ESR Nodal Letter:ವಿದ್ಯುನ್ಮಾನ್ ಸೇವಾ ವಹಿಯನ್ನು (ಇ.ಎಸ್.ಆರ್) ಅನುಷ್ಠಾನಗೊಳಿಸುವ ಕುರಿತು-2024.
ESR Nodal Letter: ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಸಂಬಂಧ ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶದ ಅಂಗವಾದ ವಿದ್ಯುನ್ಮಾನ್ ಸೇವಾ ವಹಿಯನ್ನು (Electronic Service Register- ESR) ಯನ್ನು ಸಿದ್ಧಪಡಿಸಲಾಗಿದೆ. 2021-22 ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಈಗಾಗಲೇ ನೇಮಕಗೊಂಡಿರುವ ಮತ್ತು ನೇಮಕಗೊಳ್ಳುವ ಎಲ್ಲಾ ಅಧಿಕಾರಿಗಳು / ನೌಕರರುಗಳ ಸೇವಾ ವಹಿಯನ್ನು ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶದ “ವಿದ್ಯುನ್ಮಾನ ಸೇವಾವಹಿ ಯಲ್ಲಿಯೇ ನಿರ್ವಹಿಸುವಂತೆ ಉಲ್ಲೇಖದ 1,2,3 ಮತ್ತು 4 ರ ಸರ್ಕಾರದ ಆದೇಶಗಳಲ್ಲಿ ತಿಳಿಸಲಾಗಿರುತ್ತದೆ.
ಈ ಸಂಬಂಧ ಈ ಕಚೇರಿಯ ಉಲ್ಲೇಖ 5ರಲ್ಲಿನ ಸುತ್ತೋಲೆಗಳಲ್ಲಿ ವಿದ್ಯುನ್ಮಾನ ಸೇವಾ ವಹಿಯನ್ನು (ಇ.ಎಸ್.ಆರ್) ಅನುಷ್ಠಾನಗೊಳಿಸುವಂತೆ ಎಲ್ಲಾ ಸಕ್ಷಮ ಪ್ರಾಧಿಕಾರಿಗಳಿಗೆ / ಕಚೇರಿಯ ಮುಖ್ಯಸ್ಮರಿಗೆ ತಿಳಿಸಲಾಗಿರುತ್ತದೆ. ಮತ್ತು ಈ ಸಂಬಂಧ ದಿನಾಂಕ : 04-09-2024 ರಂದು ನಡೆದ ಸಭೆಯಲ್ಲಿ ಈ ಬಗ್ಗೆ ತರಬೇತಿಯನ್ನು ನೀಡಲಾಗಿರುತ್ತದೆ. ಹಾಗೂ ದಿನಾಂಕ:21/11/2024ರಂದು 2ನೇ ಬಾರಿ ತರಬೇತಿಯನ್ನು ನೀಡಲಾಗಿರುತ್ತದೆ.
ಪ್ರಸ್ತುತ ವಿದ್ಯುನ್ಮಾನ್ ಸೇವಾವಹಿ ಅನುಷ್ಠಾನಗೊಳಿಸುವ ಕಾರ್ಯವನ್ನು ಅತ್ಯಂತ ತ್ವರಿತವಾಗಿ ಮಾಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು ಸದರಿ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳು ಈ ಕೆಳಕಂಡಂತೆ ಇರುತ್ತದೆ.
• ನೋಡಲ್ ಅಧಿಕಾರಿಗಳು (Nodal officer) : ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಕಚೇರಿ / ಅಪರ ಆಯುಕ್ತರ ಕಚೇರಿ/ ವಿಭಾಗೀಯ ಕಚೇರಿ/ ಜಿಲ್ಲಾ ಹಂತದ / ತಾಲ್ಲೂಕ ಹಂತದ ಕಚೇರಿಯಲ್ಲಿ ಈ ಕಾರ್ಯದ ಅನುಷ್ಠಾನಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು. ಸದರಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಕಚೇರಿಗಳಲ್ಲಿ ಈ ಕಾರ್ಯದ ಅನುಷ್ಠಾನ ಸಂಪೂರ್ಣ ಜಬ್ದಾರಿಯನ್ನು ಹೊಂದಿರುತ್ತಾರೆ.
• ಸಂಪನ್ಮೂಲ ಅಧಿಕಾರಿಗಳು(Resource Person) : ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಕಚೇರಿ / ಅಪರ ಆಯುಕ್ತರ ಕಚೇರಿ/ ವಿಭಾಗೀಯ ಕಚೇರಿ/ ಜಿಲ್ಲಾ /ತಾಲ್ಲೂಕು ಹಂತದ (ತಾಲ್ಲೂಕಿಗೆ ಮಾತ್ರ ಇಬ್ಬರು) ಕಚೇರಿಯಲ್ಲಿ ಈ ಕಾರ್ಯದ ಅನುಷ್ಠಾನಕ್ಕಾಗಿ ಒಬ್ಬ ನುರಿತ ಹಾಗೂ ತಾಂತ್ರಿಕವಾಗಿ ಸಮರ್ಥರಿರುವ ಸಂಪನ್ಮೂಲ ಅಧಿಕಾರಿ ಯನ್ನು (Resource Person) ನೇಮಿಸಲಾಗಿದ್ದು ನೋಡಲ್ ಅಧಿಕಾರಿಗಳ ಸಹಯೋಗದಿಂದ ತಮ್ಮ ವ್ಯಾಪ್ತಿಯಲ್ಲಿನ ಸಿಬ್ಬಂದಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿ,ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ವಿಶೇಷ ಸೂಚನೆ :
• ಜಿಲ್ಲಾ ಹಂತದ ಉಪನಿರ್ದೇಶಕರು (ಆಡಳಿತ) ಕಚೇರಿಯಲ್ಲಿ ನೇಮಕವಾದ ನೋಡಲ್ ಅಧಿಕಾರಿಗಳು ವಿದ್ಯುನ್ಮಾನ್ ಸೇವಾವಹಿ ಅನುಷ್ಠಾನಗೊಳಿಸುವ ಸಂಬಂಧ ಅಗತ್ಯವಾದ ಮಾಹಿತಿಯನ್ನು ಪಡೆದುಕೊಂಡು, ತಮ್ಮ ವ್ಯಾಪ್ತಿಯ ಡಯಟ್ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಪ್ರೌಢಶಾಲೆಗಳಲ್ಲಿನ ಸಿಬ್ಬಂದಿಗೆ ಸೂಕ್ತಮಾರ್ಗದರ್ಶನ ಮತ್ತು ಸಲಹೆಯನ್ನು ನೀಡುವುದು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನೋಡಲ್ ಅಧಿಕಾರಿಗಳೊಂದಿಗೆ ಹಾಗೂ ಸಂಪನ್ಮೂಲ ಅಧಿಕಾರಿಗಳೊಂದಿಗೆ ಸಮನ್ವಯದ ಸಾಧಿಸಿ, ಜಿಲ್ಲಾ ವ್ಯಾಪ್ತಿಯ ಎಲ್ಲಾ ಕಚೇರಿ/ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಉಳಿದಂತೆ ಎಲ್ಲಾ ನೋಡಲ್ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.
- Click here…
• ಎಲ್ಲಾ ಕಚೇರಿಯಲ್ಲಿ ನೇಮಕವಾದ ಸಂಪನ್ಮೂಲ ಅಧಿಕಾರಿಗಳು ವಿದ್ಯುನ್ಮಾನ್ ಸೇವಾವಹಿ ಅನುಷ್ಠಾನಗೊಳಿಸುವ ಸಂಬಂಧ ಅಗತ್ಯವಾದ ಮಾಹಿತಿ ಹಾಗೂ ಜ್ಞಾನವನ್ನು ಹೊಂದುವುದು ಮತ್ತು ತಮ್ಮ ಕಚೇರಿ ಹಾಗೂ ತಮ್ಮ ವ್ಯಾಪ್ತಿಯ ಪ್ರೌಢ ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.
• ಇಲಾಖೆಯ ಎಲ್ಲಾ ಕಚೇರಿಯ ಮುಖ್ಯಸ್ಥರು ಈ ಕಾರ್ಯದ ಅನುಷ್ಠಾನಕ್ಕಾಗಿ ಮೇಲುಸ್ತುವಾರಿ ವಹಿಸುವುದು ಮತ್ತು ಈ ಸಂಬಂಧ ಈಗಾಗಲೇ Google Spread Sheet ನಲ್ಲಿ ನೋಡಲ್ ಹಾಗೂ ಸಂಪನ್ಮೂಲ ಅಧಿಕಾರಿಗಳ ವಿವರವನ್ನು ಸಲ್ಲಿಸಿದ್ದು ಸದರಿ ಅಧಿಕಾರಿಗಳಿಗೆ ಅಗತ್ಯ ಸಲಹೆ-ಮಾರ್ಗದರ್ಶನ ನೀಡುವುದು.(ಟಿಪ್ಪಣಿ ಮಾನ್ಯ ಆಯುಕ್ತರಿಂದ ಅನುಮೋದಿಸಲ್ಪಟ್ಟಿದೆ.)
Respect to post author, some superb information .