Aadhaar And Pan Card: WhatsApp ನಲ್ಲೇ ಆಧಾರ್ & ಪಾನ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳುವದು ಹೇಗೆ ಮಾಹಿತಿ ಇಲ್ಲಿದೆ-2025.

Aadhaar And Pan Card: WhatsApp ನಲ್ಲೇ ಆಧಾರ್ & ಪಾನ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳುವದು ಹೇಗೆ ಮಾಹಿತಿ ಇಲ್ಲಿದೆ-2025.

Aadhaar And Pan Card

Aadhaar And Pan Card:ಆಧಾರ್, ಪಾನ್ ಕಾರ್ಡ್ ಗಳು ಪ್ರಮುಖ ದಾಖಲೆಗಳಾಗಿದ್ದು. ಯಾವುದೇ ಅರ್ಜಿ ಸಲ್ಲಿಕೆಗೆ ಇವುಗಳು ಕಡ್ಡಾಯವಾಗಿ ಬೇಕೇ ಬೇಕಾಗುತ್ತದೆ. ಇವುಗಳನ್ನು ಇದೀಗ ವಾಟ್ಸಪ್‌(WhatsApp)ನಲ್ಲೇ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಹಾಗಿದ್ದರೆ ಹೇಗೆ ಪಡೆಯಬಹುದು ಎನ್ನುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

MyGov ಹೆಲ್ಪ್‌ಡೆಸ್ಕ್ ವಾಟ್ಸ್​ಆ್ಯಪ್‌ ಅಂತಾ ಸಹಾಯವಾಣಿ ನಂಬರ್‌ವೊಂದನ್ನು ನೀಡಿದ್ದು, ಇದರ ಸಹಾಯದಿಂದ ಡಿಜಿಲಾಕರ್ ಖಾತೆಗೆ ಸೈನ್ ಅಪ್ ಆಗಬೇಕು. ಈ ಮೂಲಕ ದಾಖಲೆಗಳನ್ನು ನೀವು ವಾಟ್ಸ್​ಆ್ಯಪ್‌ನಲ್ಲಿ ಪಡೆಯಬಹುದಾಗಿದೆ. ಒಂದು ವೇಳೆ ನೀವು ಈಗಾಗಲೇ ಡಿಜಿಲಾಕರ್ ಅಕೌಂಟ್ ಹೊಂದಿದ್ದರೆ ಈ ದಾಖಲೆಗಳನ್ನು ಮತ್ತಷ್ಟು ಸುಲಭವಾಗಿ ಪಡೆದುಕೊಳ್ಳವಹುದಾಗಿದೆ.

ವಾಟ್ಸ್​ಆ್ಯಪ್ ಪ್ರಸ್ತುತ ಕೇವಲ ಚಾಟ್ ಮಾಡುವುದಕ್ಕೆ, ಫೋಟೋ, ಡಾಕ್ಯೂಮೆಂಟ್‌, ವಿಡಿಯೋ ಕಳುಹಿಸಲು ಮಾತ್ರ ಸೀಮಿತ ಆಗಿಲ್ಲ. ಜೊತೆಗೆ ಅನೇಕ ಪ್ರಯೋಜನಗಳನ್ನ ಇದರಲ್ಲಿ ನೀಡಲಾಗಿದೆ. ಭಾರತದಲ್ಲಿ ವಾಟ್ಸ್​ಆ್ಯಪ್ ಬಳಕೆದಾರರು ಪ್ಯಾನ್, ಆಧಾರ್, ಚಾಲನ ಪರವಾನಗಿ, ವಿಮಾ ಪಾಲಿಸಿ ಸೇರಿ ಹಲವು ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಡೌನ್​ಲೋಡ್ ಮಾಡುವ ಸಂಪೂರ್ಣ ವಿಧಾನಗಳು.

+91-9013151515 ಈ ನಂಬರ್ ಅನ್ನು MyGov HelpDesk ಎಂದು ನಿಮ್ಮ ಫೋನ್‌ನಲ್ಲಿ ಸೇವ್ ಮಾಡಿ.
• ವಾಟ್ಸ್​ಆ್ಯಪ್‌ MyGov HelpDesk ಚಾಟ್‌ಬಾಕ್ಸ್‌ನಲ್ಲಿ ನಮಸ್ತೆ, ಹಾಯ್ ಎಂದು ಟೈಪ್ ಮಾಡಿ ಕಳುಹಿಸಿ.
• ಡಿಜಿಲಾಕರ್ ಅಥವಾ ಕೋವಿನ್ ಸೇವೆ ಎಂಬ ಎರಡು ಆಯ್ಕೆ ಕಾಣಿಸಲಿದ್ದು, ಇಲ್ಲಿ ಡಿಜಿಲಾಕರ್ ಸೇವೆಗಳು ಎಂಬುದನ್ನು ಆಯ್ಕೆ ಮಾಡಿ.
• ಡಿಜಿಲಾಕರ್ ಖಾತೆಯನ್ನು ಹೊಂದಿದ್ದೀರಾ ಎಂದು ಚಾಟ್‌ಬಾಟ್ ಕೇಳಿದಾಗ ಹೌದು ಎಂಬುದರ ಮೇಲೆ ಕ್ಲಿಕ್‌ ಮಾಡಿ.
• ಒಂದು ವೇಳೆ ಖಾತೆ ಹೊಂದಿಲ್ಲದಿದ್ದರೆ, ಅಧಿಕೃತ ವೆಬ್‌ಸೈಟ್ ಅಥವಾ ಡಿಜಿಲಾಕರ್ ಅಪ್ಲಿಕೇಶನ್‌ಗೆ ಭೇಟಿ ನೀಡಿ. ಈ ಮೂಲಕ ಮೂಲಕ ನಿಮ್ಮ ಖಾತೆಯನ್ನು ರಚಿಸಿಕೊಳ್ಳಿ.

• ನಿಮ್ಮ ಡಿಜಿಲಾಕರ್ ಖಾತೆಯನ್ನು ಲಿಂಕ್ ಮಾಡಲು ಮತ್ತು ದೃಢೀಕರಿಸಲು ನಿಮ್ಮ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕಳುಹಿಸಿ.
• ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಅನ್ನು ಸ್ವೀಕರಿಸುತ್ತೀರಿ. ಅದನ್ನು ಚಾಟ್‌ಬಾಕ್ಸ್‌ನಲ್ಲಿ ನಮೂದಿಸಿ.

  •  ಚಾಟ್‌ಬಾಕ್ಸ್‌ ಪಟ್ಟಿಗಳು ನಿಮ್ಮ ಡಿಜಿಲಾಕರ್ ಖಾತೆಯೊಂದಿಗೆ ಲಿಂಕ್ ಮಾಡಲಾದ ಎಲ್ಲಾ ದಾಖಲೆಗಳನ್ನು ನಿಮಗೆ ತೋರಿಸುತ್ತದೆ.
    • ಡೌನ್‌ಲೋಡ್ ಮಾಡಲು, ಕಳುಹಿಸಲಾದ ದಾಖಲೆ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ಕಳುಹಿಸಿ.
  • • ನಿಮ್ಮ ಡಾಕ್ಯುಮೆಂಟ್ ಪಿಡಿಎಫ್‌ನಲ್ಲಿ ಚಾಟ್ ಬಾಕ್ಸ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
WhatsApp Group Join Now
Telegram Group Join Now

Leave a Comment