South Central Railway Recruitment: 4,232 ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಹಿತಿ ಇಲ್ಲಿದೆ.
South Central Railway Recruitment: ಭಾರತೀಯ ರೈಲ್ವೆಯು ಪ್ರಯಾಣಿಕರ ಅನೂಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳನ್ನು ಬಿಡುವುದಲ್ಲದೆ, ಆಗಾಗಾ ಉದ್ಯೋಗವಕಾಶಗಳನ್ನು ಸಹ ಕಲ್ಪಿಸುತ್ತದೆ. ಹಾಗೆಯೇ ಇದೀಗ ಇದರ ಭಾಗವಾದ ದಕ್ಷಿಣ ಮಧ್ಯ ರೈಲ್ವೆಯು ಖಾಲಿ ಇರುವ 4,232 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಅರ್ಜಿ ಸಲ್ಲಿಸುವ ದಿನಾಂಕ ಹಾಗೂ ಆಯ್ಕೆ ಪ್ರಕ್ರಿಯೆ ಹೇಗಿರಲಿದೆ ಎಂದು ಇಲ್ಲಿ ತಿಳಿಯಿರಿ.
ಮಧ್ಯಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈ ಹುದ್ದೆಗಳ ಭರ್ತಿ ನಡೆಯಲಿದೆ. 3 ವರ್ಷಗಳ ಗುತ್ತಿಗೆ ಅವಧಿಗೆ ಮಾಸಿಕ ಗೌರವಧನದ ಆಧಾರದ ಮೇಲೆ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. 4,232 ಎಲೆಕ್ಟ್ರಿಶಿಯನ್ ಮತ್ತು ಫಿಟ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಕರ್ನಾಟಕದಲ್ಲಿ ಬೆಳಗಾವಿ, ಕಲಬುರಗಿ, ಬೀದರ್, ಭಾಲ್ಕಿ, ರಾಯಚೂರು., ಯಾದಗಿರಿ ಮತ್ತು ಬಳ್ಳಾರಿಯಲ್ಲಿ ಈ ಹುದ್ದೆಗಳ ಭರ್ತಿ ನಡೆಯಲಿದೆ. ಅರ್ಜಿ ಸಲ್ಲಿಸಬಯಸುವವರು 10ನೇ ತರಗತಿ ಅಥವಾ ಐಟಿಐ ಪೂರ್ಣಗೊಳಿಸಿರಬೇಕು. ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಯೋಮಿತಿ 15 ವರ್ಷ ಗರಿಷ್ಠ ವಯೋಮಿತಿ 24 ವರ್ಷ ಆಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.
ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ.ಜಾ, ಪ.ಪಂ ಮತ್ತು ಮಹಿಳಾ ಅಭ್ಯರ್ಥಿ, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಈ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಡಿಸೆಂಬರ್ 28ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 27, 2025 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇನ್ನು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ scr.indianrailways.gov.in ಭೇಟಿ ನೀಡಬಹುದಾಗಿದೆ.
-
Website – Click here
South Central Railway Recruitment: Applications invited for 4,232 posts; Here is the information.
South Central Railway Recruitment: Indian Railways not only runs special trains to suit the convenience of passengers, but also provides job openings from time to time. Also, South Central Railway, which is part of it, has invited applications for 4,232 vacant apprentice posts. So know here the application date and selection process.
These posts will be filled in Madhya Pradesh, Tamil Nadu, Karnataka and Maharashtra. Appointment of these posts will be done on the basis of monthly honorarium for a contract period of 3 years. Recruitment will be held for 4,232 electrician and fitter posts.
These posts will be filled in Belgaum, Kalaburagi, Bidar, Bhalki, Raichur, Yadagiri and Bellary in Karnataka. Applicants must have completed 10th standard or ITI. The minimum age limit for applying for this post is 15 years and the maximum age limit is 24 years. There will be age relaxation of 3 years for OBC candidates, 5 years for P.J., P.P. candidates and 10 years for PwD candidates.
Interested can apply online. Fee exemption is given to P.J.A., P.P.M. and female candidates, candidates with disabilities. Other candidates will have to pay an application fee of 100 rupees. The recruitment process for these posts will be done on the basis of merit.
Application submission starts from December 28 and January 27, 2025 is the last date for application submission. Candidates can visit scr.indianrailways.gov.in for more information.
• website – click here