UPSC Recruitment: ಯುಪಿಎಸ್‌ಸಿಯಿಂದ ವಿವಿಧ ಉದ್ಯೋಗಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟ-2024.
UPSC Recruitment: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಕಂಬೈನ್ಡ್ ಜಿಯೋ ಸೈಂಟಿಸ್ಟ್ ಹುದ್ದೆಗಳ ನೇಮಕಾತಿಗೆ ಸಂಬಂಧ 2025 ನೇ ಸಾಲಿನ ಪರೀಕ್ಷಾ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಹತೆ ಇರುವವರು ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕಂಬೈನ್ಡ್ ಜಿಯೋ ಸೈಂಟಿಸ್ಟ್ ಹುದ್ದೆಗಳ ಭರ್ತಿಗೆ ಸಂಬಂಧ, 2024ನೇ ಸಾಲಿನ ಪರೀಕ್ಷಾ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 85 ಹುದ್ದೆಗಳ ಭರ್ತಿಗಾಗಿ ಈ ಸಾಲಿನ ಪರೀಕ್ಷೆ ನಡೆಸಲಾಗುತ್ತಿರುವುದಾಗಿ ಆಯೋಗ ತಿಳಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.
ಕಂಬೈನ್ಡ್ ಜಿಯೋ ಸೈಂಟಿಸ್ಟ್ ಪರೀಕ್ಷೆ ಮೂಲಕ ಯಾವ್ಯಾವ ಹುದ್ದೆಗಳನ್ನು ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಕೆಳಗಿನಂತೆ ತಿಳಿಸಲಾಗಿದೆ.
ಹುದ್ದೆಗಳ ವಿವರ:
ಮೇಲಿನ ಹುದ್ದೆಗಳಿಗೆ ಕಂಬೈನ್ಡ್ ಜಿಯೋ ಸೈಂಟಿಸ್ಟ್ ಪರೀಕ್ಷೆ ತೆಗೆದುಕೊಳ್ಳಲು ಶೈಕ್ಷಣಿಕ ಅರ್ಹತೆಗಳು:
ಹುದ್ದೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ (ಎಂಎಸ್ಸಿ, ಎಂ.ಟೆಕ್ ಅನ್ನು ಭೂಗೋಳ, ಭೌತಶಾಸ್ತ್ರ, ರಸಾಯನಶಾಸ್ತ್ರ, ಇತರೆ) ಪಾಸ್ ಮಾಡಿರಬೇಕು. ಶೈಕ್ಷಣಿಕ ಅರ್ಹತೆ ಕುರಿತ ಸವಿವರಗಳಿಗಾಗಿ ಅಧಿಸೂಚನೆ ಓದಿರಿ.
ಕಂಬೈನ್ಡ್ ಜಿಯೋ ಸೈಂಟಿಸ್ಟ್ ಪರೀಕ್ಷೆ ತೆಗೆದುಕೊಳ್ಳಲು ವಯಸ್ಸಿನ ಅರ್ಹತೆ:
ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 21 ವರ್ಷ ಆಗಿರಬೇಕು.
ಗರಿಷ್ಠ 32 ವರ್ಷ ವಯಸ್ಸು ಮೀರಿರಬಾರದು.
ವಯೋಮಿತಿ ಅರ್ಹತೆಯ ಪ್ರಕಾರ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 35 ವರ್ಷದವರೆಗೆ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು 37 ವರ್ಷದವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಪ್ರಮುಖ ದಿನಾಂಕಗಳು:
• ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ:04-09-2024
•ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 24-10-2024 ರ ಸಂಜೆ 06 ಗಂಟೆವರೆಗೆ.
•ಅಪ್ಲಿಕೇಶನ್ ಕರೆಕ್ಷನ್‌ಗೆ ವಿಂಡೋ ಓಪನ್ ಆಗುವ ದಿನಾಂಕ: 25-09-2024 To 01-10-2024
•ಪೂರ್ವಭಾವಿ ಪರೀಕ್ಷೆ ದಿನಾಂಕ : 09-02-2025
•ಮುಖ್ಯ ಪರೀಕ್ಷೆ ದಿನಾಂಕ : 21-06-2025, 22-06-2025
•ಅಪ್ಲಿಕೇಶನ್ ಶುಲ್ಕ ರೂ.200.
•ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬಹುದು.
ಹುದ್ದೆಗಳ ಕುರಿತ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಅಧಿಸೂಚನೆ ಓದಲು ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ ವಿಳಾಸ https://upsc.gov.in/ ಕ್ಕೆ ಭೇಟಿ ನೀಡಿರಿ.
ಅರ್ಜಿ ಸಲ್ಲಿಕೆ ಹೇಗೆ?:
• ಯುಪಿಎಸ್‌ಸಿ ಅಫೀಶಿಯಲ್ ವೆಬ್‌ಸೈಟ್ upsconline.nic.in ಗೆ ಭೇಟಿ ನೀಡಿ.
• ‘Online application form for various examination’ ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಹೊಸ ಪೇಜ್ ತೆರೆದುಕೊಳ್ಳುತ್ತದೆ. ‘COMBINED GEO-SCIENTIST (Preliminary) EXAMINATION 2025’ ಎಂದಿರುವುದರ ಮುಂದೆ ‘Click here for Part I’ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಓಪನ್ ಆದ ಹೊಸ ಪೇಜ್ ನಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
• ಕೇಳಲಾದ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್‌ಲೋಡ್ ಮಾಡಿ.
• ಅರ್ಜಿ ಶುಲ್ಕ ಪಾವತಿಸಿ.
• ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಪೂರ್ಣಗೊಳಿಸಬಹುದು.
ಕಂಬೈನ್ಡ್ ಜಿಯೋ ಸೈಂಟಿಸ್ಟ್ ಪರೀಕ್ಷಾ ವಿಧಾನ:
ಜಿಯೋ ಸೈಂಟಿಸ್ಟ್ ಹುದ್ದೆಗಳಿಗೆ 3 ಹಂತಗಳಲ್ಲಿ ಪರೀಕ್ಷೆ ನಡೆಸುತ್ತದೆ. ಅವುಗಳೆಂದರೆ..
ಹಂತ-1: ಪೂರ್ವಭಾವಿ ಪರೀಕ್ಷೆ(400 ಅಂಕಗಳು)
ಹಂತ-2 : ಮುಖ್ಯ ಪರೀಕ್ಷೆ (600) ಅಂಕಗಳು)
ಹಂತ-3: ವ್ಯಕ್ತಿತ್ವ ಪರೀಕ್ಷೆ (200 ಅಂಕಗಳು) ಇರುತ್ತದೆ.
ಪೂರ್ವ ಪರೀಕ್ಷೆಯಲ್ಲಿ ಎಲ್ಲಾ ವಿಭಾಗದ ಹುದ್ದೆಗಳಿಗೂ ಅಭ್ಯರ್ಥಿಗಳು 100 ಅಂಕಗಳ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗೆ ಉತ್ತರಿಸಬೇಕಾಗಿರುತ್ತದೆ.
ಪೇಪರ್ 2 ರಲ್ಲಿ ಹುದ್ದೆಗೆ ಸಂಬಂಧಿಸಿದ 300 ಅಂಕಗಳ ಪ್ರಶ್ನೆ ಪತ್ರಿಕೆಗೆ ಪರೀಕ್ಷೆ ಬರೆಯಬೇಕಿರುತ್ತದೆ.
ಎರಡನೇ ಹಂತದಲ್ಲಿ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಎದುರಿಸಲಿದ್ದು 600 ಅಂಕಗಳಿಗೆ ವಿವರಣಾತ್ಮಕ ಪರೀಕ್ಷೆ ಬರೆಯಬೇಕಿರುತ್ತದೆ.
ಮೂರನೇ ಹಂತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ (200 ಅಂಕಗಳಿಗೆ) ಹಾಜರಾಗಬೇಕಿರುತ್ತದೆ.
ಪರೀಕ್ಷಾ ಕೇಂದ್ರಗಳು:
ಪೂರ್ವಭಾವಿ ಪರೀಕ್ಷೆ ಅನ್ನು ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ.ದೇಶದಾದ್ಯಂತ ಚಂಡೀಗಢ, ಚೆನ್ನೈ, ಕಟಕ್, ದೆಹಲಿ, ಅಹ್ಮದಾಬಾದ್, ಭೂಪಾಲ್, ಪ್ರಯಾಗ್‌ರಾಜ್, ದಿಸ್ಪುರ, ಹೈದರಾಬಾದ್, ಜೈಪುರ, ಜಮ್ಮು, ಕೋಲ್ಕತ್ತ, ಲಖನೌ, ಮುಂಬೈ, ಪಟನಾ, ಶಿಲ್ಲಾಂಗ್, ಶಿಮ್ಲಾ ಮತ್ತು ತಿರುವನಂತಪುರ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಮೊದಲು ಅರ್ಜಿ ಸಲ್ಲಿಸಿದವರು ನೀಡಿದ ಪರೀಕ್ಷಾ ಕೇಂದ್ರ ಆದ್ಯತೆಗಳನ್ನು ಮೊದಲ ಆದ್ಯತೆ ನೀಡಿ, ಪರೀಕ್ಷೆ ಬರೆಯಲು ಅನುಕೂಲ ನೀಡಲಾಗುತ್ತದೆ.
ಉದ್ಯೋಗ ವಿವರ:
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ:
ನೇಮಕಾತಿ ಸಂಸ್ಥೆ:
ಉದ್ಯೋಗ ಸ್ಥಳ:
ಧನ್ಯವಾದಗಳು……..