-: ಭೂಮಿ :-
* ಸೌರವ್ಯೂಹದಲ್ಲಿ ಸೂರ್ಯನಿಂದ 3 ನೇ ಗ್ರಹ.
* ಭೂಮಿಯು ಎಲ್ಲ ಜೀವಿಗಳಿಗೆ ವಾಸಸ್ಥಾನವಾಗಿದೆ ಏಕೆಂದರೆ ಸೂರ್ಯ ಮತ್ತು ಭೂಮಿಯ ನಡುವಿನ ದೂರ ಜೀವಿಗಳಿಗೆ ಪೂರಕವಾದ ಉಷ್ಣಾಂಶ, ಅನಿಲಗಳು, ವಾಯುಗೋಳ,ಮತ್ತು ಜಲಚಕ್ರ ಇತ್ಯಾದಿಗಳು.
* ಭೂಮಿಯನ್ನು ಜೀವಂತ ಗ್ರಹ, ವಿಶಿಷ್ಟ ಗ್ರಹ , ಜಲಾವೃತ ಗ್ರಹ , ನೀಲಿಗ್ರಹ ಎಂದು ಕರೆಯುತ್ತಾರೆ.
-: ಭೂಮಿಯ ಗಾತ್ರ ಮತ್ತು ಆಕಾರ :-
* ಸೂರ್ಯನ ಪರಿವಾರದಲ್ಲಿ ಭೂಮಿಯು 5 ನೇ ದೊಡ್ಡ ಗ್ರಹವಾಗಿದೆ.
* ಭೂಮಿಯ ವ್ಯಾಸವು ಚಂದ್ರನ ವ್ಯಾಸಕ್ಕಿಂತ ಸುಮಾರು ನಾಲ್ಕು ಪಟ್ಟು ದೊಡ್ಡದಾಗಿದೆ ಹಾಗೂ ಸೂರ್ಯನಿಗಿಂತ 107 ಪಟ್ಟು ಚಿಕ್ಕದಾಗಿದೆ.
* ಭೂಮಿಯ ಒಟ್ಟು ಭೌಗೋಳಿಕ ಕ್ಷೇತ್ರ 510 ದಶಲಕ್ಷ ಚದರ ಕಿಲೋಮೀಟರ್ ಆಗಿದ್ದು ಇದರಲ್ಲಿ 361 ದಶಲಕ್ಷ ಚದರ ಕಿಲೋಮೀಟರ್ಗಗಳಷ್ಟು ( 70.78%) ಕ್ಷೇತ್ರವು ನೀರಿನಿಂದ ಆವರಿಸಲ್ಪಟ್ಟಿದೆ. ಉಳಿದ 149 ದಶಲಕ್ಷ ಚದರ ಕಿಲೋಮೀಟರ್ ನಷ್ಟು ಕ್ಷೇತ್ರವು ( 29.22%) ಭೂಭಾಗದಿಂದ ಕೂಡಿದೆ.
* ಹೀಗೆ ಭೂಮಿಯ ಜಲ ಹಾಗೂ ಭೂಭಾಗಗಳ ಹಂಚಿಕೆ ಅಸಮತೆಯಿಂದ ಕೂಡಿದೆ.
* ಭೂಮಿ ಮತ್ತು ಜಲರಾಶಿಗಳ ಕ್ಷೇತ್ರ 1:2.43 ರಷ್ಟು. ಅನುಪಾತವನ್ನು ಹೊಂದಿದೆ.
-: ಭೂಮಿಯ ಆಕಾರ :-
* ಭೂಮಿಯ ಆಕಾರವನ್ನು ಭೂಮ್ಯಿ ಕಾರ/ ಜಿಯಾಡ್/ ಗೋಳಾಕಾರ ಎಂದು ಕರೆಯಲಾಗಿದೆ. ಏಕೆಂದರೆ ಭೂಮಿಯು ಧ್ರುವಗಳ ಬಳಿ ಸ್ವಲ್ಪ ಚಪ್ಪಟೆಯಾಗಿದ್ದು ಸಮಭಾಜಕ ವೃತ್ತದ ಬಳಿ ಉಬ್ಬಿದಂತಿದೆ.
* ಭೂಮಿಯ ಸಮಭಾಜಕ ವೃತ್ತದ ವ್ಯಾಸ 12,756 ಕಿಲೋಮೀಟರ್ ಮತ್ತು ಧ್ರುವಿಯ ವ್ಯಾಸ 12 ,714 ಕಿಲೋಮೀಟರ್. ಇವೆರಡರ ನಡುವಿನ ವ್ಯತ್ಯಾಸ 42 ಕಿಲೋಮೀಟರ್ ಗಳಾಗಿದೆ.
* ಅದೇ ರೀತಿ ಸಮಭಾಜಕ ವೃತ್ತದ ಸುತ್ತಳತೆ 40.076 ಕಿಲೋಮೀಟರ್ ಗಳಾಗಿದ್ದು ಇದರಲ್ಲಿ 68 ಕಿಲೋಮೀಟರ್ಗಳಷ್ಟು ವ್ಯತ್ಯಾಸವಿದೆ. ಇದು ಭೂಮಿಯು ಗೋಳಾಕಾರವಾಗಿ ಇರುವುದನ್ನು ಸ್ಪಷ್ಟಪಡಿಸುತ್ತದೆ.
-: ನೆಲ ಮತ್ತು ಜಲ ಭಾಗಗಳ ಹಂಚಿಕೆ :-
* ಭೂಮಿಯ ನೆಲ ಭಾಗಗಳನ್ನು ಭೂಖಂಡಗಳು ಎಂದು ಕರೆಯುತ್ತಾರೆ.
* ಭೂಮಿಯ ಎಲ್ಲಾ ಭಾಗವನ್ನು ಏಳು ಭೂಖಂಡಗಳಾಗಿ ವಿಂಗಡಿಸಲಾಗಿದೆ.
* ಅವುಗಳೆಂದರೆ ಏಷ್ಯಾ, ಆಫ್ರಿಕಾ, ಉತ್ತರ ಅಮೇರಿಕಾ, ದಕ್ಷಿಣ ಅಮೆರಿಕ, ಅಂಟಾರ್ಕ್ಟಿಕ್, ಯುರೋಪ್ ಮತ್ತು ಆಸ್ಟ್ರೇಲಿಯಾ.
* ಏಷ್ಯಾ ಅತಿ ದೊಡ್ಡ ಭೂ ಕಂಡ ಹಾಗೂ ಆಸ್ಟ್ರೇಲಿಯಾ ಅತಿ ಚಿಕ್ಕ ಭೂಖಂಡ.
* ಭೂಮಿಯ ಮೇಲಿನ ವಿಸ್ತಾರವಾದ ಜಲ ರಾಶಿಗಳನ್ನು ಮಹಾಸಾಗರಗಳು ಎಂದು ಕರೆಯುತ್ತಾರೆ. ಅವುಗಳನ್ನು ನಾಲ್ಕು ಮಹಾಸಾಗರಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪೆಸಿಫಿಕ್ ಸಾಗರ, ಅಟ್ಲಾಂಟಕ್ ಸಾಗರ, ಹಿಂದೂ ಮಹಾಸಾಗರ ಮತ್ತು ಆರ್ಕ್ಟಿಕ್ ಸಾಗರ.
* ಇದರಲ್ಲಿ ಪೆಸಿಫಿಕ್ ಸಾಗರ ಅತಿ ಹೆಚ್ಚು ವಿಶಾಲ ಹಾಗೂ ಆಳವಾದದ್ದು ಅದೇ ರೀತಿಯಾಗಿ ಆರ್ಕಿಟಿಕ್ ಸಾಗರ ಅತಿ ಚಿಕ್ಕ ಮತ್ತು ಕಡಿಮೆ ಆಳ ಹೊಂದಿದೆ.
* ನೆಲ ಮತ್ತು ಜಲ ರಾಶಿಗಳು ಉತ್ತರ ಗೋಳಾರ್ಧ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಸಮವಾಗಿ ಹಂಚಿಕೆಯಾಗಿಲ್ಲ.
* ಉತ್ತರ ಗೋಳಾರ್ಧದಲ್ಲಿ 60% ಭಾಗದಷ್ಟು ಭೂಭಾಗ ವಿದ್ದು, 40% ರಷ್ಟು ಜಲರಾಶಿ ಇದೆ.
* ಆದ್ದರಿಂದ ಇದನ್ನು ಭೂ ಪ್ರಧಾನ ಗೋಳಾರ್ಧ ಎಂದು ಕರೆಯಲಾಗಿದೆ.
* ಇದಕ್ಕೆ ವಿರುದ್ಧವಾಗಿ ದಕ್ಷಿಣ ಗೋಳಾರ್ಧದಲ್ಲಿ 81% ಭಾಗದಷ್ಟು ಜಲರಾಶಿ ಇದ್ದು 19% ಭಾಗದಷ್ಟು ನೆಲ ಭಾಗವಿದೆ. ಇದರಿಂದ ಇದನ್ನು ಜಲ ಪ್ರಧಾನ ಗೋಳಾರ್ಧ ಎಂದು ಕರೆಯುವರು.
-: ಅಕ್ಷಾಂಶ ಮತ್ತು ರೇಖಾಂಶಗಳು :-
* ಭೂಮಿಯ ಗೋಳಾಕಾರವಾಗಿದ್ದು, ಭೂಮಿಯ ಮೇಲಿನ ಎರಡು ಸರಳಗಳ ಸ್ಥಾನ ದಿಕ್ಕು ಹಾಗೂ ಅಂತರಗಳನ್ನು ಗುರುತಿಸುವುದು ಕಷ್ಟ. ಭೂಮಿಯ ಮೇಲಿನ ಒಂದು ಸ್ಥಳದ ನಿರ್ದಿಷ್ಟ ಸ್ಥಾನ, ಅಂತರ ಮತ್ತು ದಿಕ್ಕುಗಳನ್ನು ಅರಿಯಲು ಕಾಲ್ಪನಿಕ ರೇಖಾ ಜಾಲ ವ್ಯವಸ್ಥೆಯನ್ನು ನಕ್ಷೆ ಅಥವಾ ಗೋಳದ ಮೇಲೆ ಎಳೆಯಲಾಗಿದೆ. ಈ ಕಾಲ್ಪನಿಕ ರೇಖೆಗಳನ್ನು ಪೂರ್ವ ಪಶ್ಚಿಮವಾಗಿ ಮತ್ತು ಉತ್ತರ ದಕ್ಷಿಣವಾಗಿ ಎಳೆಯಲಾಗಿದ್ದು ಅವುಗಳನ್ನು ಕ್ರಮವಾಗಿ ಅಕ್ಷಾಂಶ ಮತ್ತು ರೇಖಾಂಶಗಳು ಎನ್ನುವರು.
* ಇವು ಪರಸ್ಪರ ಲಂಬಕೋನದಲ್ಲಿ ಛೇದಿಸುವುದರಿಂದ ದೊರೆಯುವ ಛೇದಕ ಬಿಂದುಗಳಿಗೆ ಭೌಗೋಳಿಕ ನಿರ್ದೇಶಾಂಕಗಳು ಎಂದು ಕರೆಯುತ್ತಾರೆ.