರಣೆಗಳಿರುತ್ತವೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿರುವುದೆಂದರೆ, ಕರ್ನಾಟಕದಲ್ಲಿರುವುದಕ್ಕೆ ವಿಭಿನ್ನವಾಗಿ, ಕೇಂದ್ರ ಸರ್ಕಾರದ ವೇತನ ಶ್ರೇಣಿಗಳ ಪರಿಷ್ಕರಣೆಯು ಪೂರ್ವ ಪರಿಷ್ಕೃತ ವೇತನ ಶ್ರೇಣಿಗಳೊಂದಿಗೆ ಒಂದಕ್ಕೊಂದು ಸಂವಾದಿ/ ತತ್ಸಮಾನ ಆಗಿರುವುದಿಲ್ಲ ಎಂದು ವರದಿ ತಿಳಿಸಿದೆ.

   ಧನ್ಯವಾದಗಳು….

 

 

 

 

 

WhatsApp Group Join Now
Telegram Group Join Now