IRCTC Recruitment 2025:ಭಾರತೀಯ ರೈಲ್ವೆಯ ಪ್ರವಾಸೋದ್ಯಮ ಮಾಸಿಕ ₹30,000 ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನ.

IRCTC Recruitment 2025:ಭಾರತೀಯ ರೈಲ್ವೆಯ ಪ್ರವಾಸೋದ್ಯಮ ಮಾಸಿಕ ₹30,000 ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನ.

IRCTC

IRCTC Recruitment 2025: ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ IRCTC ನಲ್ಲಿ ಖಾಲಿ ಇರುವ 6 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಗಮನಿಸಬೇಕಾದ ಪ್ರಮುಖ ಅಂಶಗಳು ಮತ್ತು ಆಯ್ಕೆ ಆದವರಿಗೆ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಸಂಪರ್ಣ ಮಾಹಿತಿಯನ್ನು  ನೀಡಲಾಗಿದೆ ಗಮನಿಸಿ.

ಭಾರತೀಯ ಪ್ರವಾಸೋದ್ಯಮ ವಿಭಾಗವಾಗಿರುವ IRCTC ಹಾಸ್ಪಿಟಾಲಿಟಿ ಮಾನಿಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಹುದ್ದೆಗಳು ಖಾಲಿ ಇದ್ದು, ಹಾಸ್ಪಿಟಾಲಿಟಿ/ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ BSC ಅಥವಾ BBA/MBA ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಬೇಕೆಂದರೆ ಗರಿಷ್ಠ 28 ವರ್ಷಗಳು ಆಗಿರಬೇಕಾಗುತ್ತದೆ. ಇನ್ನು ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಮಾರ್ಚ್ 4ರೊಳಗೆ ಅಧಿಕೃತ ವೆಬ್‌ಸೈಟ್ irctc.comಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳು ಫಾರ್ಮ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 6 ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, 2 ಹುದ್ದೆಗಳು ಸಾಮಾನ್ಯ ವರ್ಗ, 3 OBC ಮತ್ತು 1 ಹುದ್ದೆ SC ವರ್ಗಕ್ಕೆ ಮೀಸಲಿವೆ.

ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 28 ವರ್ಷಗಳು ಆಗಿದ್ದು, ಗರಿಷ್ಠ ವಯೋಮಿತಿಯಲ್ಲಿ OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು SC/ST ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗಿದೆ. ಅಂಗವಿಕಲ ವರ್ಗಕ್ಕೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.

ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ 30,000 ರೂಪಾಯಿ ವೇತನ ಸಿಗಲಿದೆ. ವೇತನದ ಹೊರತಾಗಿ ಇತರ ಭತ್ಯೆಗಳನ್ನು ಸಹ ನೀಡಲಾಗುವುದು. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಯಶಸ್ವಿಯಾದ ಆನಂತರ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು. ಈ ನೇಮಕಾತಿಯನ್ನು 2 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಮಾಡಲಾಗುತ್ತದೆ.

WEBSITE LINK – CLICK HERE

WhatsApp Group Join Now
Telegram Group Join Now

Leave a Comment