Karnataka PUC 2nd BOARD :Registration for 2nd PUC Repeat Students Exam-2024.

Karnataka PUC 2nd BOARD :ದ್ವಿತೀಯ ಪಿಯುಸಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ನೋಂದಣಿ ಪ್ರಾರಂಭ-2024.

Karnataka PUC 2nd BOARD :

ಫೇಲಾದವರು ಹಾಗೂ ಖಾಸಗಿ ವ್ಯಕ್ತಿಗಳಿಂದ ಅರ್ಜಿ ಆಹ್ವಾನ | ಫಲಿತಾಂಶ ಸುಧಾರಣೆಗೂ ಅವಕಾಶ .

ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯು ಮಾರ್ಚ್‌ನಲ್ಲಿ ನಡೆಸಲಾಗುವ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ನೋಂದಣಿ ಮಾಡಿಕೊಳ್ಳುವಂತಹ ಪುನರಾ ವರ್ತಿತ ವಿದ್ಯಾರ್ಥಿಗಳು ಮತ್ತು, ಖಾಸಗಿ ವ್ಯಕ್ತಿಗಳು ಹಾಗೂ ಫಲಿತಾಂಶ ಸುಧಾರಿಸಿಕೊಳ್ಳಲು ಬಯಸುವವರಿಂದ ಅರ್ಜಿ ಆಹ್ವಾನಿಸಿದೆ.

ಫೇಲಾದ ವಿದ್ಯಾರ್ಥಿಗಳಿಂದ ಅಂಕಪಟ್ಟಿ ಹಾಗೂ ಅರ್ಜಿಯನ್ನು ಸ್ವೀಕರಿಸಿ, ವಿವರಗಳನ್ನು ದಾಖಲಿಸುವಂತೆ ಪಿಯುಸಿ ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ಒಂದು ವಿಷಯಕ್ಕೆ 140 ರೂ., ಎರಡು ವಿಷಯಕ್ಕೆ 270 ಹಾಗೂ ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400 ರೂ. ಶುಲ್ಕ ನಿಗದಿ ಪಡಿಸಲಾಗಿದೆ.. ಇನ್ನು, ಫಲಿತಾಂಶ ಸುಧಾರಿಸಿಕೊಳ್ಳಲು ಬಯಸುವವರು ಯಾವ ಯಾವ ವಿಷಯ ಅಥವಾ ಎಲ್ಲ ವಿಷಯಗಳಿಗೂ ಪರೀಕ್ಷೆ ಬರೆಯಬಹುದು. ಮೊದಲ ಬಾರಿಗೆ ಒಂದು ವಿಷಯಕ್ಕೆ 175 ರೂ. 2ನೇ ಬಾರಿ ಹಾಗೂ ನಂತರದ ಪ್ರಯತ್ನಕ್ಕೆ ಒಂದು ವಿಷಯಕ್ಕೆ 350 ರೂ. ಶುಲ್ಕ ಇರುತ್ತದೆ. ಅಂಕಪಟ್ಟಿಗೆ 50 ರೂ.ಗಳನ್ನು ನೀಡಬೇಕಾಗುತ್ತದೆ.

ಖಾಸಗಿ ಅಭ್ಯರ್ಥಿಗಳು:

ಮಾ.31ಕ್ಕೆ ಅನ್ವಯವಾಗುವಂತೆ 17 ವರ್ಷ ಪೂರ್ಣಗೊಂಡಿರುವ ವಿದ್ಯಾರ್ಥಿಗಳು ಮತ್ತು ಖಾಸಗಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದು. ಎಸ್‌ಎಸ್‌ಎಲ್‌ಸಿ ಅಥವಾ ಇತರ ಬೋರ್ಡ್‌ಗಳಿಂದ 10ನೇ ತರಗತಿಯನ್ನು ಆಗಸ್ಟ್ 2024ಕ್ಕೂ ಮುಂಚೆ ತೇರ್ಗಡೆ ಹೊಂದಿರಬೇಕು.

ಪ್ರಥಮ ಪಿಯುಸಿ ಅನುತ್ತೀರ್ಣರಾದವರು, ಹಾಗೂ ಪರೀಕ್ಷೆಗೆ ಹಾಜರಾಗದವರು,ಮತ್ತು ವ್ಯಾಸಂಗವನ್ನು ಮುಂದುವರಿಸಲು ಸಾಧ್ಯವಾಗದವರು ಪರೀಕ್ಷೆಗೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳಬಹುದು .

ಇದಲ್ಲದೆ, 10ನೇ ತರಗತಿಯಲ್ಲಿ ಉತ್ತೀರ್ಣಗೊಂಡು ಐಟಿಐ, ಜೆಒಸಿ,ಮತ್ತು ಡಿಪ್ಲೊಮಾ ಇತ್ಯಾದಿ ತರಗತಿಗಳಿಗೆ ದಾಖಲಾಗಿ ಅನುತ್ತೀರ್ಣಗೊಂಡವರು ದ್ವಿತೀಯ ಪಿಯುಸಿ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಯಾಗಿ ಹಾಜರಾಗಬಹುದು. ಈ ಹಿಂದೆ ಅನುತ್ತೀರ್ಣರಾದವರು ಬೇರೆ ಸಂಯೋಜನೆಯಲ್ಲಿ ಅಂದರೆ ಕಲೆ ಅಥವಾ ವಾಣಿಜ್ಯ ಸಂಯೋಜನೆಯಲ್ಲಿಯೂ ಪರೀಕ್ಷೆ ಬರೆಯಬಹುದು. ತಮ್ಮ ವಾಸಸ್ಥಾನಕ್ಕೆ ಹತ್ತಿರವಿರುವ ಅಥವಾ ಉದ್ಯೋಗ ಮಾಡುವ ಸ್ಥಾನಕ್ಕೆ ಹತ್ತಿರವಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ನೋಂದಾಯಿಸಿಕೊಳ್ಳಬಹುದು .

ಶುಲ್ಕವಿವರ:

ಪರಿಶಿಷ್ಟರು/ ಪ್ರವರ್ಗ-1ರ  ಅಭ್ಯರ್ಥಿಗಳು: 1,560 ರೂ.,

ಇತರ ಅಭ್ಯರ್ಥಿಗಳು: 1,960 ರೂ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

25/10/2024.

ದಂಡ ಶುಲ್ಕದೊಂದಿಗೆ ಕೊನೆಯ ದಿನ :

09/11/2024.

ಧನ್ಯವಾದಗಳು…..
WhatsApp Group Join Now
Telegram Group Join Now

2 thoughts on “Karnataka PUC 2nd BOARD :Registration for 2nd PUC Repeat Students Exam-2024.”

Leave a Comment