ತಪ್ಪು ಫೋನ್ ಸಂಖ್ಯೆ ಅಥವಾ UPI ಐಡಿಗೆ ಕಳುಹಿಸಿದ ಹಣ ವಾಪಸ್ ಪಡೆಯುವುದು ಹೇಗೆ?

UPI ಮೂಲಕ ಹಣ ವರ್ಗಾವಣೆ ಮಾಡುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು.

* ದೊಡ್ಡ ಮೊತ್ತವನ್ನು ಕಳುಹಿಸುವ ಮೊದಲು ತಾಳ್ಮೆಯಿಂದ ಎಲ್ಲ ವಿವರಗಳನ್ನು ಪರೀಕ್ಷಿಸಿ. ಯಾರ ಅನಗತ್ಯ ಒತ್ತಡಕ್ಕೂ ಬಲಿಯಾಗಬೇಡಿ.

* ಹಣವನ್ನು ವರ್ಗಾಯಿಸುವ ಮೊದಲು ನಮೂದಿಸಿದ ಮೊಬೈಲ್ ಸಂಖ್ಯೆಗೆ ಸಂಬಂಧಿಸಿದ ಪ್ರದರ್ಶಿಸಲಾದ ಹೆಸರನ್ನು ಕಳುಹಿಸಬೇಕಾದ ವ್ಯಕ್ತಿಯೊಂದಿಗೆ ಯಾವಾಗಲೂ ಪರಿಶೀಲಿಸಿ.

* ನೀವು ನಮೂದಿಸಿದ ಮೊತ್ತವನ್ನು ಯಾವಾಗಲೂ ಪರಿಶೀಲಿಸಿ ಮತ್ತು ಕಳುಹಿಸಬೇಕಾದ ವ್ಯಕ್ತಿಯೊಂದಿಗೆ ದೃಢೀಕರಿಸಿ.

* ಹಣವನ್ನು ವರ್ಗಾವಣೆ ಮಾಡುವ ಮೊದಲು ಯಾವಾಗಲೂ ನಮೂದಿಸಿದ VPA ಅನ್ನು ಕಳುಹಿಸಬೇಕಾದ ವ್ಯಕ್ತಿಯೊಂದಿಗೆ ಪರಿಶೀಲಿಸಿ.

* ಅದು ದೊಡ್ಡ ಮೊತ್ತವನ್ನು ಮತ್ತು ಹೊಸ ಪಾವತಿದಾರರನ್ನು ಒಳಗೊಂಡಿದ್ದರೆ, ಮೊದಲು ಸಣ್ಣ ಮೊತ್ತಕ್ಕೆ ಪರೀಕ್ಷಾ ವರ್ಗಾವಣೆಯನ್ನು ಮಾಡಬೇಕು.

ತಪ್ಪು ಫೋನ್ ಸಂಖ್ಯೆ ಅಥವಾ ID ಗೆ ಹಣ ವರ್ಗಾಯಿಸಲು ಕಾರಣಗಳು.

* ನೀವು ನಿಮ್ಮ ಸಂಪರ್ಕದ ಹಳೆಯ ಮೊಬೈಲ್ ಸಂಖ್ಯೆಗೆ ಹಣವನ್ನು ಕಳುಹಿಸಿರುವಿರಿ, ಆದರೆ ಆ ಸಂಖ್ಯೆ ಬಳಕೆ ಅಥವಾ ರಿಚಾರ್ಜ್ ಮಾಡದಿರುವುದು ಅಥವಾ ಇತರ ಕಾರಣಗಳಿಂದಾಗಿ ಸೇವಾ ಪುರೈಕೆದಾರರು ಅದನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಿರುತ್ತಾರೆ.

* ನೀವು ಫೋನ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರುತ್ತಿರಿ.

* ನೀವು ಕಾಂಟ್ಯಾಕ್ಟ್ ಲಿಸ್ಟ್ ಅಥವಾ ಇತ್ತೀಚಿನ ವರ್ಗಾವಣೆಗಳಿಂದ ತಪ್ಪು ಸಂಪರ್ಕವನ್ನು ಆಯ್ಕೆ ಮಾಡಿದ್ದೀರಿ.

* ಕಾಗುಣಿತ ದೋಷ ಅಥವಾ ನಿಮಗೆ ದೊರೆತ ತಪ್ಪಾದ ವರ್ಚುವಲ್ ಪಾವತಿ ವಿಳಾಸವನ್ನು ( VPA ) ನಮೂದಿಸಿರುತ್ತೀರಿ.

* ನಿಷ್ಕ್ರಿಯವಾಗಿರುವ ಅಥವಾ ಮುಚ್ಚಿರುವ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಗೆ ಹಣವನ್ನು ಕಳಿಸುವುದು.

ತಪ್ಪು ಫೋನ್ ಸಂಖ್ಯೆ ಅಥವಾ UPI ಐಡಿಗೆ ಹಣ ಕಳುಹಿಸಿದ ನಂತರ ತೆಗೆದುಕೊಳ್ಳಬೇಕಾದ ಕ್ರಮಗಳು.

* ನೀವು ತಪ್ಪಾಗಿ ಹಣವನ್ನು ವರ್ಗಾಯಿಸಿದ ವ್ಯಕ್ತಿಯೊಂದಿಗೆ ಮಾತನಾಡಲು ಪ್ರಯತ್ನಿಸಿ, ಹೆಚ್ಚಿನವರು ಹಣವನ್ನು ಹಿಂದಿರುಗಿಸುತ್ತಾರೆ.

* ನೀವು ಬಳಸುತ್ತಿರುವ ಖಿಐ ಅಪ್ಲಿಕೇಶನ್ ನ ಗ್ರಾಹಕರ ಆರೈಕೆ ಬೆಂಬಲ ತಂಡಕ್ಕೆ ತಪ್ಪು ವಹಿವಾಟಿನ ಸಮಸ್ಯೆಯನ್ನು ವರದಿ ಮಾಡಿ ಹಣ ಮರುಪಡೆಯಲು ಸಹಾಯ ಪಡೆಯಿರಿ.

* ನಿಮ್ಮ ಬ್ಯಾಂಕನ್ನು ನೇರವಾಗಿ ಸಂಪರ್ಕಿಸಿ ಮತ್ತು ಪಾವತಿಯ ವಿಶಿಷ್ಟ ವಹಿವಾಟು ಉಲ್ಲೇಖ ( ಖ್ಕಿ) ಸಂಖ್ಯೆಯೊಂದಿಗೆ ತಪ್ಪಾದ ಕ್ರೆಡಿಟ್ ಚಾರ್ಜ್ ಬ್ಯಾಂಕ್ ಅನ್ನು ಲಗತ್ತಿಸಿ. ಹಣ ಸ್ವೀಕರಿಸಿದ ಖಾತೆಯು ಅದೇ ಬ್ಯಾಂಕಿನಲ್ಲಿದ್ದರೆ, ಬ್ಯಾಂಕ್ ಖಾತೆಯ ಮಾಲೀಕರನ್ನು ಸಂಪರ್ಕಿಸುತ್ತದೆ ಮತ್ತು ಅವರು ಒಪ್ಪಿದರೆ, ನಿಮ್ಮ ಖಾತೆಗೆ ಮೊತ್ತವನ್ನು ಹಿಂತಿರುಗಿಸುತ್ತದೆ. ಖಾತೆಯು ಬೇರೆ ಬ್ಯಾಂಕಿಗೆ ಸೇರಿದ್ದರೆ, ನಿಮ್ಮ ಬ್ಯಾಂಕ್ ಫೆಸಿಲಿಟೇಟರ ಆಗಿ ಕಾರ್ಯನಿರ್ವಹಿಸಬಹುದು ಮತ್ತು ಇತರ ಬ್ಯಾಂಕ್ ಖಾತೆಯಲ್ಲಿ ಆ ಮೊತ್ತದ ಮೇಲೆ ಲೀನ್ ಅಥವಾ ಡೆಬಿಟ್ ಪ್ರೀಜ್ ಅನ್ನು ಲಗತ್ತಿಸಬಹುದು. ಖಾತೆಯ ಮಾಲೀಕರ ಅನುಮೋದನೆಯೊಂದಿಗೆ ಮೊತ್ತವನ್ನು ನಿಮ್ಮ ಖಾತೆಗೆ ಹಿಂತಿರುಗಿಸಲಾಗುತ್ತದೆ.

* ಬ್ಯಾಂಕ್ ನಿಮ್ಮ ವಿನಂತಿಯನ್ನು ಪ್ರತಿಕ್ರಿಯಿಸಲು ವಿಫಲವಾದಲ್ಲಿ ಅಥವಾ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿದ್ದರೆ. ಪರಿಹಾರಕ್ಕಾಗಿ ಬ್ಯಾಂಕ್ ನ ಒಂಬುಡ್ಸ್ ಮನ್ ಅನ್ನು ಸಂಪರ್ಕಿಸಬಹುದು.

* ಸ್ವೀಕರಿಸುವವರು ನಿಮ್ಮ ವಿನಂತಿಗೆ ಪ್ರತಿಕ್ರಿಯಿಸದಿದ್ದರೆ ಅಥವಾ ಬ್ಯಾಂಕ್ ನಿಮ್ಮ ಮೊತ್ತವನ್ನು ಹಿಂಪಡೆಯಲು ಸಹಾಯ ಮಾಡದಿದ್ದರೆ ಅಥವಾ ವಿಫಲವಾದರೆ. ನೀವು NPCI ಜಾಲತಾಣದಲ್ಲಿ ( http://www.npci.org.in/what -we-do/upi/) ದೂರು ಸಲ್ಲಿಸಬಹುದು.

 

 

WhatsApp Group Join Now
Telegram Group Join Now