Aadhar Model Smart Card To Farmers: ರೈತರಿಗೆ ಕೇಂದ್ರ ಸರ್ಕಾರದಿಂದ ಆಧಾರ್‌ ಮಾದರಿ ಸ್ಮಾರ್ಟ್ ಕಾರ್ಡ್: ಇದರ ಅನುಕೂಲತೆಗಳೇನು?-2024.

Aadhar Model Smart Card To Farmers: ರೈತರಿಗೆ ಕೇಂದ್ರ ಸರ್ಕಾರದಿಂದ ಆಧಾರ್‌ ಮಾದರಿ ಸ್ಮಾರ್ಟ್ ಕಾರ್ಡ್: ಇದರ ಅನುಕೂಲತೆಗಳೇನು?-2024.

Aadhar Model Smart Card To Farmers:

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ  ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.

Aadhar Model Smart Card To Farmers:ಮುಂದಿನ ತಿಂಗಳಿನಿಂದಲೇ ರೈತರಿಗೆ ಆಧಾರ್ ಮಾದರಿಯ ವಿಶಿಷ್ಟ ಗುುತಿನ ಚೀಚಿ ನೀಡುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಕೃಷಿ ಕಾರ್ಯದರಶಿ ದೇವೇಶ್ ಚತುರ್ವೇದಿ ತಿಳಿಸಿದ್ದಾರೆ. ಸರ್ಕಾರದ ಹಲವು ಯೋಜನಗಳನ್ನು ರೈತರಿಗೆ ತಲುಪಿಸಲು ಇದು ಸಹಕಾರಿ ಆಗಲಿದೆ. ಮುಂದಿನ ವರ್ಷ ಮಾರ್ಚ್ ವೇಳೆೆಗೆ ಸುಮಾರು 5 ಕೋಟಿ ರೈತರನ್ನು ಇದಕ್ಕೆ ಸೇರಿಸುವ ಗುರಿ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

  ಪ್ರಮುಖ ಅಂಶಗಳು:

ಕೇಂದ್ರ ಸರ್ಕಾರದಿಂದ ಆಧಾರ್ ಕಾರ್ಡ್ ಸ್ಮಾರ್ಟ್ ಕಾರ್ಡ್ ಯೋಜನೆಗೆ ಮುಂದಿನ ತಿಂಗಳು ಚಾಲನೆ
ಇದರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಸೇರಿದಂತೆ ವಿವಿಧ ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲ
ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಸುಮಾರು 5 ಕೋಟಿ ರೈತರ ನೋಂದಾವಣೆಯ ಗುರಿ

   ರೈತರಿಗೆ ಆಧಾರ್‌ ಮಾದರಿಯ ವಿಶಿಷ್ಟ ಗುರುತಿನ ಕಾರ್ಡ್‌ ನೀಡುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸರಕಾರ ಘೋಷಿಸಿದೆ.

    ಸುದ್ದಿ ಸಂಸ್ಥೆ ಜತೆ ಮಾತನಾಡಿದ ಕೇಂದ್ರ ಕೃಷಿ ಕಾರ್ಯದರ್ಶಿ ದೇವೇಶ್‌ ಚತುರ್ವೇದಿ ಅವರು, ”ಅಕ್ಟೋಬರ್‌ ಮೊದಲ ವಾರದಲ್ಲಿ ರೈತರ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು. ನೋಂದಣಿ ಹೇಗೆ ನಡೆಯಬೇಕು ಎಂಬ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಐದು ಕೋಟಿ ರೈತರನ್ನು ನೋಂದಾಯಿಸಬೇಕು ಎನ್ನುವ ಗುರಿ ಹೊಂದಲಾಗಿದೆ,” ಎಂದು ತಿಳಿಸಿದ್ದಾರೆ.

   ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 2,817 ಕೋಟಿ ರೂ. ವೆಚ್ಚದೊಂದಿಗೆ ‘ಡಿಜಿಟಲ್‌ ಅಗ್ರಿಕಲ್ಚರ್‌ ಮಿಷನ್‌’ಗೆ ಅನುಮೋದನೆ ನೀಡಿದೆ. ಅದರ ಭಾಗವಾಗಿ ರೈತರ ಮಾಹಿತಿಯ ಡಿಜಿಟಲೀಕರಣಕ್ಕಾಗಿ ಗುರುತಿನ ಚೀಟಿ ನೀಡುವ ಯೋಜನೆ ರೂಪಿಸಲಾಗಿದೆ.

   ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿ ವಿಶಿಷ್ಟ ಕಾರ್ಡ್‌ಗೆ ನೋಂದಣಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಈಗ ಅದನ್ನು 19 ರಾಜ್ಯಗಳಿಗೆ ವಿಸ್ತರಿಸಲಾಗುತ್ತದೆ.

ಅನುಕೂಲಗಳೇನು?:

   ರೈತರ ನೋಂದಣಿಯಾದ ಕೂಡಲೇ ಆಧಾರ್‌ ಮಾದರಿಯ ವಿಶಿಷ್ಟ ಗುರುತಿನ ಕಾರ್ಡ್‌ ನೀಡಲಾಗುತ್ತದೆ. ಕನಿಷ್ಠ ಬೆಂಬಲ ಬೆಲೆ, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸೇರಿದಂತೆ ಹಲವು ಕೃಷಿ ಸಂಬಂಧಿತ ಯೋಜನೆಗಳ ನೆರವು ಪಡೆಯಲು ವಿಶಿಷ್ಟ ಕಾರ್ಡ್‌ ಒತ್ತಾಸೆ ನೀಡುತ್ತದೆ. ಸರಕಾರದ ಯೋಜನೆ ಮತ್ತು ಕೆಲವೊಂದು ಕಾರ್ಯಕ್ರಮಗಳನ್ನು ವಿಸ್ತರಿಸಲು ಅಗತ್ಯವಿರುವ ಅಂಕಿ-ಅಂಶಗಳು, ಮಾಹಿತಿಯನ್ನೂ ಸರಕಾರಕ್ಕೆ ನೀಡಲಿದೆ.

   ಈ ಗುರುತಿನ ಕಾರ್ಡ್‌ನಲ್ಲಿ ಭೂ ದಾಖಲೆಗಳು, ಜಾನುವಾರುಗಳ ಮಾಲೀಕತ್ವ, ಬಿತ್ತಿದ ಬೆಳೆಗಳು ಮತ್ತು ಪಡೆದ ಪ್ರಯೋಜನಗಳು ಸೇರಿದಂತೆ ವಿವಿಧ ರೈತ-ಸಂಬಂಧಿತ ಡೇಟಾವನ್ನು ಲಿಂಕ್‌ ಮಾಡಲಾಗುತ್ತದೆ.

  ರೈತರ ರಿಜಿಸ್ಟ್ರಿ:

   ”ಈಗ ಕೃಷಿಕರು ಯಾವುದೇ ಯೋಜನೆಯ ಲಾಭ ಪಡೆಯಲು ಸಲ್ಲಿಸುವ ಅರ್ಜಿಯು ವಿವಿಧ ಹಂತಗಳಲ್ಲಿ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಇದರಿಂದ ಮಂಜೂರಾತಿ ವಿಳಂಬವಾಗುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿಯೇ ‘ರೈತರ ರಿಜಿಸ್ಟ್ರಿ’ ರೂಪಿಸಲಾಗುತ್ತದೆ. ಈಗ ಸರಕಾರದ ಬಳಿ ಇರುವ ದತ್ತಾಂಶಗಳು ರಾಜ್ಯಗಳು ಒದಗಿಸುವ ಬೆಳೆ ವಿವರ, ಕೃಷಿ ಜಮೀನು ಮಾಹಿತಿ ಮಾತ್ರ ಇದೆ. ಆದರೆ ವೈಯಕ್ತಿಕವಾಗಿ ರೈತರ ವಿವರಗಳಿಲ್ಲ. ಈ ಅಂತರವನ್ನು ನಿವಾರಿಸುವ ಗುರಿಯನ್ನು ‘ರಿಜಿಸ್ಟ್ರಿ’ ಹೊಂದಿದೆ,” ಎಂದು ಚತುರ್ವೇದಿ ತಿಳಿಸಿದ್ದಾರೆ.
ಡಿಜಿಟಲ್‌ ಅಗ್ರಿಕಲ್ಚರ್‌ ಮಿಷನ್‌ಗೆ ಕೇಂದ್ರ ಸರಕಾರ ರೂ. 2,817 ಕೋಟಿ ಅನುದಾನ ಮೀಸಲಿರಿಸಿದೆ
ಮಾರ್ಚ್ ಅಂತ್ಯದೊಳಗೆ 5,00,00,000 ರೈತರನ್ನು ನೋಂದಾಯಿಸುವ ಗುರಿಯನ್ನು ಹೊಂದಿದೆ.

  ಧನ್ಯವಾದಗಳು…….

WhatsApp Group Join Now
Telegram Group Join Now

Leave a Comment