ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೇ ದಿನ -2024.

ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೇ ದಿನ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಗಡುವು ಸಮೀಪಿಸಿದ್ದು, ಜುಲೈ 31 ಕೊನೆಯ ದಿನವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಕ್ರಿಯೆ ಸರಳಗೊಳಿಸಲಾಗಿದ್ದು, ತೆರಿಗೆದಾರರೇ ಇಲಾಖೆಯ ವೆಬ್‌ಸೈಟ್‌ಗೆ ಲಾಗಿನ್ ಆಗಿ ಐಟಿ ರಿಟರ್ನ್ಸ್ ಸಲ್ಲಿಸಬಹುದಾಗಿದೆ.

       ದಂಡ ಎಷ್ಟು?

ಆಯಾ ವರ್ಷಕ್ಕೆ ಸಂಬಂಧಿಸಿದ ಐಟಿ ರಿಟರ್ನ್ಸ್‌ಗಳನ್ನು ಆದಾಯ ತೆರಿಗೆಯ ಸೆಕ್ಷನ್ 139(1)ರ ಅನ್ವಯ ಜುಲೈ 31ರೊಳಗೆ ತೆರಿಗೆ ಇಲಾಖೆ ಸಲ್ಲಿಸಬೇಕು.

ಈ ಗಡುವು ಮೀರಿ ರಿಟರ್ನ್ಸ್ ಸಲ್ಲಿಸುವುದಿದ್ದರೆ ಸೆಕ್ಷನ್ 234 ಎಫ್ ಅಡಿ ಉಲ್ಲೇಖಿಸಿದಂತೆ 5 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಆದರೆ, 5 ಲಕ್ಷಕ್ಕೂ ಕಡಿಮೆ ತೆರಿಗೆ ಆದಾಯ ಇರುವ ವ್ಯಕ್ತಿಗಳಿಗೆ ದಂಡದ ಮೊತ್ತವನ್ನು ಒಂದು ಸಾವಿರಕ್ಕೆ ಸೀಮಿತಗೊಳಿಸಲಾಗಿದೆ. ಈ ದಂಡ ಪಾವತಿಸಿದರೆ ಆರ್ಥಿಕ ವರ್ಷ ಕೊನೆಗೊಂಡ 9 ತಿಂಗಳೊಳಗೆ ಅಂದರೆ 2023-24ನೇ ಸಾಲಿನ ಆದಾಯಕ್ಕೆ ಸಂಬಂಧಿಸಿದ ರಿಟರ್ನ್ಸ್ಗಳನ್ನು 2024ರ ಡಿಸೆಂಬರ್ 31ರೊಳಗೆ ಸಲ್ಲಿಸಲು ಅವಕಾಶ ಇರುತ್ತದೆ.
ಕನ್ನಡ ದಿನಪತ್ರಿಕೆ

   ಐಟಿ ರಿಟರ್ನ್ಸ್ ಯಾರಿಗೆ?

ಆರ್ಥಿಕ ವರ್ಷದಲ್ಲಿ ಈ ಕೆಳಕಂಡ ವಹಿವಾಟು ಮಾಡಿದವರು

• ಚಾಲ್ತಿ ಖಾತೆಯಲ್ಲಿ (ಕರೆಂಟ್ ಅಕೌಂಟ್) ಒಟ್ಟಾರೆ 1 ಕೋಟಿ ರೂ.ಗೂ ಹೆಚ್ಚು ಮೊತ್ತ ಜಮೆ.
• ಉಳಿತಾಯ ಖಾತೆಯಲ್ಲಿ (ಸೆವಿಂಗ್ ಅಕೌಂಟ್) 50 ಲಕ್ಷ ರೂ.ಗೂ ಹೆಚ್ಚು ಜಮೆ.
. ವಾರ್ಷಿಕ ವಿದ್ಯುತ್ ಬಿಲ್ ಪಾವತಿ 1 ಲಕ್ಷಕ್ಕೂ ಅಧಿಕ.
• ವಿದೇಶ ಪ್ರಯಾಣಕ್ಕಾಗಿ ಸ್ವಂತ ಅಥವಾ ಇತರರಿಗಾಗಿ ಹೆಚ್ಚು ವ್ಯಾಪಾರ- ವಹಿವಾಟು.
. 60 ಲಕ್ಷ ರೂ.ಗೂ ಹೆಚ್ಚು ವ್ಯಾಪಾರ ವಹಿವಾಟು.

     ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲ್ಲ.

       ದೇಶದ ಖಾಸಗಿ ಟೆಲಿಕಾಂ ಕಂಪನಿಗಳು ರಿಚಾರ್ಜ್ ಮತ್ತು ಡೇಟಾ ಪ್ಯಾಕ್ ದರದಲ್ಲಿಮಾಡಿರುವ ಏರಿಕೆಯಿಂದಾಗಿ, ಗ್ರಾಹಕರು ಅಸಮಾಧಾನಗೊಂಡಿದ್ದಾರೆ. ರಿಲಯನ್ಸ್ ಜಿಯೋ ಹಾಗೂ ಏರ್‌ಟೆಲ್ ಕಂಪನಿಗಳು ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಬೆಲೆಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ ವೋಡಾಫೋನ್ ಐಡಿಯಾ ಸಂಸ್ಥೆಯೂ ಬೆಲೆಯೇರಿಕೆ ಮಾಡಿತು. ಆದ್ದರಿಂದ, ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ, ರಿಚಾರ್ಜ್ ಶುಲ್ಕವನ್ನು ಕಡಿಮೆ ಮಾಡಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಖಾಸಗಿ ಟೆಲಿಕಾಂ ಕಂಪನಿಗಳ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

  ಟ್ರಾಯ್ ನಿಯಮದ ಏರಿಕೆ .

    ‘ಖಾಸಗಿ ಕಂಪನಿಗಳ ಬೆಲೆಯೇರಿಕೆ ವಿಷಯದಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಲು ಆಗುವುದಿಲ್ಲ. ಭಾರತೀಯ ಟೆಲಿಕಾಂ ಅನ್ವಯ ದರ ನಿಯಂತ್ರಣ ಪ್ರಾಧಿಕಾರದ (ಅಐ) ನಿಯಮಗಳ ಅನ್ವಯವೇ ಖಾಸಗಿ ಟೆಲಿಕಾಂ ಕಂಪನಿಗಳು ಬೆಲೆಯೇರಿಕೆ ಸೇರಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಹಾಗಾಗಿ, ಇಂತಹ ವಿಷಯದಲ್ಲಿ ಕೇಂದ್ರ ಸರ್ಕಾರವು ಮಧ್ಯಪವೇಶಿಸಲು ಆಗುವುದಿಲ್ಲ’ ಎಂದು ಕೇಂದ್ರ ಸರ್ಕಾರವು ಪ್ರಕಟಣೆ ತಿಳಿಸಿದೆ.

     ಧನ್ಯವಾದಗಳು…

 

https://mahitikannada.com/good-news-for-pm-kisan-yojana-farmers-this-time-it-is-recommended-to-increase-the-budget-by-rs-2000/

WhatsApp Group Join Now
Telegram Group Join Now