School education: SSLC SA-1-2024 ಪರೀಕ್ಷೆ ಫಲಿತಾಂಶ ವಿಶ್ಲೇಷಣೆ .
ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, 2024-25 ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ: 24.09.2024 ರಿಂದ 30.09.2024 ರವರೆಗೆ SA-1 ಪರೀಕ್ಷೆಯನ್ನು ನಡೆಸಲಾಗಿದ್ದು, ಸದರಿ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಗಳನ್ನು ಮಂಡಲಿಯ ವತಿಯಿಂದ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರ ಲಾಗಿನ್ ಲಭ್ಯಗೊಳಿಸಲಾಗಿರುತ್ತದೆ. ಸದರಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಶಾಲಾ ಹಂತದಲ್ಲಿಯೇ ಪೂರ್ಣಗೊಳಿಸಿ ಈ ಕೆಳಕಂಡ ನಮೂನೆಗಳಂತೆ ಶಾಲೆ, ಬ್ಲಾಕ್ ಮತ್ತು ಜಿಲ್ಲಾ ಹಂತದಲ್ಲಿ ಫಲಿತಾಂಶ ವಿಶ್ಲೇಷಣೆಯನ್ನು ಕೈಗೊಳ್ಳುವುದು.
ವಿಷಯ ಶಿಕ್ಷಕರು ಮೇಲ್ಕಂಡಂತೆ ನಿಗದಿಪಡಿಸಿರುವ ಅಂತಿಮ ದಿನಾಂಕದೊಳಗೆ ನಮೂನೆ-1 ಮತ್ತು IA ನಲ್ಲಿ ಮಾಹಿತಿಯನ್ನು ಸಿದ್ಧಪಡಿಸಿ ಮುಖ್ಯಶಿಕ್ಷಕರಿಗೆ ನೀಡುವುದು. ಮುಖ್ಯ ಶಿಕ್ಷಕರು ನಮೂನೆ-2 ಮತ್ತು 2A ನಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸಲ್ಲಿಸುವುದು.
ಮಂಡಲಿಯ ವತಿಯಿಂದ ಬ್ಲಾಕ್ ಹಂತದ ಫಲಿತಾಂಶ ವಿಶ್ಲೇಷಣೆಗೆ ಸಂಬಂಧಿಸಿದಂತೆ ತಂತ್ರಾಂಶವನ್ನು ಸಿದ್ಧಪಡಿಸಿ ಕ್ಷೇತ್ರಶಿಕ್ಷಣಾಧಿಕಾರಿಗಳ ಲಾಗಿನ್ ನಲ್ಲಿ ಲಭ್ಯ ಮಾಡಲಾಗುತ್ತದೆ. ಮುಖ್ಯಶಿಕ್ಷಕರು ಸಲ್ಲಿಸುವ ವಿಶ್ಲೇಷಣೆಯನ್ನಾಧರಿಸಿ ಲಾಗಿನ್‌ನಲ್ಲಿ ನೀಡಲಾಗುವ ನಮೂನೆ-3 ಅನ್ನು ಭರ್ತಿ ಮಾಡುವುದು ಕ್ಷೇತ್ರಶಿಕ್ಷಣಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಇದೇ ರೀತಿ ಜಿಲ್ಲಾ ಫಲಿತಾಂಶ ವಿಶ್ಲೇಷಣೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳ ಲಾಗಿನ್ (EO Login) ನಲ್ಲಿ ನಮೂನೆ-4 ರಲ್ಲಿನ ಮಾಹಿತಿಯನ್ನು ಲಭ್ಯ ಮಾಡಲಾಗಿದ್ದು ಅನುಪಾಲನೆಗೆ ಕ್ರಮವಹಿಸುವುದು. ಜಿಲ್ಲೆಯ ಎಲ್ಲಾ ಶಾಲೆಗಳ ಮಾಹಿತಿಯು ಇಂದೀಕರಿಸಿರುವ ಬಗ್ಗೆ ಪರಿಶೀಲಿಸಿ ಅನುಪಾಲಿಸುವುದು ಉಪನಿರ್ದೇಶಕರು (ಆಡಳಿತ) ರವರು ಜವಾಬ್ದಾರಿಯಾಗಿರುತ್ತದೆ.
ಮುಂದುವರೆದು, ಉಪನಿರ್ದೇಶಕರು (ಆಡಳಿತ) ರವರು ಜಿಲ್ಲಾವಾರು ಫಲಿತಾಂಶ ವಿಶ್ಲೇಷಣೆಯ ಆಧಾರದ ಮೇಲೆ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಅಗತ್ಯ ಪುನರ್‌ಬಲನ ಚಟುವಟಿಕೆಗಳನ್ನು ನೀಡುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸುವುದು ಹಾಗೂ 지 ವಿಶ್ಲೇಷಣಾ ಮಾಹಿತಿಗಳನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅಪರ ಆಯುಕ್ತರು ನಡೆಸುವ ಸಭೆಯಲ್ಲಿ ಪ್ರಸ್ತುತಪಡಿಸುವುದು,
Click here… PDF