Government Employee: ಸರ್ಕಾರಿ ನೌಕರರ ವೇತನ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ-2024.

Government Employee: ಸರ್ಕಾರಿ ನೌಕರರ ವೇತನ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ-2024.

Government Employee:

  ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ  ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.

   Government Employee: ಕರ್ನಾಟಕ ಸರ್ಕಾರ ರಾಜ್ಯದ ಸರ್ಕಾರಿ ನೌಕರರಿಗೆ ವೇತನದ ವಿಚಾರದಲ್ಲಿ ಸಿಹಿಸುದ್ದಿ ನೀಡಿದೆ. ರಾಜ್ಯಮಟ್ಟದಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ತಿಂಗಳ ಕೊನೆಯ ದಿನ (ಒಂದೇ ದಿನ) ವೇತನ ಪಾವತಿಸುವ ಬಗ್ಗೆ ಆದೇಶವನ್ನು ಹೊರಡಿಸಿದೆ. ಸರ್ಕಾರ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲಿದ್ದು, ಖಜಾನೆ ಇಲಾಖೆಗೆ ಅಧಿಕಾರಿ, ಸಿಬ್ಬಂದಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಕೆಲವು ಮಾರ್ಗಸೂಚಿಗಳನ್ನು ಸಹ ಹೊರಡಿಸಿದ್ದಾರೆ.

  ಈ ಆದೇಶನಿಯಂತ್ರಾಣಾಧಿಕಾರಿಗಳ (CO) ಹಂತದಲ್ಲಿ ಅಧಿಕಾರಿ/ ಸಿಬ್ಬಂದಿಗಳ ವೇತನ ಹಾಗೂ ವೇತನ ಸಂಬಂಧಿತ ಕ್ಲೈಮುಗಳನ್ನು ಸೆಳೆದು ವಿತರಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ. ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 80 (ಬಿ)ರಲ್ಲಿನ ಸೂಚನೆಗಳಂತೆ, ಮಾರ್ಚ್‌ ತಿಂಗಳನ್ನು ಹೊರತುಪಡಿಸಿ, ಉಳಿದ ತಿಂಗಳುಗಳ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಆಯಾ ತಿಂಗಳ ಕೊನೆಯ ಕೆಲಸದ ದಿನಾಂಕದಂದು, ಮಾರ್ಚ್ ತಿಂಗಳ ವೇತನ ಮತ್ತು ಭತ್ಯೆಗಳನ್ನು ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಕೆಲಸದ ದಿನಾಂಕದಂದು ವಿತರಿಸಬೇಕಾಗಿರುತ್ತದೆ.

   ಕೆಲವೊಂದು ಡಿಡಿಓರವರು, ಕೆಲವೊಂದು ಕಾರಣಗಳಿಂದಾಗಿ, ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವಲ್ಲಿ ವಿಳಂಬವಾಗುತ್ತಿದ್ದು, ಇದರಿಂದ ಸರ್ಕಾರಿ ನೌಕರರು ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಪಡೆಯಲು ಸಾಧ್ಯವಾಗದಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಸೆಳೆಯದೇ ಇರುವುದರಿಂದ ಅನುದಾನದ ನಿರ್ವಹಣೆಯಲ್ಲಿಯು ವ್ಯತ್ಯಯವಾಗುತ್ತಿದೆ ಎಂದು ಹೇಳಿದೆ.

  ಹೆಚ್ಚಿನ ಬಜೆಟ್ ನಿಯಂತ್ರಣ ಮತ್ತು ಲೆಕ್ಕಸಮನ್ವಯದ ದೃಷ್ಠಿಯಿಂದ ಹಾಗೂ ಬಿಲ್ಲುಗಳ ಪ್ರಮಾಣವನ್ನು ಕಡಿಮೆ ಮಾಡುವ ದೃಷ್ಠಿಯಿಂದ, ಪ್ರಸ್ತುತ ಡಿಡಿಓರವರು ಅವರ ವ್ಯಾಪ್ತಿಯಲ್ಲಿನ, ಸರ್ಕಾರಿ ಅಧಿಕಾರಿ/ ನೌಕರರ ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವ ವ್ಯವಸ್ಥೆಯ ಬದಲು, ಸಂಬಂದಿಸಿದ ನಿಯಂತ್ರಾಣಾಧಿಕಾರಿಗಳು (CO) ತಮ್ಮ ವ್ಯಾಪ್ತಿಯಲ್ಲಿನ ಡಿಡಿಓರವರ ಹಾಗೂ ಅವರ ವ್ಯಾಪ್ತಿಯಲ್ಲಿನ ಅಧಿಕಾರಿ/ ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರವು ಉದ್ದೇಶಿಸಿದೆ. ಪ್ರಾರಂಭದಲ್ಲಿ ಈ ವ್ಯವಸ್ಥೆಯನ್ನು ಖಜಾನೆ ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ನಂತರ ಈ ವ್ಯವಸ್ಥೆಯನ್ನು ಇತರ ಎಲ್ಲಾ ಇಲಾಖೆಗಳಿಗೆ ವಿಸ್ತರಿಸಲು ಯೋಜಿಸುವ ಸಲುವಾಗಿ ಆದೇಶಿಸಲಾಗಿದೆ.

  ಸರ್ಕಾರಿ ಅಧಿಕಾರಿ/ ನೌಕರರ ವೇತನ ಮತ್ತು ಭತ್ಯೆಗಳನ್ನು ಡಿಡಿಓರವರು ಸೆಳೆದು ವಿತರಿಸುವ ವ್ಯವಸ್ಥೆಯ ಬದಲು, ಸಂಬಂಧಿಸಿದ ನಿಯಂತ್ರಾಣಾಧಿಕಾರಿಗಳು (CO) ತಮ್ಮ ವ್ಯಾಪ್ತಿಯಲ್ಲಿನ ಡಿಡಿಓರವರ ಹಾಗೂ ಅವರ ವ್ಯಾಪ್ತಿಯಲ್ಲಿನ ಅಧಿಕಾರಿ/ ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳನ್ನು ಸಂಚಿತವಾಗಿ, ಸೆಳದು ವಿತರಿಸುವ ವ್ಯವಸ್ಥೆಯನ್ನು ಖಜಾನೆ ಇಲಾಖೆಯಲ್ಲಿ, ಸಪ್ಟೆಂಬರ್ ತಿಂಗಳ ವೇತನದಿಂದ ಪ್ರಾಯೋಗಿಕವಾಗಿ, ಜಾರಿಗೆ ತರಲು ಸರ್ಕಾರವು ಆದೇಶಿಸಿದೆ. ಈ ಸಂಬಂಧ ಕಾರ್ಯ ವಿಧಾನ ಡಿಡಿಓ ಹಾಗೂ ನಿಯಂತ್ರಣಾಧಿಕಾರಿಗಳ ಕರ್ತವ್ಯಗಳನ್ನು ವಿವರಿಸಲಾಗಿದೆ.

   ಕಾರ್ಯವಿಧಾನ ಮತ್ತು ಕರ್ತವ್ಯಗಳು:

 ಡಿಡಿಓರವರು ಪ್ರತಿ ತಿಂಗಳು, ತಮ್ಮ ಕಚೇರಿ (Establishment) ವ್ಯಾಪ್ತಿಯ ಎಲ್ಲಾ ಅಧಿಕಾರಿ ನೌಕರರ ವೇತನ ಭತ್ಯೆಗಳ ಕ್ಲೈಮುಗಳನ್ನು ಹೆಚ್‌ಆರ್‌ಎಂಎಸ್‌ನಲ್ಲಿ ಅಪ್‌ಡೇಟ್ ಮಾಡುವುದು. ಇದಕ್ಕೆ ಪೂರ್ವಭಾವಿಯಾಗಿ, ಹಾಜರಾತಿ ಪರಿಶೀಲನೆ, ಸಾಮಾನ್ಯ ಆರ್ಥಿಕ ಅಧಿಕಾರದ ಪ್ರತ್ಯಾಯೋಜನೆಯಂತೆ ರಜೆ ಮಂಜೂರಾತಿ, ವೇತನ ಬಡ್ತಿ ಇತ್ಯಾದಿ ಮಂಜೂರಾತಿಗಳನ್ನು ಪೂರ್ಣಗೊಳಿಸುವುದು ಹಾಗೂ ವೇತನದಲ್ಲಿನ ಮಾಡಬೇಕಾದ ಕಡಿತಗಳನ್ನು ಅಪ್‌ಡೇಟ್ ಮಾಡುವುದು. ಬಿಲ್ಲಿಗೆ ಲಗ್ಗತಿಸಬೇಕಾದ ಮಂಜೂರಾತಿ ಆದೇಶಗಳು, ದಾಖಲಿಸಬೇಕಾದ ಪ್ರಮಾಣಪತ್ರಗಳನ್ನು ಸೃಜಿಸಿ ಅಪ್‌ಲೋಡ್ ಮಾಡುವುದು.

    ಇದೇ ರೀತಿ ನಿಯಂತ್ರಣಾಧಿಕಾರಿಗಳು (CO), ತಮ್ಮ ಕಚೇರಿಗೆ (Establishment) ಸಂಬಂಧಿಸಿದಂತೆ, ಡಿಡಿಓ ಪಾತ್ರದಲ್ಲಿ, ತಮ್ಮ ವ್ಯಾಪ್ತಿಯ ಅಧಿಕಾರಿ ನೌಕರರ ವೇತನ ಭತ್ಯೆಗಳ ಕ್ಲೈಮುಗಳನ್ನು ಹಾಗೂ ಕಡಿತಗಳನ್ನು ಹೆಚ್‌ಆರ್‌ಎಂಎಸ್‌ನಲ್ಲಿ ಅಪ್‌ಡೇಟ್ ಮಾಡುವುದು.

   ತಾಲ್ಲೂಕಿನಿಂದ ಬಿಲ್ಲುಗಳನ್ನು ಗೊತ್ತುಪಡಿಸಿದ ದಿನಾಂಕದೊಳಗೆ ಜಿಲ್ಲೆಯ ಅಧಿಕಾರಿಗಳಿಗೆ ಸಲ್ಲಿಸಬೇಕು ಮತ್ತು ನಿಗದಿತ ದಿನಾಂಕದೊಳಗೆ ಜಿಲ್ಲಾ ಅಧಿಕಾರಿಯು ಅನುಮೋದನೆ ನೀಡಬೇಕು. ಲಾಗಿನ್ ಸ್ವಯಂಚಾಲಿತಗೊಳಿಸಬೇಕು ಮತ್ತು ವಿಳಂಬವು ಪುನರಾರ್ವತನೆಯಾಗಬಾರದು.

   ಇದಕ್ಕಾಗಿ ಪ್ರತಿ ತಿಂಗಳ 25ನೇ ದಿನಾಂಕವನ್ನು ನಿಗದಿತ ದಿನಾಂಕವೆಂದು (Cut-off Date) ಪರಿಗಣಿಸುವುದು. ನಂತರದ ಅವಧಿಯಲ್ಲಿ, ವೇತನ/ ಕಡಿತಗಳಲ್ಲಿ, ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ಮುಂದಿನ ತಿಂಗಳಲ್ಲಿ ಹೊಂದಾಣಿಕೆ ಮಾಡುವುದು, ಡಿಡಿಓರವರು (ಉಪಖಜಾನಾಧಿಕಾರಿಗಳು), ಅಧಿಕಾರಿ ನೌಕರರ ವೇತನ ಭತ್ಯೆಗಳ ಕ್ಲೈಮುಗಳನ್ನು ಹೆಚ್‌ ಆರ್‌ಎಂಎಸ್‌ನಲ್ಲಿ ಅಪ್‌ಡೇಟ್ ಮಾಡಿದ ನಂತರ, ನಿಯಂತ್ರಾಣಾಧಿಕಾರಿಗಳು (ಜಿಲ್ಲಾ ಖಜಾನಾಧಿಕಾರಿಗಳು), ತಮ್ಮ ಕಚೇರಿಯ ಕ್ಲೈಮುಗಳು ಸೇರಿದಂತೆ, ವ್ಯಾಪ್ತಿಯಲ್ಲಿನ ಎಲ್ಲಾ ಡಿಡಿಓರವರು (ಉಪಖಜಾನಾಧಿಕಾರಿಗಳು) ಅಪ್‌ಡೇಟ್ ಮಾಡಿರುವ ಕ್ಲೈಮುಗಳಿಗೆ ಸಂಬಂಧಿಸಿದಂತೆ ಸಂಚಿತವಾಗಿ ಲೆಕ್ಕ ಶೀರ್ಷಿಕೆವಾರು ಕರಡು ಬಿಲ್ಲುಗಳನ್ನು (ಪತ್ರಾಂಕಿತ ಹಾಗೂ ಸಿಬ್ಬಂದಿ) ಸೃಜಿಸುವುದು.

   ಡಿಡಿಓರವರು ನಿಗದಿತ ದಿನಾಂಕದೊಳಗೆ ಕ್ಲೈಮುಗಳನ್ನು ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ. ತಮ್ಮ ವ್ಯಾಪ್ತಿಯ ಎಲ್ಲಾ ಡಿಡಿಓರವರು, ನಿಗದಿತ ದಿನಾಂಕದೊಳಗೆ ಡಾಟಾವನ್ನು ಅಪ್‌ಡೇಟ್ ಮಾಡುವುದನ್ನು ಖಚಿತ ಪಡಿಸಿಕೊಳ್ಳುವುದು ನಿಯಂತ್ರಣಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಒಂದು ವೇಳೆ ಯಾವುದೇ ಕಾರಣಕ್ಕೆ ಒಬ್ಬರು ಅಥವಾ ಇಬ್ಬರು ಡಿಡಿಓರವರು ಅಪ್‌ಡೇಟ್ ಮಾಡದಿರುವ ಸಂದರ್ಭದಲ್ಲಿ, ನಿಯಂತ್ರಾಣಾಧಿಕಾರಿಗಳು, ಅಪ್‌ಡೇಟ್ ಆಗಿರುವ ಕ್ಲೈಮುಗಳ ಸಂಬಂಧ ಬಿಲ್ಲನ್ನು ಸೆಳೆಯಲು ಕ್ರಮ ಕೈಗೊಳ್ಳುವುದು ಹಾಗೂ ಅಪ್‌ಡೇಟ್ ಮಾಡಲು ವಿಫಲವಾದ ಕಾರಣಗಳ ಕುರಿತು ಪರಿಶೀಲಿಸಿ ಇಲಾಖಾ ಮುಖ್ಯಸ್ಥರಿಗೆ ವರದಿ ಮಾಡುವುದು.

       ಧನ್ಯವಾದಗಳು…….

WhatsApp Group Join Now
Telegram Group Join Now

1 thought on “Government Employee: ಸರ್ಕಾರಿ ನೌಕರರ ವೇತನ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ-2024.”

Leave a Comment