7th Pay Commission: ಸರ್ಕಾರಿ ನೌಕರರ ವಿಶೇಷ ಭತ್ಯೆ ಕುರಿತು ಆಯೋಗ ಹೇಳಿದ್ದೇನು?-2024.

7th Pay Commission: ಸರ್ಕಾರಿ ನೌಕರರ ವಿಶೇಷ ಭತ್ಯೆ ಕುರಿತು ಆಯೋಗ ಹೇಳಿದ್ದೇನು?-2024.

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ  ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.

7th Pay Commission:ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕರ್ನಾಟಕ ಸರ್ಕಾರಕ್ಕೆ ನೀಡಿರುವ 558 ಪುಟಗಳ ಸಂಪುಟ-1ರ ವರದಿಯ ಕೆಲವು ಶಿಫಾರಸು ಜಾರಿಗೊಳಿಸಲು ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಆಯೋಗದ ಕೆಲ ಶಿಫಾರಸುಗಳು ಆಗಸ್ಟ್ ತಿಂಗಳಿನಿಂದ ಜಾರಿಗೆ ಬಂದಿವೆ. ಸರ್ಕಾರಿ ನೌಕರರ ವೇತನ, ಪಿಂಚಣಿಯಲ್ಲಿ ಏರಿಕೆಯಾಗಿದೆ. ನೌಕರರ ಕೆಲವು ಭತ್ಯೆಗಳ ಕುರಿತು ಆಯೋಗ ವರದಿಯಲ್ಲಿ ಉಲ್ಲೇಖಿಸಿದೆ. ಕೆಲವು ಭತ್ಯೆ ಕಡಿತಗೊಳಿಸಬಹುದು ಎಂದು ಬಂದಿರುವ ಬೇಡಿಕೆಯನ್ನು ವರದಿಯಲ್ಲಿ ತಿಳಿಸಿದೆ.

  ಸರ್ಕಾರಿ ನೌಕರರ ವಿಶೇಷ ಭತ್ಯೆ. ನೌಕರರ ಕರ್ತವ್ಯ ಸ್ವರೂಪವು ಕಠಿಣವೆಂದು ಪರಿಗಣಿಸಲಾಗುವ ಮತ್ತು ನಿಗದಿತ ಅವಧಿಗಿಂತ ದೀರ್ಘ ಸಮಯ ಕಾರ್ಯ ನಿರ್ವಹಣೆಯ ಅವಶ್ಯಕತೆ ಇರುವ ನೌಕರರಿಗೆ ಸಾಮಾನ್ಯವಾಗಿ ವಿಶೇಷ ಭತ್ಯೆಯನ್ನು ಮಂಜೂರು ಮಾಡಲಾಗುತ್ತದೆ. ಅಲ್ಲದೇ, ಅತ್ಯಂತ ಹೆಚ್ಚಿನ ಜಾಗರೂಕತೆ ಮತ್ತು ಕಾರ್ಯ ಶ್ರದ್ಧೆಯ ಅಗತ್ಯವಿರುವ ಮತ್ತು ವಿಶೇಷವಾಗಿ ಸೂಕ್ಷ್ಮ ಸ್ವರೂಪದ ಕರ್ತವ್ಯಗಳನ್ನು ಹೊಂದಿರುವ ನೌಕರರಿಗೆ ಇದನ್ನು ನೀಡಲಾಗುತ್ತದೆ. ಈಗಾಗಲೇ ಜಾರಿಯಲ್ಲಿರುವ ವಿವಿಧ ವಿಶೇಷ ಭತ್ಯೆ ದರಗಳನ್ನು ಪರಿಷ್ಕರಿಸುವುದಕ್ಕಾಗಿ ನೌಕರರು, ನೌಕರರ ಸಂಘಗಳು ಮತ್ತು ಇಲಾಖಾ ಮುಖ್ಯಸ್ಥರು ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.

   ಕರ್ನಾಟಕ ಸರ್ಕಾರದ ಪೊಲೀಸ್‌ ಮಹಾ ನಿರ್ದೇಶಕರು ಮತ್ತು ಅರಕ್ಷಕ ಮಹಾ ನಿರೀಕ್ಷಕರು ಆಯೋಗದ ಮುಂದೆ ನೀಡಿದ ಪ್ರಾತ್ಯಕ್ಷಿಕೆಯಲ್ಲಿ, ಇತರ ವಿಷಯಗಳೊಂದಿಗೆ, ಕೆಲವು ನಿರ್ದಿಷ್ಟ ವಿಶೇಷ ಭತ್ಯೆಗಳನ್ನು ಹಚ್ಚಿಸಲು ಮತ್ತು ತರ್ಕಬದ್ಧಗೊಳಿಸಲು ಹಾಗೂ ಇಲ್ಲಿಯವರೆಗೆ ಮಂಜೂರು ಮಾಡಲಾಗಿದ್ದ ಕೆಲವು ವಿಶೇಷ ಭತ್ಯೆಗಳನ್ನು ರದ್ದುಗೊಳಿಸುವುದಕ್ಕೂ ಸಹ ಸಲಹೆಯನ್ನು ನೀಡಿರುತ್ತಾರೆ.

    2016ರಲ್ಲಿ ಕಷ್ಟ ಪರಿಹಾರ ಭತ್ಯೆಯನ್ನು ಕೆಲವು ನಿರ್ದಿಷ್ಟ ಪೊಲೀಸ್‌ ಸಿಬ್ಬಂದಿ ವರ್ಗಕ್ಕೆ ಮಂಜೂರು ಮಾಡಿದ ಸಂದರ್ಭದಲ್ಲಿ, ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಆ ಹುದ್ದೆಗೆ ಅನ್ವಯವಾಗುವ ನಿಯೋಜನೆ ಭತ್ಯೆ ಅಥವಾ ವಿಶೇಷ ಭತ್ಯೆಗೆ ಅರ್ಹರಾಗುವುದರಿಂದ ಅಂತಹ ಸಿಬ್ಬಂದಿಗಳಿಗೆ ಈ ಭತ್ಯೆಯು ಅನ್ವಯವಾಗುವುದಿಲ್ಲ ಎಂಬ ನಿರ್ದಿಷ್ಟ ಷರತ್ತನ್ನು ವಿಧಿಸಲಾಗಿರುವ ಅಂಶವನ್ನು ಇಲಾಖೆಯು ಆಯೋಗದ ಗಮನಕ್ಕೆ ತಂದಿದ್ದರು.

   ವಿಶೇಷ ಭತ್ಯೆಗಳ ಮಂಜೂರಾತಿಗೆ ಸಂಬಂಧಿಸಿದಂತೆ, ಒಂದಕ್ಕಿಂತ ಹೆಚ್ಚು ವಿಶೇಷ ಭತ್ಯೆಯನ್ನು ಪಡೆಯಲು ಅವಕಾಶವಿಲ್ಲದಿರುವ ಸಾಮಾನ್ಯ ಪರತ್ತಿಗೆ ಅನುಗುಣವಾಗಿ ಈ ಷರತ್ತು ವಿಧಿಸಲಾಗಿದೆ. 2016ರಲ್ಲಿ ಎಲ್ಲಾ ಪೊಲೀಸ್‌ ಸಿಬ್ಬಂದಿಗೆ ಕಷ್ಟ ಪರಿಹಾರ ಭತ್ಯೆಯನ್ನು ಜಾರಿ ಮಾಡುವ ಪೂರ್ವದಲ್ಲಿಯೇ ಪೊಲೀಸ್ ಇಲಾಖೆಯ ಕೆಲವು ನಿರ್ದಿಷ್ಟ ಘಟಕಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ವಿಭಿನ್ನ ದರಗಳಲ್ಲಿಯಾದರೂ ವಿಶೇಷ ಭತ್ಯೆಯನ್ನು ಪಡೆಯಲು ಅರ್ಹತೆ ಇತ್ತು. ಈ ವಿಶೇಷ ಭತ್ಯೆಯ ದರಗಳು ಹಲವು ಸಂದರ್ಭಗಳಲ್ಲಿ, ಎಲ್ಲಾ ಪೊಲೀಸ್ ವೃಂದಗಳಿಗೆ 2016ರಲ್ಲಿ ಮಂಜೂರಾದ ಕಷ್ಟ ಪರಿಹಾರ ಭತ್ಯೆಗಿ೦ತಲೂ ಕಡಿಮೆಯಾಗಿದೆ.

   ಒಂದು ಹುದ್ದೆಗ ಒಂದು ವಿಶೇಷ ಭತ್ಯೆಯನ್ನು ಮಾತ್ರ ಅನುಮತಿಸುವ ಷರತ್ತು ಅಸಮಂಜಸತೆಗೆ ಕಾರಣವಾಗಿದ್ದು, ಕೆಲವು ನೌಕರರು ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಪರಿಣಾಮವಾಗಿ ಹೆಚ್ಚಿನ ದರದ ಭತ್ಯೆಯನ್ನು ಆಯ್ಕೆ ಮಾಡುವ ಅವಕಾಶವಿಲ್ಲದ ಮಾತೃ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾನ ವೃಂದದ ಸಹೋದ್ಯೋಗಿಗಳಿಗೆ ಹೋಲಿಸಿದಾಗ ಕಡಿಮೆ ದರದಲ್ಲಿ, ವಿಶೇಷ ಭತ್ಯೆಗಳನ್ನು ಪಡೆಯುತ್ತಿದ್ದಾರೆ.

   ಈ ಹುದ್ದೆಗಳಿಗೆ ಅನ್ವಯಿಸುವ ಭತ್ಯೆಗಳ ದರ ಕಡಿಮೆಯಿರುವ ಕಾರಣ ಕೆಲವು ಸಂದರ್ಭಗಳಲ್ಲಿ, ವಿಶೇಷ ಘಟಕಗಳಲ್ಲಿ ಕಾರ್ಯನಿರ್ವಹಿಸಿ ವಿಶೇಷ ಕೌಶಲ್ಯಗಳನ್ನು ಮತ್ತು ತಂತ್ರಗಾರಿಕೆಗಳನ್ನು ಪಡೆದುಕೊಳ್ಳಲು ಆಸಕ್ತಿ ಹೊಂದಿರುವ ಅಧಿಕಾರಿಗಳಿಗೆ ನಿರುತ್ತೇಜಕ ಅಂಶವಾಗುತ್ತದೆ. ಆದ್ದರಿಂದ, ಪೊಲೀಸ್ ಸಿಬ್ಬಂದಿಗೆ ಮಂಜೂರು ಮಾಡುವ ವಿವಿಧ ವಿಶೇಷ ಭತ್ಯೆಗಳನ್ನು ತರ್ಕಬದ್ಧಗೊಳಿಸುವ ಮೂಲಕ ಈ ಅಸಮಂಜಸತೆಯನ್ನು ಹೋಗಲಾಡಿಸಲು ಪೊಲೀಸ್‌ ಮಹಾ ನಿರ್ದೇಶಕರು ಮತ್ತು ಅರಕ್ಷಕ ಮಹಾ ನಿರೀಕ್ಷಕರು ಕೋರಿರುತ್ತಾರೆ.

   ಈ ಬೇಡಿಕೆಯು ತರ್ಕಬದ್ಧವಾಗಿದೆ. ಪೊಲೀಸ್ ಇಲಾಖೆಯು ಮಂಡಿಸಿರುವ ಅಂಶಗಳ ಆಧಾರದ ಮೇಲೆ ವಿಶೇಷ ಘಟಕಗಳಿಗೆ ಅಥವಾ ಸಂಸ್ಥೆಗಳಿಗೆ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿದ ಸಂದರ್ಭದಲ್ಲಿ ಆಯಾ ಹುದ್ದೆಗಳಿಗೆ ಮಂಜೂರಾದ ಭತ್ಯೆ ಅಥವಾ ಅವರ ಮೂಲ ವೃಂದಕ್ಕೆ ಮಂಜೂರಾದ ಕಷ್ಟ ಪರಿಹಾರ ಭತ್ಯೆ, ಇವೆರಡರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿಯೋ ಅದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಿಬ್ಬಂದಿಗೆ ನೀಡಬೇಕೆಂದು ಆಯೋಗವು ಶಿಫಾರಸ್ಸು ಮಾಡುತ್ತದೆ.

ಕೆಲವು ವಿಶೇಷ ಭತ್ಯೆಗಳ ದರಗಳನ್ನು ಹಚ್ಚಿಸುವಂತೆ ಇಲಾಖೆಯು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ, ಆಯೋಗವು ಎಲ್ಲಾ ಇಲಾಖೆಗಳ ವಿಶೇಷ ಭತ್ಯೆಗಳ ಸಂಯುಕ್ತ ಪರಿಷ್ಕರಣೆಗಳನ್ನು ಶಿಫಾರಸು ಮಾಡಿದ್ದು, ಕೆಲವು ಪ್ರಸ್ತುತವಲ್ಲದ ಅಥವಾ ಅಗತ್ಯವಿಲ್ಲದ ಹುದ್ದೆಗಳಿಗೆ ವಿಶೇಷ ಭತ್ಯೆಗಳನ್ನು ರದ್ದುಗೊಳಿಸಲು ಪೊಲೀಸ್ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯನ್ನು ಸಹ ಆಯೋಗವು ಸಹಮತಿಸುತ್ತದೆ, ಆದಾಗ್ಯು ಈ ರೀತಿ ವಿಶೇಷ ಭತ್ಯೆ ಯನ್ನು ಸ್ಥಗಿತಗೊಳಿಸಿರುವ ಕೆಲವು ಪೊಲೀಸ್‌ ಸಿಬ್ಬಂದಿಗಳು ಕಷ್ಟ ಪರಿಹಾರ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಆಯೋಗ ಹೇಳಿದೆ.

   ಧನ್ಯವಾದಗಳು . . . . . .

WhatsApp Group Join Now
Telegram Group Join Now

Leave a Comment