ಕದಂಬರು ಮತ್ತು ತಲಕಾಡಿನ ಗಂಗರು ರಾಜಮನೆತನ (TET,GPSTR,HSTR,PDO All Competative exam notes).

Table of Contents

ಕದಂಬರು (ಸಾಮಾನ್ಯ ಶಕ 345-580).

* ಕದಂಬರು ಕರ್ನಾಟಕವನ್ನಾಳಿದ ಮೊದಲ ಮನೆತನ.

* ಸ್ಥಾಪಕರು – ಮಯೂರ ವರ್ಮ ( ಕನ್ನಡ ನಾಡಿನ ಮೊದಲ ರಾಜ).

* ಈ ಮನೆತನವನ್ನು ಮಯೂರ ಶರ್ಮ ವರದಾ ನದಿಯ ಎಡ ದಂಡೆಯ ಮೇಲೆ ಸ್ಥಾಪಿಸಿದನು.

* ಇವರು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು.

ಮಯೂರವರ್ಮ (ಸಾಮಾನ್ಯ ಶಕ 345-360).

* ತಾಳಗುಂದ ಶಾಸನದ ಪ್ರಕಾರ ಮಯೂರ ವರ್ಮನು ಕದಂಬರ ಮೂಲಪುರುಷ ಮತ್ತು ಪ್ರಸಿದ್ಧ ಅರಸ.

* ಮಯೂರ ವರ್ಮ ಚಿತ್ರದುರ್ಗದ ಬಳಿ ಚಂದ್ರವಳ್ಳಿಯಲ್ಲಿ ಪ್ರಥಮ ಸಂಸ್ಕೃತ ಶಾಸನವನ್ನು ಕೆತ್ತಿಸಿ ಅಲ್ಲಿ ಒಂದು ಕೆರೆಯನ್ನು ನಿರ್ಮಿಸಿದನು.

-: ಚಂದ್ರವಳ್ಳಿ ಶಾಸನ ( ಸಾಮಾನ್ಯ 345).

* ಈ ಶಾಸನ ಚಿತ್ರದುರ್ಗ ಜಿಲ್ಲೆಯ ಸಮೀಪವಿರುವ ಚಂದ್ರವಳ್ಳಿ ಎಂಬಲ್ಲಿ ದೊರೆತಿದೆ.

* ಈ ಶಾಸನದಲ್ಲಿ ಮಯೂರವರ್ಮನ ಸಾಧನೆಗಳ ಮಾಹಿತಿ ಇದೆ.

ಕಾಕುತ್ಸವರ್ಮ ( ಸಾಮಾನ್ಯ ಶಕ 425-455).

* ಕದಂಬ ಮನೆತನದ ಪ್ರಸಿದ್ಧ ಅರಸ.

* ಇವನನ್ನು ಕದಂಬ ಕುಟುಂಬದ ಕುಲಭೂಷಣ ಅಥವಾ ಕೀರ್ತಿ ಸೂರ್ಯ ಎಂದು ಕರೆಯಲಾಗುತ್ತದೆ.

* ಧರ್ಮ ಮಹಾರಾಜ ಎಂಬ ಬಿರುದನ್ನು ಪಡೆದುಕೊಂಡಿದ್ದನು.

* ಅನೇಕ ವೈವಾಹಿಕ ಸಂಬಂಧಗಳ ಮೂಲಕ ಜನಮನ್ನಣೆ ಪಡೆದನು.

* ಕರ್ನಾಟಕದ ಮೊದಲ ದೇವಾಲಯವಾದ ತಾಳಗುಂದದ ಪ್ರಣವೇಶ್ವರ ದೇವಾಲಯ ನಿರ್ಮಿಸಿದ.

* ಸಾಮಾನ್ಯ ಶಕ 425 ಅಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಂಡನು.

* ಸಾಮಾನ್ಯ ಶಕ 450ರಲ್ಲಿ ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನವನ್ನು ಕೆತ್ತಿಸಿದನು ಇದು 16 ಸಾಲುಗಳಿಂದ ಕೂಡಿದೆ ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ ದೊರೆತಿದೆ.

    ಶಾಂತಿವರ್ಮ

* ಈತ ತನ್ನ ತಂದೆಯ ವೃದ್ಧಾಪ್ಯ ಕಾಲದಲ್ಲಿ ಆಳ್ವಿಕೆ ಪ್ರಾರಂಭಿಸಿ ತಂದೆಗಿಂತಲೂ ಮುಂಚಿತವಾಗಿಯೇ ಮರಣ ಹೊಂದಿದನು.

* ಈತ ತಾಳಗುಂದ ಶಾಸನದ ಕರ್ತೃ.

-: ತಾಳಗುಂದ ಶಾಸನ ( ಸಾಮಾನ್ಯ ಶಕ 450):-

* ಈ ಶಾಸನ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಪ್ರಣವೇಶ್ವರ ದೇವಾಲಯದ ಮುಂಭಾಗದಲ್ಲಿ ಇದೆ.

  ಆಡಳಿತ ವ್ಯವಸ್ಥೆ.

* ಶಾಸನಗಳಲ್ಲಿ ಕದಂಬ ದೊರೆಗಳನ್ನು ಮಹಾರಾಜ,ಧರ್ಮ ಮಹಾರಾಜ ಎಂದು ಕರೆಯಲಾಗಿದೆ.

* ಇವರು ಆಡಳಿತದಲ್ಲಿ ಹಿರಿಯರ ಸಲಹೆ ಪಡೆದುಕೊಳ್ಳುತ್ತಿದ್ದರು.ಇದನ್ನು ವೃದ್ಧೋಪದೇಶಗ್ರಾಹಿ ಎಂದು ಕರೆಯಲಾಗಿದೆ.

* ರಾಜನಿಗೆ ಅದರಲ್ಲಿ ಸಹಕಾರ ನೀಡಲು ಪಂಚ ಪ್ರಧಾನವೆಂಬ ಮಂತ್ರಿಮಂಡಲವಿತ್ತು.

ಪ್ರಾಂತ್ಯಗಳನ್ನು ಈ ಕೆಳಗಿನಂತೆ ವಿಂಗಡಿಸಿದ್ದನು.

* ಕಂಪನ

* ವಿಷಯ

* ದಶ ಗ್ರಾಮ

* ಗ್ರಾಮ

      ಕಂದಾಯ.

* ಭೂ ಕಂದಾಯ ರಾಜ್ಯದ ಮುಖ್ಯ ಆದಾಯವಾಗಿತ್ತು.

* ಇವರ ಕಾಲದ ನಾಣ್ಯಗಳೆಂದರೆ – ಗದ್ಯಾಣ, ದ್ರುಮ್ಮ , ಪಣ, ಸುವರ್ಣ

   ಸಾಮಾಜಿಕ ಜೀವನ.

* ಕದಂಬ ಸಮಾಜವು ವರ್ಣಾಶ್ರಮದ ಮೇಲೆ ರೂಪಗೊಂಡಿತು.

* ಗ್ರಾಮೀಣ ಜೀವನ ಪ್ರಧಾನವಾಗಿತ್ತು.

* ಅವಿಭಕ್ತ ಕುಟುಂಬ ಪದ್ಧತಿ ರೂಢಿಯಲ್ಲಿತ್ತು.

* ಸಹಗಮನ ಪದ್ಧತಿ ಮತ್ತು ಸಗೋತ್ರ ವಿವಾಹ ಆಚರಣೆಯಲ್ಲಿತ್ತು.

          ಶಿಕ್ಷಣ.

* ಗುರುಕುಲ ಶಿಕ್ಷಣ ಪದ್ಧತಿ ರೂಢಿಯಲ್ಲಿತ್ತು.

* ಘಟಕಗಳು, ಅಗ್ರಹಾರ, ಬ್ರಹ್ಮಪುರಿ, ಮಠ ಮತ್ತು ದೇವಾಲಯಗಳು ಶಿಕ್ಷಣ ಕೇಂದ್ರಗಳಾಗಿದ್ದವು.

* ಅಗ್ರಹಾರಗಳು ಉಚಿತ ಊಟ ವಸತಿ ಸೌಲಭ್ಯವಿದ್ದ ವಿದ್ಯಾ ಕೇಂದ್ರಗಳು.

* ಘಟಕ ಸ್ಥಾನಗಳು ಧಾರ್ಮಿಕ ಚರ್ಚಾ ಸ್ಪರ್ಧೆ ಏರ್ಪಡಿಸುತ್ತಿದ್ದವು.

* ಕಂಚಿ ಅಂದಿನ ಪ್ರಸಿದ್ಧ ವಿದ್ಯಾ ಕೇಂದ್ರವಾಗಿತ್ತು.

        ಸಾಹಿತ್ಯ.

* ಶಾಂತಿನಾಥ – ಸುಕುಮಾರ ಚರಿತೆ

* ನಾಗವರ್ಮ – ಚಂದ್ರ ಚೂಡಾಮಣಿ

* ಚಂದ್ರರಾಜನ – ಮದನ ತಿಲಕ

* ಎರಡನೇ ಕಾಳಿದಾಸ ಕಾಂತಳೇಶ್ವರ – ದೌತ್ಯಂ

* ಟಾಲಮಿ – ಭೂಗೋಳಶಾಸ್ತ್ರ

ಶಾಸನಗಳ ಅಧ್ಯಯನವನ್ನು ” ಎಫಿಗ್ರಫಿ ” ಎಂದು ಕರೆಯುತ್ತಾರೆ.

   ಕಲೆ ಮತ್ತು ವಾಸ್ತು ಶಿಲ್ಪ.

* ಇವರು ಕದಂಬ ಶೈಲಿ ಎಂಬ ಹೊಸ ವಾಸ್ತು ಶಿಲ್ಪ ಸೃಷ್ಟಿಸಿದರು.

ಇವರ ಕಾಲದ ಪ್ರಮುಖ ಕಟ್ಟಡಗಳು.

* ಹಲಸೀಯ ಕಲ್ಲೇಶ್ವರ ( ತ್ರಿಕೂಟ ದೇವಾಲಯ ), ಜೈನ ಬಸದಿ ಮುಂತಾದವು.

* ತಾಳಗುಂದದ ಪ್ರಣವೇಶ್ವರ ದೇವಾಲಯ ದೇವಾಲಯ.

ತಲಕಾಡಿನ ಗಂಗರು ( ಸಾಮಾನ್ಯ ಶಕ 350-1004).

* ಕನ್ನಡ ನಾಡನ್ನು 600 ವರ್ಷಗಳ ಕಾಲ ಸುದೀರ್ಘವಾಗಿ ಆಳಿದ ರಾಜವಂಶ.

* ಗುರು ಸಿಂಹನಂದಿಯ ಮಾರ್ಗದರ್ಶನದಂತೆ ದಡಿಗ ( ಕೊಂಗಣಿವರ್ಮ) ಮತ್ತು ಮಾಧವ ಮನೆತನವನ್ನು ಸ್ಥಾಪಿಸಿದರು.

* ಸಾಮಾನ್ಯ ಶಕ 1122 ಕಲ್ಲೂರು ಗುಡ್ಡ ಶಿಲಾಶಾಸನದ ಪ್ರಕಾರ ಗಂಗರು ಉತ್ತರ ಅಯೋಧ್ಯೆಯನ್ನು ಆಳುತ್ತಿದ್ದ ಇಕ್ಷ್ವಾಕು ವಂಶದವರು ಎಂದಿದ್ದಾರೆ.

    ರಾಜಧಾನಿಗಳು.

* ಇವರ ಪ್ರಥಮ ರಾಜಧಾನಿ- ಕೋಲಾರ ( ಕುವಲಾಲ)

* ಮುಖ್ಯ ರಾಜಧಾನಿ – ತಲಕಾಡು ( ತಲವನಪುರ) ಮೈಸೂರು ಜಿಲ್ಲೆ.

 ದಡಿಗ ( ಸಾಮಾನ್ಯ ಶಕ 350- 380).

* ಈತನ ಮೂಲ ಹೆಸರು ಕೊಂಗಣಿವರ್ಮ.

* ಜೈನ ಮುನಿ ಸಿಂಹನಂದಿಯ ಬೆಂಬಲದೊಂದಿಗೆ ಗಂಗಾ ರಾಜ್ಯ ಸ್ಥಾಪಿಸಿದನು.

* ಹರಿ ವರ್ಮ ನಂತರ ಸಿಂಹವರ್ಮ ಮತ್ತು ವಿಷ್ಣು ಗೋಪ ಆಳ್ವಿಕೆ ಮಾಡಿದರು.

ದುರ್ವಿನಿತ ( ಸಾಮಾನ್ಯ ಶಕ 555-605).

* ಈತ ಗಂಗರಸರಲ್ಲಿಯೇ  ಅಪ್ರತಿಮ ವೀರ , ಕಲಾಭಿಜ್ಞ ಮತ್ತು ಘನ ವಿದ್ವಾಂಸ.

* ತಾಯಿಯ ಪ್ರದೇಶವಾದ ಪೊನ್ನಾಟ ಅಂದರೆ ಹೆಗ್ಗಡದೇವನ ಕೋಟೆಯನ್ನು ಪಡೆದುಕೊಂಡು ತನ್ನ ಸಾಮ್ರಾಜ್ಯವನ್ನು ಬಲಪಡಿಸಿಕೊಂಡನು.

* ಇವನು ವೈಷ್ಣವ ಮತಾವಲಂಬಿಯಾಗಿದ್ದನು ಎಲ್ಲಾ ಧರ್ಮಗಳನ್ನು ಪೋಷಿಸಿದವನು.

* ಘನ ವಿದ್ವಾಂಸನಾದ ಈತ ಗುಣಾಡ್ಯನ ಬೃಹತ್ ಕಥಾವನ್ನು ಸಂಸ್ಕೃತಕ್ಕೆ ಭಾಷಾಂತರಿಸಿದ್ದಾನೆ.

* ಭಾರವಿಯ ಕಿರಾತಾರ್ಜುನೀಯ ಎಂಬ ಕೃತಿಯನ್ನು 15ನೇ ಮಂಡಲವನ್ನು ಕುರಿತು ಭಾಷ್ಯಯನ್ನು ಬರೆದಿದ್ದಾನೆ.

  ಶ್ರೀ ಪುರುಷ ( ಸಾಮಾನ್ಯ ಶಕ 726-788).

* ಈತನ ರಾಜಧಾನಿಯನ್ನು ಮಾತೊಂದದಿಂದ ಮಾನ್ಯ ಪುರಕ್ಕೆ ವರ್ಗಾಯಿಸಿದ.

* ಇವನು ಸ್ವತಃ ಕವಿಯಾಗಿದ್ದು ಸಂಸ್ಕೃತದಲ್ಲಿ ಗಜ ಶಾಸ್ತ್ರ ಎಂಬ ಕೃತಿಯನ್ನು ರಚಿಸಿದನು. ಇದು ಆನೆಯನ್ನು ಪಳಗಿಸುವ ತಲೆಯ ಮಾಹಿತಿಯನ್ನು ಒಳಗೊಂಡಿದೆ.

ಎರಡನೇ ಶಿವಮಾರ ( ಸಾಮಾನ್ಯ ಶಕ 788-816).

* ಎರಡನೇ ಶಿವಮಾರ ರಚಿಸಿದ ಕೃತಿ ಗಜಾಷ್ಟಕ, ಸೇತುಬಂಧ, ಶಿವಮಾರು ತರ್ಕ

ನಾಲ್ಕನೇ ರಾಚಮಲ್ಲ ( ಸಾಮಾನ್ಯ ಶಕ 975-986).

* ಈತನ ಪ್ರಸಿದ್ಧ ಪ್ರಧಾನ ಮಂತ್ರಿ ಚಾಮುಂಡರಾಯ.

* ಚಾವುಂಡರಾಯನ ಧಾರ್ಮಿಕ ಕಾರ್ಯಗಳಿಗೆ ಪ್ರೋತ್ಸಾಹ ಕೊಟ್ಟಿದ್ದಕ್ಕಾಗಿ ಅವನ ಪ್ರಾಮಾಣಿಕ ಸೇವೆಯನ್ನು ಮೆಚ್ಚಿ ರಾಯ ಎಂಬ ಬಿರುದು ನೀಡಿ ಗೌರವಿಸಿದನು.

  -: ಚಾವುಂಡರಾಯ :-

* ಇವನು ಎರಡನೆಯ ಮಾರಸಿಂಹ ಮತ್ತು 4ನೇ ರಾಚ ಮಲ್ಲನ ಮಂತ್ರಿ ಮತ್ತು ಮಹಾದಂಡ ನಾಯಕ.

* ಸ್ವತಃ ಕವಿಯಾದ ಈತ 24 ತೀರ್ಥಂಕರ ಚರಿತ್ರೆಯ ಚಾವುಂಡರಾಯ ಪುರಾಣವನ್ನು ಕನ್ನಡದಲ್ಲಿ ರಚಿಸಿ ಚರಿತ್ರ ಸಾರವನ್ನು ಸಂಸ್ಕೃತದಲ್ಲಿ ರಚಿಸಿದನು.

* ಚಾವುಂಡರಾಯ ಸಾಮಾನ್ಯ ಶಕ 982 ರಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹವನ್ನು ಪ್ರತಿಷ್ಠಾಪಿಸಿದನು ಇದರ ಎತ್ತರ 58 ಅಡಿ, ಇದರ ಶಿಲ್ಪಿ ಅರಿಷ್ಟನೇಮಿ.

* 12 ವರ್ಷಗಳಿಗೊಮ್ಮೆ ಇದರ ಮಹಾಮಸ್ತಾಭಿಷೇಕ ನಡೆಯುತ್ತದೆ.

  -: ಗಂಗರ ಆಡಳಿತ :-

* ಇವರ ಕಾಲದ ಯುದ್ಧ ಮಂತ್ರಿಯನ್ನು ಸಂಧಿ ವಿಗ್ರಹಿ ಎನ್ನುತ್ತಿದ್ದರು.

* ಅರಮನೆಯ ಮೇಲ್ವಿಚಾರಕರನ್ನು ಮನೆವೆರ್ಗಡೆ ಎನ್ನುತ್ತಿದ್ದರು.

* ಇವರು ಸಾಮ್ರಾಜ್ಯವನ್ನು ಪ್ರಾಂತ್ಯಗಳಾಗಿ, ಪ್ರಾಂತ್ಯಗಳನ್ನು ವಿಷಯಗಳಾಗಿ ಅಂದರೆ ಜಿಲ್ಲೆಗಳಾಗಿ, ವಿಷಯಗಳನ್ನು ಕಂಪನಗಳಾಗಿ ಅಂದರೆ ತಾಲೂಕುಗಳಾಗಿ, ಕಂಪನಗಳನ್ನು ಗ್ರಾಮಗಳಾಗಿ ವಿಂಗಡಿಸಲಾಗಿತ್ತು.

* ಗ್ರಾಮ ಸಭೆಯನ್ನು ಮಹಾಜನ ಸಭೆ ಎನ್ನುತ್ತಿದ್ದರು.

  -: ಆರ್ಥಿಕ ಸ್ಥಿತಿ:-

* 1/6 ಭೂ ಕಂದಾಯ,1/5 ಭಾಗ ಅರಣ್ಯ ಕಂದಾಯ ವಿಧಿಸುತ್ತಿದ್ದರು.

* ಪೊನ್, ಸುವರ್ಣ, ಗದ್ಯಾಣ, ನಿಷ್ಕ ಎಂಬ ಚಿನ್ನದ ನಾಣ್ಯಗಳು ಹಾಗೂ ಪಣ, ಹಗ, ಕಾಸು , ದ್ರಮ್ಮು ಎಂಬ ಬೆಳ್ಳಿ ನಾಣ್ಯಗಳು ಅಸ್ತಿತ್ವದಲ್ಲಿದ್ದವು.

    -: ಧರ್ಮ :-

* ಜೈನ ಧರ್ಮವು ಪ್ರಸಿದ್ಧವಾಗಿತ್ತು.

* ಜೈನ ಕಾಶಿ ಎಂದೇ ಹೆಸರಾದ ಶ್ರವಣಬೆಳಗೊಳವು ಅಂದಿನ ಪ್ರಸಿದ್ಧ ಜೈನ ಯಾತ್ರಾಸ್ಥಳವಾಗಿತ್ತು.

-: ಕಲೆ ಮತ್ತು ವಾಸ್ತು ಶಿಲ್ಪ :-

* ಗಂಗರ ಕಟ್ಟಡಗಳು ಇಟ್ಟಿಗೆ, ಗಾರೆ ಮತ್ತು ಮರದಿಂದ ಕಟ್ಟಲಾಗಿದೆ.

* ಅಂದಿನ ಪ್ರಸಿದ್ದ ನೃತ್ಯಗಾರ್ತಿ ಬಾಚಲಾ ದೇವಿಯನ್ನು ನೃತ್ಯವಿಶಾರದೆ ಮತ್ತು ಪಾತ್ರ ಜಗದಳೆ ಎನ್ನುತ್ತಿದ್ದರು.

     -: ಸಾಹಿತ್ಯ :-

* ಎರಡನೇ ಮಾಧವ – ದತ್ತಕ ಸೂತ್ರ ವೃತ್ತಿ

* ಗುಣ ವರ್ಮ- ಶೂದ್ರಕ ಮತ್ತು ಹರಿವಂಶ

* ಒಂದನೇ ನಾಗವರ್ಮ – ಛಂದೋಂಬುಧಿ

* ಎರಡನೇ ಶಿವಮಾರ – ಗಜಾಷ್ಟಕ ಸೇತುಬಂಧ ಮತ್ತು ಶಿವಮಾರ ತರ್ಕ

* ವೀರನಂದಿ – ಚಂದ್ರಪ್ರಭ ಪುರಾಣ

* ದುರ್ವಿನಿತ – ಗುಣಾಡ್ಯನ ಬೃಹತ್ ಕಥಾ

* ಭಾರವಿಯ – ಕಿರಾತಾರ್ಜುನೀಯ 15ನೇ ಮಂಡಲಕ್ಕೆ ವಿಮರ್ಶ ಬರೆದನು.

* ಶ್ರೀ ಪುರುಷ – ಗಜ ಶಾಸ್ತ್ರ.

* ಚಾವುಂಡರಾಯ – ಚಾವುಂಡರಾಯ ಪುರಾಣ ಮತ್ತು ಚರಿತ್ರ ಸಾರ.

 

 

 

 

 

 

WhatsApp Group Join Now
Telegram Group Join Now