ವೇಮನ ವಿದ್ಯಾವರ್ಧಕ ಸಂಘ ಹುಬ್ಬಳ್ಳಿ – ಧಾರವಾಡ -2024.ಕೆ.ಎಚ್.ಪಾಟೀಲ ವಿದ್ಯಾಲಯಗಳ ಸಮೂಹ ಕಟ್ಟಡದ ಆವರಣ, ವಿದ್ಯಾನಗರ, ಹುಬ್ಬಳ್ಳಿ 580031
ವೇಮನ ವಿದ್ಯಾವರ್ಧಕ ಸಂಘ ಮಾನ್ಯ ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರ ಜ್ಞಾಪನಾ ಸಂಖ್ಯೆ : 22////08/2024-25/1494 : 09-09-2024 ថ ಆದೇಶದನ್ವಯ ನಮ್ಮ ಸಂಸ್ಥೆಯ ವತಿಯಿಂದ ನಡೆಸಲ್ಪಡುತ್ತಿರುವ ಕೃಷ್ಣಾ ಪ್ರೌಢ ಶಾಲೆ ಹಳ್ಳಿಕೇರಿ ತಾಲೂಕ : ಅಣ್ಣಿಗೇರಿ ಜಿಲ್ಲಾ : ಧಾರವಾಡ ಈ ಅನುದಾನಿತ ಪ್ರೌಢ ಶಾಲೆಯಲ್ಲಿ ಖಾಲಿಯಿರುವ ಹುದ್ದೆಯನ್ನು ತುಂಬಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ವಯಸ್ಸು, ವಿದ್ಯಾರ್ಹತೆ, ಅನುಭವ, ಜಾತಿ ಪ್ರಮಾಣ ಪತ್ರಗಳ ದೃಢೀಕರಣ ಪ್ರತಿಗಳೊಂದಿಗೆ ಸಂಪರ್ಕಿಸುವ ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಮುಂತಾದ ವಿವರಗಳೊಂದಿಗೆ ಈ ಪತ್ರಿಕಾ ಪ್ರಕಟಣೆಯಾದ ದಿನಾಂಕದಿಂದ 21 ದಿನಗಳೊಳಗಾಗಿ ಚೇರಮನ್ನ ವೇಮನ ವಿದ್ಯಾವರ್ಧಕ ಸಂಘ ಕೇರಾಫ್ ಕೆ.ಎಚ್.ಪಾಟೀಲ ವಾಣಿಜ್ಯ ಹಾಗೂ ವಿಜ್ಞಾನ ವಿದ್ಯಾಲಯಗಳ ಸಮೂಹ ಕಟ್ಟಡದ ಆವರಣ, ರಡ್ಡಿ ಹಾಸ್ಟೇಲ್ ಹಿಂದುಗಡೆ, ವಿದ್ಯಾನಗರ ಹುಬ್ಬಳ್ಳಿ 580031 ಈ ವಿಳಾಸಕ್ಕೆ ನೋಂದಾಯಿತ ಅಂಚೆಯ ಮೂಲಕ ಅರ್ಜಿ ಸಲ್ಲಿಸುವದು. ಅರ್ಜಿಯ ಒಂದು ಪ್ರತಿಯನ್ನು ದೃಢೀಕರಣ ಪ್ರತಿಗಳೊಂದಿಗೆ ಮಾನ್ಯ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರಿಗೆ ಸಲ್ಲಿಸಬೇಕು. ಆಪೂರ್ಣ ಮತ್ತು ಅವಧಿ ಮೀರಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವದಿಲ್ಲ. ಅರ್ಹ ಅಭ್ಯರ್ಥಿಗಳಿಗೆ ನೋಂದಾಯಿತ ಅಂಚೆಯ ಮೂಲಕ ಸಂದರ್ಶನದ ದಿನಾಂಕ, ವೇಳೆ ಮತ್ತು ಸ್ಥಳ ಮುಂತಾದ ವಿವರಗಳನ್ನು ತಿಳಿಸಲಾಗುವದು.
ಹೆಚ್ಚಿನ ಮಾಹಿತಿಗಾಗಿ… Click here
ಸಹಿ/- ಚೇರಮನ್ನರು
ವೇಮನ ವಿದ್ಯಾವರ್ಧಕ ಸಂಘ ಹುಬ್ಬಳ್ಳಿ – 31
1 thought on “ವೇಮನ ವಿದ್ಯಾವರ್ಧಕ ಸಂಘ ಹುಬ್ಬಳ್ಳಿ – ಧಾರವಾಡ -2024.ಕೆ.ಎಚ್.ಪಾಟೀಲ ವಿದ್ಯಾಲಯಗಳ ಸಮೂಹ ಕಟ್ಟಡದ ಆವರಣ, ವಿದ್ಯಾನಗರ, ಹುಬ್ಬಳ್ಳಿ 580031”