PUC Result Latest Update 2026:ಬೆಂಗಳೂರು ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ ದ್ವಿತೀಯ ಪಿಯುಸಿ (2nd PUC) ಫಲಿತಾಂಶಕ್ಕೆ ಇದೀಗ ಮಹತ್ವದ ಅಪ್ಡೇಟ್ ಸಿಕ್ಕಿದೆ. ಪ್ರಸಕ್ತ ಸಾಲಿನ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಏಪ್ರಿಲ್ 7ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಹೆಚ್ಚು ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
PUC Result Latest Update 2026: ಪರೀಕ್ಷೆಯ ಸಂಪೂರ್ಣ ವಿವರ
ಈ ವರ್ಷ ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಸುಗಮವಾಗಿ ನಡೆದಿದ್ದು, ವಿದ್ಯಾರ್ಥಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದರು.
PUC Result Latest Update 2026: ಮೌಲ್ಯಮಾಪನ ವೇಗದಲ್ಲಿ
ಮಾರ್ಚ್ 20ರಿಂದಲೇ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈಗ ಬಹುತೇಕ ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಪರಿಶೀಲನೆ ಮುಗಿದಿದೆ. ಇದರಿಂದಾಗಿ ಫಲಿತಾಂಶ ಪ್ರಕಟಣೆ ದಿನಾಂಕ ಸಮೀಪಿಸುತ್ತಿದೆ.
ಫಲಿತಾಂಶ ಯಾವಾಗ?
ಶಿಕ್ಷಣ ಇಲಾಖೆ ನೀಡಿರುವ ಸಂಭಾವ್ಯ ವೇಳಾಪಟ್ಟಿಯ ಪ್ರಕಾರ:
👉 ಏಪ್ರಿಲ್ 7, 2026 – Result Expected Date
(ಅಧಿಕೃತ ಪ್ರಕಟಣೆ ಯಾವಾಗ ಬೇಕಾದರೂ ಬರಬಹುದು, ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಗಮನಿಸುತ್ತಿರಲಿ)
- Read more…
2026ರಿಂದ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ: ತ್ರಿಭಾಷಾ ಸೂತ್ರ & 2 ಹಂತದ ಪರೀಕ್ಷಾ ವ್ಯವಸ್ಥೆ ಸಂಪೂರ್ಣ ಮಾಹಿತಿ!
ಫಲಿತಾಂಶ ಹೇಗೆ ನೋಡಬಹುದು?
ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು:
- ಅಧಿಕೃತ ವೆಬ್ಸೈಟ್ನಲ್ಲಿ ನೋಂದಣಿ ಸಂಖ್ಯೆ ಬಳಸಿ ಫಲಿತಾಂಶ ಪರಿಶೀಲಿಸಬಹುದು
- ಮೊಬೈಲ್ ಮೂಲಕ ಸಹ ಸುಲಭವಾಗಿ access ಮಾಡಬಹುದು
ವಿದ್ಯಾರ್ಥಿಗಳಿಗೆ ಮುಖ್ಯ ಸೂಚನೆ
- ವೆಬ್ಸೈಟ್ slow ಆಗುವ ಸಾಧ್ಯತೆ ಇದೆ – ಸ್ವಲ್ಪ ಸಮಯದ ನಂತರ ಮತ್ತೆ try ಮಾಡಿ
- Result screenshot/save ಮಾಡಿಕೊಂಡು ಇಡಿ
- Official mark sheet ನಂತರ ಶಾಲೆಯಿಂದ ಪಡೆಯಿರಿ