ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.), ಆಡಳಿತಾಧಿಕಾರಿಗಳವರ ಕಛೇರಿ(ಪ್ರಧಾನ ಕಛೇರಿ) ಶ್ರೀ ಆದಿಚುಂಚನಗಿರಿ ಕ್ಷೇತ್ರ-571 811, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ, ಅನುಧಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.), ಆಡಳಿತಾಧಿಕಾರಿಗಳವರ ಕಛೇರಿ(ಪ್ರಧಾನ ಕಛೇರಿ) ಶ್ರೀ ಆದಿಚುಂಚನಗಿರಿ ಕ್ಷೇತ್ರ-571 811, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ,
ಅನುಧಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.),

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ ಈ ಶಿಕ್ಷಣ ಟ್ರಸ್ಟ್‌ನ ಆಶ್ರಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಗಳಲ್ಲಿ ದಿನಾಂಕ 31.12.2015ರವರೆಗೆ ವರ್ಗಾವಣೆ, ವಯೋನಿವೃತ್ತಿ ಹಾಗೂ ಮುಂಬಡ್ತಿಯಿಂದ ತೆರವಾಗಿರುವ ಕೆಳಕಂಡ ಪ್ರೌಢಶಾಲಾ ಗ್ರೇಡ್-2 ವೃಂದದ ಸಹಶಿಕ್ಷಕರ ಹುದ್ದೆಗಳು ಮತ್ತು ಗ್ರೇಡ್-1 ದೈಹಿಕ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲು ನಿರ್ದೇಶಕರು (ಪ್ರೌಢಶಿಕ್ಷಣ) ಶಾಲಾ ಶಿಕ್ಷಣ ಇಲಾಖೆ, ಆಯುಕ್ತ ಕಛೇರಿ ಬೆಂಗಳೂರು ಇವರು ಜ್ಞಾಪನದ ಸಂಖ್ಯೆ  DPI.CPIO.CB(2)FOV.4/E.1006866/…໙໖ 104/2023 ದಿನಾಂಕ 01.10.2024 ರಲ್ಲಿ ನೀಡಿದ ಅನುಮತಿ ಮೇರೆಗೆ ಮತ್ತು ಷರತ್ತಿಗೆ ಒಳಪಟ್ಟು ನೇಮಕಾತಿ ಮಾಡಿಕೊಳ್ಳಲು ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Read more…

ಪ್ರೌಢಶಾಲಾ ಗ್ರೇಡ್-2 ವೃಂದದ ಸಹಶಿಕ್ಷಕರ ಅನುದಾನಿತ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿರುವ

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.),  ಸೂಚನೆಗಳು.

1. ಸರ್ಕಾರಿ ಆದೇಶದ ಸಂಖ್ಯೆ ಇಡಿ 291 ಎಲ್.ಬಿ.ಪಿ 2015 ಬೆಂಗಳೂರು, ದಿನಾಂಕ 29.09.2016ರ ಆದೇಶದಂತೆ ವಿದ್ಯಾರ್ಹತೆ ಹೊಂದಿರಬೇಕು ಮತ್ತು ನಿಗಧಿತ ವಯೋಮಾನದಲ್ಲಿರಬೇಕು ಎಂಬ ಷರತ್ತಿಗೆ ಒಳಪಟ್ಟಿದೆ.

2. ಪತ್ರಿಕಾ ಪ್ರಕಟಣೆಗೊಂಡ 21 ದಿನದೊಳಗಾಗಿ ಅರ್ಜಿ ಸಲ್ಲಿಸತಕ್ಕದ್ದು.

3.ಬಿ.ಇಡಿ ತರಬೇತಿಯನ್ನು ಸಂಬಂಧಿಸಿದ ವಿಷಯಗಳ ಬೋಧನಾ ಕ್ರಮಗಳಿಗೆ ತಕ್ಕಂತೆ ವಿದ್ಯಾರ್ಹತೆ ಹೊಂದಿರಬೇಕು.

4 ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಪ್ರತೀ ಹುದ್ದೆಗೆ ಪ್ರತ್ಯೇಕವಾಗಿ/ ಪ್ರತ್ಯೇಕ ಡಿಡಿಯೊಂದಿಗೆ ಅರ್ಜಿ ಸಲ್ಲಿಸಬೇಕು.

5 .ಅರ್ಜಿಗಳ ಮುಖಪುಟ ಮತ್ತು ಕವರಿನ ಮೇಲ್ಬಾಗದಲ್ಲಿ ಅರ್ಜಿ ಸಲ್ಲಿಸಿದ ಹುದ್ದೆಯ ಹೆಸರು, ಮೀಸಲಾತಿ ಮತ್ತು ಸಮತಲ ಮೀಸಲಾತಿಯನ್ನು ಸ್ಪಷ್ಟವಾಗಿ, ಕಡ್ಡಾಯವಾಗಿ ಬರೆಯಬೇಕು. ಅಸ್ಪಷ್ಟ ಅರ್ಜಿಗಳನ್ನು ಯಾವುದೇ ಕಾರಣ ನೀಡದೇ ತಿರಸ್ಕರಿಸಲಾಗುವುದು.

6.ಅರ್ಜಿಯನ್ನು ಆಡಳಿತಾಧಿಕಾರಿಗಳ ಕಛೇರಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ಶ್ರೀ ಕಾಲಭೈರವೇಶ್ವರ ಸಂಸ್ಕೃತ ಮಹಾವಿದ್ಯಾಲಯದ ಕಟ್ಟಡ, ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾನಿ, ಮಂಡ್ಯ ಜಿಲ್ಲೆ-571811. ಈ ವಿಳಾಸಕ್ಕೆ ನೋಂದಣಿ ಅಂಚೆ ಮೂಲಕವೇ ಸ್ವಯಂ ದೃಢೀಕೃತ ಅಂಕಪಟ್ಟಿಯ ದಾಖಲೆಗಳೊಂದಿಗೆ ಸಲ್ಲಿಸುವುದು ನೇರವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

7. ಪರಿಶಿಷ್ಟ ಜಾತಿ (5.C) ಮತ್ತು ಪರಿಶಿಷ್ಟ ಪಂಗಡ (S.T), ಪ್ರದರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-1, ಗ್ರಾಮೀಣ ಅಭ್ಯರ್ಥಿ, ಅಂಗವಿಕಲ (ದೃಷ್ಟಿ ಮಾಂದ್ಯ) ಅಭ್ಯರ್ಥಿಗಳು ಸಂಬಂಧಿಸಿದ ತಹಶಿಲ್ದಾರ್ ರವರಿಂದ/ಪ್ರಾಧಿಕಾರದಿಂದ ನಿಗಧಿತ ನಮೂನೆಯಲ್ಲಿ ಜಾತಿ/ಪ್ರಮಾಣ ಪತ್ರವನ್ನು ಪಡೆದು ಸ್ವಯಂ ದೃಢೀಕೃತ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು,

8. ಅಪೂರ್ಣ ಮಾಹಿತಿಗಳುಳ್ಳ ಹಾಗೂ ನಿಗಧಿತ ಅವಧಿ ಮೀರಿ ಬರುವ ಅರ್ಜಿಗಳನ್ನು ಯಾವುದೇ ಹಿಂಬರಹ ನೀಡದೇ ತಿರಸ್ಕರಿಸಲಾಗುವುದು ಹಾಗೂ ಹಿಂದಿರುಗಿಸಲಾಗುವುದಿಲ್ಲ.

9. ಅರ್ಜಿ ಜೊತೆಯಲ್ಲಿ ಸ್ವ-ವಿಳಾಸ ಬರೆದ ಒಂದು ಲಕೋಟೆಯನ್ನು ಲಗತ್ತಿಸುವುದು.

10. ಅರ್ಜಿಯ ಒಂದು ಪ್ರತಿಯನ್ನು ಸಂಬಂಧಿಸಿದ ಉಪನಿರ್ದೇಶಕರು (ಆ) ತಾ.ಪಿ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯ ಇವರಿಗೆ ಮಾಹಿತಿಗಾಗಿ ಕಡ್ಡಾಯವಾಗಿ ಸಲ್ಲಿಸುವುದು.

11. ರೂ.50/-ರ ಶುಲ್ಕ ಪಾವತಿ ಮಾಡಿ ಆಡಳಿತಾಧಿಕಾರಿಗಳವರ ಕಛೇರಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾಕಿ, ಮಂಡ್ಯ ಜಿಲ್ಲೆ, ಇಲ್ಲಿ ಅರ್ಜಿಯನ್ನು ಪಡೆಯುವುದು. (ರೂ.50/-ರ ಡಿಡಿ ಮತ್ತು ಸ್ವ-ವಿಳಾಸದೊಂದಿಗೆ ಲಕೋಟೆಯನ್ನು ಅಂಚೆ ಮೂಲಕ ಕಳುಹಿಸಿ ಅರ್ಜಿಯನ್ನು ಅಂಚೆ ಮೂಲಕವೂ ಸಹ ಪಡೆಯಬಹುದಾಗಿದೆ).

12. ಅರ್ಜಿಯ ಜೊತೆಯಲ್ಲಿ ಶಿಕ್ಷಣ ಟ್ರಸ್ಟ್ನ ಆಡಳಿತಾಧಿಕಾರಿಗಳು, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ,) ಶ್ರೀ ಆದಿಚುಂಚನಗಿರಿ ಕ್ಷೇತ್ರ ನಾಗಮಂಗಲ ತಾಕಿ, ಮಂಡ್ಯ ಜಿಲ್ಲೆ, ಇವರ ಪದನಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ರೂ.500/-ರ ಮತ್ತು ಇತರೆ ಅಭ್ಯರ್ಥಿಗಳು ರೂ.1,000/-ಗಳ ಡಿ.ಡಿ ತೆಗೆದು ಲಗತ್ತಿಸಬೇಕು. (ಯಾವುದಾದರೂ ಬ್ಯಾಂಕ್ ಆಫ್ ಖಾರೋಡ ಶಾಖೆಯಲ್ಲಿ ಮಾತ್ರ ಡಿ.ಡಿ ತೆಗೆಯುವುದು)

13. ಅರ್ಜಿಯ ಜೊತೆಯಲ್ಲಿ ವಿದ್ಯಾರ್ಹತೆಯ ಬಗ್ಗೆ ಅಂದರೆ ಎಸ್.ಎಸ್.ಎಲ್.ಸಿ. ಪಿಯುಸಿ, ಪದವಿ, ಬಿ.ಇಡಿ ಅಂಕಪಟ್ಟಿಯ, ಘಟಿಕೋತ್ಸವ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಗಳನ್ನು ಸ್ವಯಂ ದೃಢೀಕರಣದೊಂದಿಗೆ ಸಲ್ಲಿಸುವುದು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.),

           ಸಹಿ/-
ಪ್ರಧಾನ ಕಾರ್ಯದರ್ಶಿಗಳು
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ.)

Click here…

WhatsApp Group Join Now
Telegram Group Join Now

3 thoughts on “ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.), ಆಡಳಿತಾಧಿಕಾರಿಗಳವರ ಕಛೇರಿ(ಪ್ರಧಾನ ಕಛೇರಿ) ಶ್ರೀ ಆದಿಚುಂಚನಗಿರಿ ಕ್ಷೇತ್ರ-571 811, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ, ಅನುಧಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.”

Leave a Comment