ಯುರೋಪಿನ ಭೌಗೋಳಿಕ ಅನ್ವೇಷಣೆಗಳು, ಮತ ಸುಧಾರಣೆ, ಕೈಗಾರಿಕಾ ಕ್ರಾಂತಿ (HSTR,GPSTR,TET,FDA,SDA All Competative exam notes.)

ಭೌಗೋಳಿಕ ಅನ್ವೇಷಣೆಗಳು.

* ಸಾಮಾನ್ಯ ಶಕ 16ನೇ ಶತಮಾನವನ್ನು ಭೌಗೋಳಿಕ ಅನ್ವೇಷಣೆಗಳು ಎಂದು ಕರೆಯಲಾಗಿದೆ.

ಭೌಗೋಳಿಕ ಅನ್ವೇಷಣೆಗೆ ಕಾರಣಗಳು.

* ಸಾಮಾನ್ಯ ಶಕ 1453  ರಲ್ಲಿ ಟರ್ಕರು ಕಾನ್ಸ್ಟಾಂಟಿನೋಪಲ್ ನಗರದ ಪತನ.

* ರಾಷ್ಟ್ರ- ರಾಜ್ಯಗಳ ಏಳಿಗೆ.

* ಆರ್ಥಿಕ ಕಾರಣಗಳು.

* ಧರ್ಮ ಯುದ್ದಗಳು.

* ಪ್ರವಾಸಿಗರ ವರದಿಗಳು – ಮಾರ್ಕೊ ಪೋಲೊ, ಟ್ರಾವೆಲ್ಸ್ ಆಫ್ ಮಾರ್ಕೊ ಪೋಲೊ.

* ಹಣಕಾಸಿನ ನೆರವು.

* ಧಾರ್ಮಿಕ ಕಾರಣಗಳು.

* ದುಬಾರಿ ಹಳೆಯ ಮಾರ್ಗಗಳು.

* ವೈಜ್ಞಾನಿಕ ಕಾರಣಗಳು.

ಭೂ ಶೋಧನೆಗಳು.

* ಮಧ್ಯ ಯುಗದ ನಂತರ ಭೂ ಅನ್ವೇಷಣೆ ಕಾರ್ಯದಲ್ಲಿ ಮುಖ್ಯ ರಾಷ್ಟ್ರಗಳೆಂದರೆ ಪೋರ್ಚುಗಲ್ ಮತ್ತು ಸ್ಪೇನ್.

* ನಾವಿಕ ಹೆನ್ರಿ ಕಳುಹಿಸಿದ್ದ ನಾವಿಕರು ದೀರ್ಘಕಾಲ ಓಡಾಡಿ, ಆಫ್ರಿಕಾ ಖಂಡದ ಪಶ್ಚಿಮ ಕರಾವಳಿಯನ್ನು ದಕ್ಷಿಣದ ವರೆಗೆ ಶೋಧಿಸಿದರು.

* ಭಾರ್ಥಲೋಮಿಯೋ ಡಯಾಸ್ ಎಂಬ ನಾಯಕನು ಆಫ್ರಿಕಾದ ದಕ್ಷಿಣ ಭಾಗವನ್ನು ತಲುಪಿ ಅದನ್ನು ಗುಡ್ ಹೋಪ್ ಭೂಶಿರ ಎಂದು ಕರೆದನು.

* ಸಾಮಾನ್ಯ ಶಕ 1498 ರಲ್ಲಿ ವಾಸ್ಕೋಡಿಗಾಮ ಆಫ್ರಿಕಾದ ಗೋಪುರವನ್ನು ಸುತ್ತಾ ಹಾಕಿ ಹಿಂದೂ ಮಹಾಸಾಗರವನ್ನು ದಾಟಿ ಭಾರತದ ಕಲ್ಲಿಕೋಟೆಯ ಸಮೀಪದ ಕಾಪ್ಪಾಡ್ ಪ್ರದೇಶವನ್ನು ತಲುಪಿದನು.

ಪ್ರಮುಖ ಅನ್ವೇಷಣೆ ಕಾರರು.

* ಹೆನ್ರಿ ದಿ ನ್ಯಾವಿಗೇಟರ್, ಕ್ರಿಸ್ಟೊಫರ್ ಕೊಲಂಬಸ್, ಅಮೇರಿಗೊ ವೆಸಪುಸಿ .

  ಫರ್ಡಿನೆಂಡ್ ಮೆಗಲನ.

* ವಿಶ್ವವನ್ನು ಮೊಟ್ಟ ಮೊದಲು ಪ್ರದಕ್ಷಣೆ ಹಾಕಿದ ಕೀರ್ತಿ ಇವನಿಗೆ ಸಲ್ಲುತ್ತದೆ.

* ವಿಕ್ಟೋರಿಯಾ ಹಡಗು – ವಿಶ್ವವನ್ನು ಪ್ರದರ್ಶಿಸಿದ ಮೊದಲಾದ ಹಡಗು ವಿಕ್ಟೋರಿಯಾ.

ಭೌಗೋಳಿಕ ಸಂಶೋಧನೆಗಳ ಪರಿಣಾಮಗಳು.

* ಯುರೋಪಿಯನ್ನರು ಅಮೆರಿಕ ಆಫ್ರಿಕಾ ಮತ್ತು ಏಷ್ಯಾದೊಂದಿಗೆ ನೇರ ಸಂಪರ್ಕ ಸಾಧಿಸಿ ಅಪಾರ ಸಂಪತ್ತು ಗಳಿಸಿ ಜ್ಞಾನವನ್ನು ಸಂಪಾದಿಸಿದರು.

* ಯುರೋಪಿನ ಆರ್ಥಿಕ ವ್ಯವಸ್ಥೆಯ ಚಹರೆ ಬದಲಾಗಿ ಇಟಲಿ ಮತ್ತು ಜರ್ಮನಿ ಶ್ರೀಮಂತಿಕೆ ಕುಸಿದು ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಪ್ರಬಲ ಸಾಮ್ರಾಜ್ಯಗಳನ್ನು ಕಟ್ಟಿಕೊಂಡವು.

* ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಅಮೆರಿಕ ಮತ್ತು ಭಾರತದಲ್ಲಿ ಮಾರುಕಟ್ಟೆಗಳನ್ನು ವಿಸ್ತರಿಸುವ ಮೂಲಕ ವಸಾಹತುಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಅಪಾರ ಲಾಭಗಳಿಸಿದರು.

* ಹೊಸ ಭೂಪ್ರದೇಶಗಳಿಗೆ ತೆರಳಿದ ಕ್ರೈಸ್ತ ಧರ್ಮ ಪ್ರಚಾರಕರು ತಮ್ಮ ಧರ್ಮವನ್ನು ಇತರೆ ದೇಶಗಳಿಗೆ ಪರಿಚಯಿಸಿದರು.

* ಈ ಅನ್ವೇಷಣೆಗಳಿಂದ ಪೂರ್ವ ಮತ್ತು ಪಶ್ಚಿಮ ದೇಶಗಳ ನಡುವೆ ಸಂಸ್ಕೃತಿಯ ವಿನಿಮಯವಾಗಿ ಹೊಸ ಜ್ಞಾನವನ್ನು ಪಡೆದರು.

* ಮೆಗಲ್ಲನ್ ಯಾನದಿಂದ ಭೂಮಿಯು ಚಪ್ಪಟೆಯಾಗಿಲ್ಲ ದುಂಡಾಗಿದೆ ಎಂದು ಪ್ರಾಯೋಗಿಕವಾಗಿ ಸಾಬೀತಾಯಿತು.

   -: ಮತ ಸುಧಾರಣೆ:-

*  ಯುರೋಪಿನಲ್ಲಿ ಆಧುನಿಕ ಯುಗ ಗೋಚರಿಸುತ್ತಿದ್ದಂತೆ ಕ್ಯಾಥೋಲಿಕ್ ಚರ್ಚಿನ ಮತ್ತು ಪೋಪನ ಅಧಿಕಾರವನ್ನು ಪ್ರಶ್ನಿಸಿ ನಡೆಸಿದ ಧಾರ್ಮಿಕ ಚಳುವಳಿಯನ್ನು ಮತ ಸುಧಾರಣೆ ಎನ್ನುವರು.

-: ಮಾರ್ಟಿನ್ ಲೂಥರ್(1483-1546).:-

* ಇವನನ್ನು ಮತ ಸುಧಾರಣೆಯ ಪಿತಾಮಹ ಎಂದು ಕರೆಯಲಾಗುತ್ತದೆ.

* ಇವನು ಪ್ರೊಟೆಸ್ಟೆಂಟ್ ಮತ ಸ್ಥಾಪಕ.

* ಕ್ಯಾಥೋಲಿಕ್ ಬೋಧನೆಗಳು ತಿರಸ್ಕರಿಸಿದನು.

* 1517 ರಲ್ಲಿ ಅವನು ಪಾಪ ಕ್ಷಮೆಯ ಪತ್ರಗಳನ್ನು ಮಾಡುವುದರ ವಿರುದ್ಧ ಚರ್ಚನೊಂದಿಗೆ ವಿರೋಧವನ್ನು ಪ್ರಕಟಿಸಿದರು.

* ಮಾರ್ಟಿನ್ ಲೂಥರ್ ಅನುಯಾಯಿಗಳನ್ನು ಪ್ರೊಟೆಸ್ಟೆಂಟ್ ಎಂದು ಕರೆಯುವರು.

ಮತ ಸುಧಾರಣೆಯ ಪರಿಣಾಮಗಳು.

* ಮತ ಸುಧಾರಣೆಯ ಪರಿಣಾಮವಾಗಿ ಕ್ರೈಸ್ತ ಮತದ ಅಖಂಡತೆಗೆ ಪೆಟ್ಟು ಬಿದ್ದಿತ್ತು. ಕ್ರೈಸ್ತ ಮತವು ಮುಖ್ಯವಾಗಿ ಮೂರು ಶಾಖೆಗಳಾಗಿ ಹೊಡೆಯಿತು ಕ್ಯಾಥೋಲಿಕ್ ಚರ್ಚ್, ಆರ್ಥೋಡಾಕ್ಸ್ ಚರ್ಚ್, ಮತ್ತು ಪ್ರಾಟೆಸ್ಟೆಂಟ್ ಚರ್ಚ್.

* ಯುರೋಪಿನ ಅನೇಕ ದೇಶಗಳ ರಾಜರುಗಳು ಪೋಪನ ಹಿಡಿತದಿಂದ ಸ್ವತಂತ್ರರಾದರೂ.

* ಮತ ಸುಧಾರಣೆಯು ರಾಷ್ಟ್ರೀಯ ಪ್ರಭುತ್ವಗಳ ಉದಯಕ್ಕೆ ಕಾರಣವಾಯಿತು.

* ಮುಟ್ಟುಗೋಲು ಹಾಕಿಕೊಂಡ ಚರ್ಚಿನ ಸಂಪತ್ತನ್ನು ಆರ್ಥಿಕ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ.

* ರಾಷ್ಟ್ರೀಯ ಭಾವನೆಗಳು ಇನ್ನಷ್ಟು ಬಲವಾದವು ಹಾಗೂ ಯುರೋಪಿನ ರಾಜರುಗಳು ಧಾರ್ಮಿಕ ಸಹಿಷ್ಣುತೆಯನ್ನು ಅಳವಡಿಸಿಕೊಂಡರು.

* ಈ ಚಳುವಳಿಯಿಂದಾಗಿ ಸಾಹಿತ್ಯ ಕ್ಷೇತ್ರ ಬೆಳೆಯಿತು. ಪ್ರಾದೇಶಿಕ ಭಾಷೆಗಳು ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿದವು.

ಪ್ರತಿ ಸುಧಾರಣಾ ಚಳುವಳಿ.

* ಪ್ರೊಟೆಸ್ಟೆಂಟ್ ಪಂಥವು ಹೊಸ ಧಾರ್ಮಿಕ ಪ್ರಭಾವ ಚಳುವಳಿಗಾಗಿ ಹರಡಲಾರಂಭಿಸಿತು ಇದರಿಂದ ಯಥೇಚ್ಛ ಕ್ಯಾಥೋಲಿಕರು ತಮ್ಮ ಪಾರಮ್ಯವನ್ನು ಕಾಪಾಡಿಕೊಳ್ಳಲು ಸುಧಾರಣೆಯ ಅಗತ್ಯವನ್ನು ತಮ್ಮಲ್ಲಿ ಕಂಡುಕೊಂಡರು ಇದನ್ನು ಪ್ರತಿ ಸುಧಾರಣೆ ಎಂದು ಕರೆಯುತ್ತಾರೆ.

* ಪ್ರತಿ ಸುಧಾರಣೆಯ ನಾಯಕ ” ಇಗ್ನೇಷಿಯಸ್ ಲಯೋಲ”

* ಸಾಮಾನ್ಯ ಶಕ ಪೂರ್ವ 1540 ರಲ್ಲಿ ಜೀಸಸ್ ಸೊಸೈಟಿಯನ್ನು ಹುಟ್ಟು ಹಾಕಿದನು.

* ಚರ್ಚಿನ ನಿಯಮ ಉಲ್ಲಂಘಿಸುವವರನ್ನು ವಿಚಾರಣೆ ನಡೆಸುವ ಹಾಗೂ ಶಿಕ್ಷಿಸುವ ಉದ್ದೇಶದ ಇಂಕ್ವಿಜಿಶನ್ ಎಂಬ ಧಾರ್ಮಿಕ ವಿಚಾರಣಾ ಪದ್ಧತಿ 1542 ರಿಂದ ಜಾರಿಗೆ ಬಂದಿತು. ಅಲ್ಲದೆ ಇದು ಕ್ಯಾಥೋಲಿಕರು ಪ್ರೊಟೆಸ್ಟೆಂಟ್ ಮತ ಸ್ವೀಕರಿಸುವುದನ್ನು ತಪ್ಪಿಸಿತು.

   -: ಕೈಗಾರಿಕಾ ಕ್ರಾಂತಿ :-

* 18ನೇ ಶತಮಾನದಲ್ಲಿ ವಸ್ತುಗಳನ್ನು ಉತ್ಪಾದಿಸುವ ಪ್ರಕ್ರಿಯೆಯಲ್ಲಿ ಮಾನವ ಶಕ್ತಿಯ ಬದಲು ಯಂತ್ರಗಳ ಶಕ್ತಿಯನ್ನು ಬಳಸಿದ ಪ್ರಕ್ರಿಯೆಗೆ ಕೈಗಾರಿಕಾ ಕ್ರಾಂತಿ ಎನ್ನುವರು.

     ಕಾರಣಗಳು.

* ವೈಜ್ಞಾನಿಕ ಆವಿಷ್ಕಾರಗಳು ಕೈಗಾರಿಕಾ ಕ್ರಾಂತಿಗೆ ಕಾರಣವಾಯಿತು.

* ಭೌಗೋಳಿಕ ಅನ್ವೇಷಣೆಗಳಿಂದ ಯುರೋಪಿನ ಪ್ರಬಲ ರಾಷ್ಟ್ರಗಳು ತಮ್ಮ ವಸಾಹಾತುಗಳಿಗೆ ಪಡೆದ ಲಾಭವನ್ನು ಕೈಗಾರಿಕೆಗಳಲ್ಲಿ ಹೂಡಿ ಕ್ರಾಂತಿಗೆ ಕಾರಣವಾದರು.

* ಯುರೋಪಿನಲ್ಲಿ ಜನಸಂಖ್ಯೆ ಮತ್ತು ಗ್ರಾಹಕರ ಅಭಿರುಚಿಗಳು ಹೆಚ್ಚಾದಂತೆ ಅವಶ್ಯಕ ವಸ್ತುಗಳು.

* ಯುರೋಪಿನಲ್ಲಿ ಧರ್ಮ ಯುದ್ದಗಳಿಂದ ಬೇಸತ್ತಿದ್ದ ವಿಜ್ಞಾನಿಗಳು ತಂತ್ರಜ್ಞರು ಮತ್ತು ಕುಶಲಕರ್ಮಿಗಳು ಇಂಗ್ಲೆಂಡಿನಲ್ಲಿ ನೆಲೆಸಿ ಕೈಗಾರಿಕಾ ಕ್ರಾಂತಿಯಲ್ಲಿ ಭಾಗಿಯಾದರು.

* ಸಾಮಾನ್ಯ ಶಕ 1764 ಜೇಮ್ಸ್ ಹಾರ್ ಗ್ರೀವ್ಸ್ ಎಂಬುವರು ಸ್ಪಿನ್ನಿಂಗ್ ಜೆನ್ನಿ ಎಂಬ ನೂಲುವ ಯಂತ್ರವನ್ನು ಕಂಡುಹಿಡಿದನು.

* ಇದನ್ನು ಉತ್ತಮ ಪಡಿಸಿದವರು ರಿಚಾರ್ಡ್ ಆರ್ಕ್ ರೈಟ್ ಜೊತೆಗೆ ಇವನು 1769ರಲ್ಲಿ ನೀರಿನ ಚೌಕಟ್ಟನ್ನು ಕಂಡುಹಿಡಿದನು.

* 1785 ರಲ್ಲಿ ಎಡ್ಮಂಡ್ ಕಾರ್ಟ ರೈಟ್ ಎಂಬುವವನು ಪವರ್ ನೇಯ್ಗೆ ಯಂತ್ರವನ್ನು ಕಂಡುಹಿಡಿದನು.

* 1793ರಲ್ಲಿ  ಎಲಿ ವಿಟ್ನಿ ಎಂಬುವನು ಕಾಟನ್ ಜಿನ್ ಯಂತ್ರವನ್ನು ಕಂಡುಹಿಡಿದ.

-: ಪರಿಣಾಮಗಳು :-

* ಕೈಗಾರಿಕಾ ಕ್ರಾಂತಿಯಿಂದ ಇಂಗ್ಲೆಂಡಿನ ಆರ್ಥಿಕತೆ ಸದೃಢವಾಗಿ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿತು.

* ಬೃಹತ್ ಕೈಗಾರಿಕೆಗಳು ಹೆಚ್ಚಾದಂತೆ ಕಾರ್ಮಿಕರ ಶೋಷಣೆಗಳು ಹೆಚ್ಚಾಗಿ ಸಮಾಜವಾದ ಉದಯಿಸಿತು.

* ಆಧುನಿಕತೆಯು ವೇಗವಾಗಿ ವಿಸ್ತರಿಸಿ ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನ ಮಟ್ಟವು ಅಭಿವೃದ್ಧಿಯಾಯಿತು.

* ಕೈಗಾರಿಕಾ ಕ್ರಾಂತಿಯಿಂದ ಹೆಚ್ಚಿನ ಅಭಿವೃದ್ಧಿ ಆದರೂ ಜನಸಂಖ್ಯೆ ಹೆಚ್ಚಳದಿಂದ ಬಡತನ ನಿರುದ್ಯೋಗ ಹಾಗೂ ಆಹಾರ ಸಮಸ್ಯೆಗಳು ಗೋಚರಿಸಿದವು.

* ಕೈಗಾರಿಕಾ ಕ್ರಾಂತಿಯಿಂದ ಶ್ರೀಮಂತ ಮತ್ತು ಬಡವರ ನಡುವೆ ಅಂತರ ಹೆಚ್ಚಾಗಿ ವರ್ಗ ಸಂಘರ್ಷ ಉದಯಿಸಿತು.

 

WhatsApp Group Join Now
Telegram Group Join Now