KPSC Recruitment :ಕೆಪಿಎಸ್‌ಸಿ ಇಂದ ಹಲವು ಗ್ರೂಪ್‌ ಬಿ, ಸಿ ಹುದ್ದೆಗೆ ಮತ್ತೆ ಅರ್ಜಿ ಸ್ವೀಕಾರ: ಹುದ್ದೆಗಳ ಪಟ್ಟಿ ಇಲ್ಲಿದೆ..2024

  KPSC Recruitment :ಕೆಪಿಎಸ್‌ಸಿ ಇಂದ ಹಲವು ಗ್ರೂಪ್‌ ಬಿ, ಸಿ ಹುದ್ದೆಗೆ ಮತ್ತೆ ಅರ್ಜಿ ಸ್ವೀಕಾರ: ಹುದ್ದೆಗಳ ಪಟ್ಟಿ ಇಲ್ಲಿದೆ..2024.

 KPSC Recruitment :

   ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ  ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.

    ಇದನ್ನು ಒಂದು ಭರ್ಜರಿ ಆಫರ್‌ ಅಂತ ಹೇಳಬೇಕೋ, ಅಥವೋ ಈಗಾಗಲೇ ಅರ್ಜಿ ಸಲ್ಲಿಸಿದ ಲಕ್ಷಾಂತರ ಪ್ರಜೆಗಳಿಗೆ ಆದ ಮೋಸ ಎಂದು ಹೇಳಬೇಕೋ ಗೊತ್ತಿಲ್ಲ. ಆದರೆ ಈಗ ಕೆಪಿಎಸ್‌ಸಿ ಇನ್ನೇನು 8 ಗಂಟೆಗಳಲ್ಲಿ ಪರೀಕ್ಷೆ ನಡೆಸಬೇಕಿದ್ದ ಹುದ್ದೆಗಳಿಗೆ ದಿನಾಂಕ ಮುಂದೂಡಿ ಮತ್ತೆ ಅರ್ಜಿ ಸ್ವೀಕಾರ ಮಾಡಲಾಗುತ್ತದೆ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಅರ್ಜಿಯನ್ನು ಯಾವೆಲ್ಲ ಹುದ್ದೆಗೆ ಸ್ವೀಕಾರ ಮಾಡಲಾಗುತ್ತದೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ ನೋಡಿ.

   KPSC Recruitment : ಕರ್ನಾಟಕ ಲೋಕಸೇವಾ ಆಯೋಗವು ಈ ವರ್ಷ ಅಧಿಸೂಚಿಸಿರುವ ವಿವಿಧ ಗ್ರೂಪ್‌ ಬಿ ಹುದ್ದೆಗಳು ಹಾಗೂ ವಿವಿಧ ಗ್ರೂಪ್‌ ಸಿ ಹುದ್ದೆಗಳಿಗೆ, ಇನ್ನು ಪರೀಕ್ಷೆ ನಡೆಯದ ಹುದ್ದೆಗಳಿಗೆ ಈಗ ಮತ್ತೆ ಅರ್ಜಿ ಆಹ್ವಾನಿಸಲಿದೆ. ಹಾಗೂ ಇನ್ನುಮುಂದೆ ಹೊರಡಿಸಲಿರುವ ಈ ಗ್ರೂಪ್‌ನ ಹುದ್ದೆಗಳಿಗೆ ಗರಿಷ್ಠ 3 ವರ್ಷ ಹೆಚ್ಚಿನ ವಯಸ್ಸಿನ ಅರ್ಹತೆಯನ್ನು ಸಹ ನೀಡಲಿದೆ. ಅಂದ್ರೆ ಸಾಮಾನ್ಯವಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯಸ್ಸಿನ ಅರ್ಹತೆ ಇದೆ. ಇದರ ಜತೆಗೆ ಈ ಕೆಟಗರಿಗೆ ಮಾತ್ರ ಅಲ್ಲದೇ, ಎಲ್ಲ ವರ್ಗಗಳ ಅಭ್ಯರ್ಥಿಗಳಿಗೆ ಇರುವ ಗರಿಷ್ಠ ವಯಸ್ಸಿನ ಅರ್ಹತೆಯ ಜತೆಗೆ ಇನ್ನು ಹೆಚ್ಚಿನ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮವನ್ನು ಮುಂದಿನ ಒಂದು ವರ್ಷದ ಅವಧಿಗೆ ಅಧಿಸೂಚಿಸುವ ಎಲ್ಲ ಹುದ್ದೆಗಳಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ.

    ಈ ವರ್ಷ ಈಗಾಗಲೇ ಅರ್ಜಿ ಸ್ವೀಕಾರ ಮಾಡಿ, ಇನ್ನು ಯಾವ ಹುದ್ದೆಗೆ ಪರೀಕ್ಷೆ ನಡೆದಿಲ್ಲವೋ ಆ ಎಲ್ಲ ಹುದ್ದೆಗಳಿಗೂ ಸಹ ಈ ಗರಿಷ್ಠ ವಯಸ್ಸಿನ ಅರ್ಹತೆ ಅನ್ವಯವಾಗಲಿದ್ದು, ಅಂತಹ ಹುದ್ದೆಗಳಿಗೆ ಈಗ ಮತ್ತೆ

   ಕೆಪಿಎಸ್‌ಸಿ ಈ ವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಲ ಸಂಪನ್ಮೂಲ ಇಲಾಖೆ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಾರ್ಖಾನೆಗಳು, ಬಾಯ್ಲರ್‌ಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಅಂತರ್ಜಲ ನಿರ್ದೇಶನಾಲಯ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಈ ಕೆಳಗಿನ ಗ್ರೂಪ್‌ ಬಿ, ಗ್ರೂಪ್‌ ಸಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಅವುಗಳಿಗೆ ಸೆಪ್ಟೆಂಬರ್ 14, 15 ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ.

ಯಾವೆಲ್ಲ ಹುದ್ದೆಗೆ ಮತ್ತೆ ಅರ್ಜಿ ಸ್ವೀಕಾರ ಮಾಡಲಾಗುತ್ತದೆ ಎಂಬ ಮಾಹಿತಿ ಕೆಳಗಿನಂತಿದೆ ನೋಡಿ.:

ಗ್ರೂಪ್‌ ಸಿ ಹುದ್ದೆಗಳು:

ಕಿರಿಯ ಇಂಜಿನಿಯರ್ (ಸಿವಿಲ್)
ಕಿರಿಯ ಇಂಜಿನಿಯರ್ (ಸಿವಿಲ್) ಸೇವೆ ಸಲ್ಲಿಸುತ್ತಿರುವ     ನಿರತ ಗ್ರೂಪ್ ಸಿ ಸಿಬ್ಬಂದಿಗಳು.
ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್)
ಕಿರಿಯ ಇಂಜಿನಿಯರ್ (ಸಿವಿಲ್) ಸೇವಾ ನಿರತ ಗ್ರೂಪ್‌ ಸಿ ಸಿಬ್ಬಂದಿಗಳು
ಸಹಾಯಕ ಗ್ರಂಥಪಾಲಕ
ಇತರೆ

ಗ್ರೂಪ್‌ ಬಿ ಹುದ್ದೆಗಳು:

ಸಹಾಯಕ ಇಂಜಿನಿಯರ್ (ಸಿವಿಲ್)
ಸಹಾಯಕ ಇಂಜಿನಿಯರ್ (ಸಿವಿಲ್)
ಭೂ ದಾಖಲೆಗಳ ಸಹಾಯಕ ನಿರ್ದೇಶಕರು
ಪತ್ರಾಂಕಿತ ವ್ಯವಸ್ಥಾಪಕರು / ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು
ಸಹಾಯಕ ನಿರ್ದೇಶಕರು
ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್ )
ಕಾರ್ಖಾನೆಗಳ ಸಹಾಯಕ ನಿರ್ದೇಶಕರು
ಬಾಯ್ಲರ್‌ಗಳ ಸಹಾಯಕ ನಿರ್ದೇಶಕರು
ಅಂತರ್ಜಲ ನಿರ್ದೇಶನಾಲಯ ಭೂ ವಿಜ್ಞಾನಿ
ಇತರೆ

  ಇನ್ನು ಪಶುಸಂಗೋಪನೆ ಇಲಾಖೆಯ ಪಶುವೈದ್ಯರು, ಪಂಚಾಯತ್ ರಾಜ್‌ ಇಲಾಖೆಯ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿ, ವೋಟಾರು ವೆಹಿಕಲ್ ಇನ್ಸ್‌ಪೆಕ್ಟರ್, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸಹಾಯಕ ನಿರೀಕ್ಷಕರು ಹುದ್ದೆಗಳಿಗೆ ಈ ವರ್ಷ ಅಧಿಸೂಚನೆ ಹೊರಡಿಸಲಾಗಿತ್ತು. ಈ ಎಲ್ಲ ಹುದ್ದೆಗಳ ಪೈಕಿ, ಇನ್ನು ಯಾವೆಲ್ಲ ಹುದ್ದೆಗಳಿಗೆ ಪರೀಕ್ಷೆ ನಡೆದಿಲ್ಲವೋ ಆ ಎಲ್ಲ ಹುದ್ದೆಗಳಿಗೆ ಈಗ ಮತ್ತೆ ಅರ್ಜಿ ಸ್ವೀಕಾರ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಕುರಿತು ಕೆಪಿಎಸ್‌ಸಿ ವೇಳಾಪಟ್ಟಿ ಬಿಡುಗಡೆ ಮಾಡಲಿದೆ. ಅರ್ಜಿ ಸ್ವೀಕಾರದ ನಂತರ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಿದೆ.

   ಧನ್ಯವಾದಗಳು……

WhatsApp Group Join Now
Telegram Group Join Now