Professors Post:ವಿಜಯಪುರ ಜಿಲ್ಲೆಯ ಈ ಅನುದಾನಿತ ಡಿಗ್ರಿ ಕಾಲೇಜಿನಲ್ಲಿ ವಿವಿಧ ವಿಷಯ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ-2024.

Professors Post:ವಿಜಯಪುರ ಜಿಲ್ಲೆಯ ಈ ಅನುದಾನಿತ ಡಿಗ್ರಿ ಕಾಲೇಜಿನಲ್ಲಿ ವಿವಿಧ ವಿಷಯ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ-2024.

Professors Post:

 

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ  ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.

Professors Post: ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಇಲ್ಲಿ ವಿವಿಧ ವಿಷಯ ಅಸಿಸ್ಟಂಟ್‌ ಪ್ರೊಫೆಸರ್ ನೇಮಕಕ್ಕೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಹುದ್ದೆಗಳ ವಿವರ, ಇತರೆ ಡೀಟೇಲ್ಸ್‌ ಇಲ್ಲಿದೆ ನೋಡಿ.

ವಿಜಯಪುರ ಜಿಲ್ಲೆಯ ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು – ಇಲ್ಲಿ ಖಾಲಿ ಇರುವ ವಿವಿಧ ವಿಷಯ ಬೋಧಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಆದೇಶದನ್ವಯ ಈ ಅನುದಾನಿತ ಪದವಿ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಕೆಳಗಿನ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ನೇರ ನೇಮಕಾತಿ ಮಾಡಲು ಪ್ರಕಟಣೆ ಹೊರಡಿಸಲಾಗಿದೆ.

Professors Post:

ಈ ಮೇಲಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 45 ವರ್ಷ ವಯಸ್ಸು ಮೀರಿರಬಾರದು.

ಅರ್ಹತೆಗಳು ಹಾಗೂ ಸೂಚನೆಗಳು:

ಅಭ್ಯರ್ಥಿಗಳು ಕಡ್ಡಾಯವಾಗಿ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ಶೇಕಡ.50 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.

ಎನ್‌ಇಟಿ / ಎಸ್‌ಎಲ್‌ಇಟಿ ಪಾಸಾಗಿರಬೇಕು. ಅಥವಾ ಪಿಹೆಚ್‌.ಡಿ ಪದವಿಯನ್ನು ಯುಜಿಸಿ ನಿಯಮಾವಳಿಗಳ ಅನುಸಾರ ಕೋರ್ಸ್‌ ವರ್ಕ್‌ನೊಂದಿಗೆ ಪಡೆದಿರಬೇಕು.

11-09-2009 ರ ಪೂರ್ವದಲ್ಲಿ ಪಿಹೆಚ್‌ಡಿ ಪದವಿ ಪಡೆದ / ನೋಂದಣಿ ಮಾಡಿದ ಅಭ್ಯರ್ಥಿಗಳು ಯುಜಿಸಿ 2016 ರ ಅಧಿಸೂಚನೆಯ ನಿಬಂಧನೆಗಳನ್ನು ಪೂರೈಸಿರಬೇಕು.

ವೇತನ ಶ್ರೇಣಿ ಮತ್ತು ಇತರೆ ನಿಬಂಧನೆಗಳು ಯುಜಿಸಿ ನಿಯಮಾವಳಿಗಳ ಮತ್ತು ಕರ್ನಾಟಕ ರಾಜ್ಯ ಸರಕಾರದ ನಿಯಮಾವಳಿಗಳನ್ವಯ ಇರುತ್ತದೆ.ಅರ್ಹ ಅಭ್ಯರ್ಥಿಗಳು ಧೃಡೀಕೃತ ದಾಖಲೆಗಳ ಪೂರ್ಣ ಅರ್ಜಿಯೊಂದಿಗೆ ರೂ.1000 ಶುಲ್ಕವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳ ಡಿಮ್ಯಾಂಡ್ ಡ್ರಾಪ್ಟ್‌ ಅನ್ನು ಎಸ್‌ಜಿವಿಸಿ ವಿದ್ಯಾಪ್ರಸಾರಕ ಟ್ರಸ್ಟ್‌, ಮುದ್ದೇಬಿಹಾಳ ರವರ ಹೆಸರಿನಲ್ಲಿ ಪಡೆದು, ನೊಂದಾಯಿತ ಅಂಚೆ ಮೂಲಕ ಕಾರ್ಯದರ್ಶಿಗಳು ಶ್ರೀಮತಿ ಗಂಗಮ್ಮ ವೀರಪ್ಪ ನಾಯಕ ಚಿನಿವಾರ ವಿದ್ಯಾಪ್ರಸಾರಕ ಟ್ರಸ್ಟ್‌, ಮುದ್ದೇಬಿಹಾಳ –586212 ವಿಜಯಪುರ ಜಿಲ್ಲೆ, ಇವರಿಗೆ ಸಲ್ಲಿಸಬೇಕು.

ಅಭ್ಯರ್ಥಿಗಳು ಈಗಾಗಲೇ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ಅಂಥವರು ಸಂಸ್ಥೆಯ ಮುಖ್ಯಸ್ಥರಿಂದ ಪಡೆದ ನಿರಪೇಕ್ಷಣಾ ಪ್ರಮಾಣಪತ್ರದೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕು.

ಅರ್ಜಿಯ ಒಂದು ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಜಂಟಿ ನಿರ್ದೇಶಕರು, ಪ್ರಾದೇಶಿಕ ಕಚೇರಿ, ಕಾಲೇಜು ಶಿಕ್ಷಣ ಇಲಾಖೆ, ಮಿನಿ ವಿಧಾನಸೌಧ, ಧಾರವಾಡ – ಇವರಿಗೆ ಸಲ್ಲಿಸಬೇಕು.

ಆಯ್ಕೆ ಪ್ರಕ್ರಿಯೆಯು ಯಾವುದೇ ಹಂತದಲ್ಲಾದರೂ ಸದರಿ ಹುದ್ದೆಯ ಅನುಮತಿ ಮತ್ತು ಆಯ್ಕೆಯನ್ನು ಇಲಾಖೆ / ಸರ್ಕಾರವು ರದ್ದುಪಡಿಸುವ ಅಧಿಕಾರವನ್ನು ಹೊಂದಿದ್ದು, ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಿದ ಅಥವಾ ಸಂದರ್ಶನಕ್ಕೆ ಹಾಜರಾದ ಮಾತ್ರಕ್ಕೆ ಸದರಿ ಹುದ್ದೆಗೆ ಆಯ್ಕೆಯ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ.

ಸಂದರ್ಶನದ ದಿನಾಂಕವನ್ನು ಪ್ರತ್ಯೇಕವಾಗಿ ಅರ್ಜಿ ಹಾಕಿದವರಿಗೆ ಸಲ್ಲಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 24-09-2024 ರ ಸಂಜೆ 05 pm ಗಂಟೆಯ ಒಳಗಾಗಿ.

ಧನ್ಯವಾದಗಳು…….

 

WhatsApp Group Join Now
Telegram Group Join Now