ವಿಧಾನಸೌಧ: ಮಿನಿ ವಿಧಾನಸೌಧಗಳ ಹೆಸರು ಬದಲು-2024.
ಪ್ರಜಾಸೌಧವೆಂದು ಮರುನಾಮಕರಣಕ್ಕೆ ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ವಕ್ಸ್ ಬೋರ್ಡ್‌ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪಿಯು ಕಾಲೇಜು ಕಟ್ಟಡ ನಿರ್ಮಾಣ.
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.
ವಿಧಾನಸೌಧ: ರಾಜ್ಯಾದ್ಯಂತ ಇರುವ ತಾಲೂಕು ಆಡಳಿತ ಸೌಧ ಹಾಗೂ ಮಿನಿ ವಿಧಾನಸೌಧಗಳಿಗೆ ಪ್ರಜಾಸೌಧ ಎಂದು ಮರು ನಾಮಕರಣ ಮಾಡುವುದು, ವಕ್ಸ್‌ಬೋರ್ಡ್ ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿ ಪೂರ್ವ ಕಾಲೇಜು ಸ್ಥಾಪನೆ ಸೇರಿ ಹಲವು ನಿರ್ಧಾರಗಳನ್ನೂ ಕಲಬುರಗಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ತೆಗೆದು ಕೊಳ್ಳಲಾಯಿತು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಡೆದ ಈ ಸಭೆಯಲ್ಲಿ ಕಲ್ಯಾಣ ಭಾಗದ ಏಳು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದ ಭಾಗಗಳಿಗೂ ಸಂಬಂಧಿಸಿದ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ಏನೇನು ನಿರ್ಣಯ?:
• 2024-25ನೇ ಸಾಲಿಗೆ ರಸಗೊಬ್ಬರ ಕಾಪು ದಾಸ್ತಾನು ಮಾಡಲು ಕರ್ನಾಟಕ ರಾಜ್ಯ ಬೀಜ ನಿಗಮ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿನವರು ಬ್ಯಾಂಕ್ ನಿಂದ ಪಡೆಯುವ ತಲಾ 100 ಕೋಟಿ ರು. ಬಂಡವಾಳ ಸಾಲಕ್ಕೆ ರಾಜ್ಯ ಸರ್ಕಾರದ ಖಾತರಿ ನೀಡಲು ಅನುಮೋದನೆ.
• ಬೆಂಗಳೂರಿನ ಹೆಬ್ಬಾಳದ ಬಳಿ ಕರ್ನಾಟಕ ರಾಜ್ಯ ಬೀಜ ನಿಗಮದ ಜಮೀನಿನಲ್ಲಿ ಕೃಷಿ ಇಲಾಖೆಯೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ಪಾನೀಯ ನಿಗಮದ ಕಚೇರಿ ಕಟ್ಟಡವನ್ನು 56.63 ಕೋಟಿ ರು. ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅನುಮೋದನೆ .
• ಗದಗ, ಕೊಪ್ಪಳ, ಚಾಮರಾಜನಗರದಲ್ಲಿನ 450 ಹಾಸಿಗೆ ಸಾ ಮರ್ಥದ ಆಸ್ಪತ್ರೆಗಳಿಗೆ ಅವಶ್ಯವಿರುವ ವೈದ್ಯಕೀಯ ಉಪಕ ಠಣ, ಪೀಠೋಪಕರಣಗಳನ್ನು ₹149.03 ಕೋಟಿ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ .
• ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಯಂತ್ರಗಳನ್ನು ಒಟ್ಟು 85.60 ಕೋಟಿ ರೂ. ಮೊತ್ತದಲ್ಲಿ ಖರೀದಿಸಲು ಅನುಮೋದನೆ .
• ರಾಜ್ಯ ವಕ್ಸ್ ಮಂಡಳಿ ಬ್ಯಾಂಕ್ ಖಾತೆಗಳಲ್ಲಿ ಲಭ್ಯವಿರುವ ಬಡ್ಡಿ ಮೊತ್ತದಲ್ಲಿ 15 ಮಹಿಳಾ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯನ್ನು 47.76 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ .
• ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024′ ಕ್ಕೆ ಅನುಮೋದನೆ, ಈ ವಿವಿಯ ಕುಲಪತಿಗಳ ನೇಮಕಾತಿ ರಾಜ್ಯ ಸರ್ಕಾರವೇ ಮಾಡಲು ನಿರ್ಧಾರ .
• ಪ್ರಧಾನಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯ ಮಹಾ ಅಭಿ ಯಾನ ಯೋಜನೆಯಡಿ ಪಿ.ಎಂ.ಜಿ.ಎಸ್.ವೈ ಮಾದರಿಯಂತೆ 23.766 ಕಿ.ಮೀ. ಉದ್ದದ 18 ರಸ್ತೆಗಳು ಹಾಗೂ 2 ಸೇತುವೆ ಕಾಮಗಾರಿಗಳನ್ನು 30.47 ಕೋಟಿ ರು. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ .
• ರಾಜ್ಯವ್ಯಾಪಿ ತಾಲೂಕು ಆಡಳಿತಸೌಧ ಕಟ್ಟಡಗಳನ್ನು ಏಕ ರೂಪ ವಿನ್ಯಾಸ ಕಟ್ಟಡಗಳಿಗೆ ಎ ಟೈಪ್- 8.60 ಕೋಟಿ, ಬಿ ಟೈಪ್- 10.70 ಕೋಟಿ, ಸಿಟೈಪ್ ಕಟ್ಟಡ 16.00 ಕೋಟಿ ರು. ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅನುಮೋದನೆ .