2025ರ SSLC,(ಎಸ್.ಎಸ್.ಎಲ್.ಸಿ.) ವಾರ್ಷಿಕ ಪರೀಕ್ಷೆ-1ರ ಮೌಲ್ಯಮಾಪನ ಕಾರ್ಯಕ್ಕಾಗಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನೋಂದಣಿ/ಅಪ್‌ಡೇಟ್ ಮಾಡುವ ಬಗ್ಗೆ.

2025ರ SSLC,(ಎಸ್.ಎಸ್.ಎಲ್.ಸಿ.) ವಾರ್ಷಿಕ ಪರೀಕ್ಷೆ-1ರ ಮೌಲ್ಯಮಾಪನ ಕಾರ್ಯಕ್ಕಾಗಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನೋಂದಣಿ/ಅಪ್‌ಡೇಟ್ ಮಾಡುವ ಬಗ್ಗೆ.

SSLC

2025ರ SSLC,(ಎಸ್.ಎಸ್.ಎಲ್.ಸಿ.) ವಾರ್ಷಿಕ ಪರೀಕ್ಷೆ-1ರ ಮೌಲ್ಯಮಾಪನ ಕಾರ್ಯಕ್ಕಾಗಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನೋಂದಣಿ/ಅಪ್‌ಡೇಟ್ ಮಾಡುವ ಬಗ್ಗೆ.

SSLC: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ವತಿಯಿಂದ ನಡೆಯಲಿರುವ 2025ರ SSLC (ಎಸ್.ಎಸ್.ಎಲ್.ಸಿ.) ವಾರ್ಷಿಕ ಪರೀಕ್ಷೆ-1ರ ಮೌಲ್ಯಮಾಪನ ಕಾರ್ಯಕ್ಕಾಗಿ ರಾಜ್ಯದ ಎಲ್ಲಾ ಸರ್ಕಾರಿ, ಮಾನ್ಯತೆ ಪಡೆದಿರುವ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಷಯ ಶಿಕ್ಷಕರ ವಿವರಗಳನ್ನು ಶಾಲಾ ಲಾಗಿನ್‌ನಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಲು ದಿನಾಂಕ: 03-12-2024 ರಿಂದ ಅವಕಾಶ ಕಲ್ಪಿಸಲಾಗಿದೆ. ಶಾಲೆಯ ಮುಖ್ಯ ಶಿಕ್ಷಕರು ತಮ್ಮನ್ನೂ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯಕ್ಕೆ ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ ಮತ್ತು ಹಿಂದಿನ ವರ್ಷಗಳಲ್ಲಿ ಈಗಾಗಲೇ ನೋಂದಾಯಿಸಿರುವ ಶಿಕ್ಷಕರ ವಿವರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದರೂ ಸಹ ಮತ್ತೊಮ್ಮೆ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.

2024-25ನೇ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ನೇಮಕಗೊಂಡ, ಬಡ್ತಿ ಮತ್ತು ವರ್ಗಾವಣೆಯಿಂದ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರ ವಿವರಗಳನ್ನು ಶಾಲಾ ಲಾಗಿನ್‌ Evaluators Registration -2025 ಮೆನುವಿನಲ್ಲಿ ನೀಡಿರುವ Evaluators New Registration ಸಬ್ ಮೆನುವಿನಲ್ಲಿ ನೋಂದಾಯಿಸುವುದು ಹಾಗೂ ಈಗಾಗಲೇ ನೋಂದಾಯಿಸಿರುವ ಮೌಲ್ಯಮಾಪಕರ ವಿವರಗಳನ್ನು Update/Delete Evaluators Details ಸಬ್ ಮೆನುವಿನಲ್ಲಿ ಅಪ್‌ಡೇಟ್ ಮಾಡುವುದು. Freeze ಮಾಡುವ ಮುನ್ನ ಎಲ್ಲಾ ವಿವರಗಳನ್ನು ಪರಿಶೀಲಿಸಿಕೊಂಡು, ಏನಾದರೂ ತಿದ್ದುಪಡಿಗಳಿದ್ದಲ್ಲಿ ಅಪ್‌ಡೇಟ್ ಮಾಡಿ ನಂತರ Freeze ಮಾಡುವುದು. ಒಮ್ಮೆ Freeze ಮಾಡಿದ ನಂತರ ಯಾವುದೇ ತಿದ್ದುಪಡಿ/ಸೇರ್ಪಡೆಗೆ ಅವಕಾಶವಿರುವುದಿಲ್ಲ.

2024-25ನೇ ಶೈಕ್ಷಣಿಕ ವರ್ಷದಲ್ಲಿ ತಮ್ಮ ಶಾಲೆಯಿಂದ ವರ್ಗಾವಣೆ, ನಿವೃತ್ತಿ, ರಾಜೀನಾಮೆ ಮತ್ತು ಇತರೆ ಕಾರಣಗಳಿಂದ ಶಿಕ್ಷಕರು ಕಾರ್ಯನಿರ್ವಹಿಸುತ್ತಿಲ್ಲವಾದರೆ ಅಂತಹ ಶಿಕ್ಷಕರ ವಿವರಗಳನ್ನು Update/Delete Evaluators Details ಸಬ್ ಮೆನುವಿನಲ್ಲಿ Delete ಬಟನ್ ಮೇಲೆ ಕ್ಲಿಕ್ ಮಾಡಿ, ಸೂಕ್ತ ಕಾರಣವನ್ನು ಆಯ್ಕೆ ಮಾಡಿ Delete ಮಾಡುವುದು.

ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯಕ್ಕಾಗಿ ನೋಂದಾಯಿಸುವಾಗ ಅಥವಾ ಈಗಾಗಲೇ ಇರುವ ಶಿಕ್ಷಕರ ಮಾಹಿತಿಯನ್ನು update ಮಾಡುವಾಗ ಅವರ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಹೊಸದಾಗಿ ನಮೂದಿಸುವುದು ಕಡ್ಡಾಯವಾಗಿದ್ದು, ಆ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ OTP ಯನ್ನು ನಮೂದಿಸುವುದು ಸಹ ಕಡ್ಡಾಯವಾಗಿರುತ್ತದೆ. ಈ ಪ್ರಕ್ರಿಯೆಯಿಂದ ಆನ್‌ಲೈನ್‌ನಲ್ಲಿ ನಮೂದಿಸಲಾದ ವಿವರಗಳನ್ನು ಪ್ರತಿಯೊಬ್ಬ ಶಿಕ್ಷಕರು ಪರಿಶೀಲಿಸಿ ದೃಢೀಕರಿಸಿರುತ್ತಾರೆ ಎಂದು ಪರಿಗಣಿಸಲಾಗುವುದು.

SSLC

ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯಕ್ಕೆ ನೋಂದಣಿ ಮಾಡುವ, ಇಲ್ಲವೇ ಅಪ್‌ಡೇಟ್ ಮಾಡುವ ಮುನ್ನ ಈ ಕೆಳಗಿನ ವಿವರಗಳನ್ನು ಸಿದ್ಧಪಡಿಸಿಕೊಂಡು ನೋಂದಾಯಿಸುವುದು.

1. ಶಿಕ್ಷಕರ ಹೆಸರು & ಪದನಾಮ

2. ಜನ್ಮ ದಿನಾಂಕ

3. ಪ್ರೌಢ ಶಾಲಾ ಸೇವೆಗೆ ಸೇರಿದ ದಿನಾಂಕ

4. ವಿದ್ಯಾರ್ಹತೆ, ಬೋಧನಾ ವಿಷಯ ಮತ್ತು ಮಾಧ್ಯಮ

5. ಪ್ರಥಮ ಕೆ.ಜಿ.ಐ.ಡಿ ಸಂಖ್ಯೆ (ಸರ್ಕಾರಿ ಶಾಲಾ ಶಿಕ್ಷಕರಿಗಾಗಿ) ಉದ್ಯೋಗಿ ಸಂಖ್ಯೆ/ ವಿಮೆ ಪಾಲಿಸಿ ಸಂಖ್ಯೆ (ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲಾ ಶಿಕ್ಷಕರಿಗಾಗಿ)

6. ಬ್ಯಾಂಕ್ ಖಾತೆಯ ವಿವರಗಳು (ಬ್ಯಾಂಕ್ ಹೆಸರು, ಖಾತೆ ಸಂಖ್ಯೆ ಮತ್ತು IFSC ಕೋಡ್)

7. ಶಿಕ್ಷಕರ ಫೋಟೋ ಮತ್ತು ಸಹಿ (ನಿಗದಿತ ಅಳತೆಯಲ್ಲಿ ಸ್ಕ್ಯಾನ್ ಮಾಡಿ ಸೇವ್ ಮಾಡಿ ಇಟ್ಟುಕೊಳ್ಳುವುದು.)Photo- (20-80kb) Signature (20-50kb) in jpeg format

WhatsApp Group Join Now
Telegram Group Join Now

Leave a Comment