History: Major Historians-2024.

History: ಪ್ರಮುಖ ಇತಿಹಾಸಕಾರರು-2024.

History:

 

History:ಇತಿಹಾಸವು ಮಾನವನ ಜ್ಞಾನದ ಶ್ರೇಷ್ಠ ಶಾಖೆಗಳಲ್ಲಿ ಒಂದಾಗಿದೆ. ಹಿಸ್ಟರಿ ಎಂಬ ಪದವು ಗ್ರೀಕ್ ಪದವಾದ ‘ಹಿಸ್ಟೋರಿಯಾ’ ಎಂಬ ಮೂಲದಿಂದ ಬಂದಿದ್ದು, ‘ವಿಚಾರಣೆ’ ಅಥವಾ ‘ತನಿಖೆ’ ಎಂಬ ಅರ್ಥವನ್ನು ಹೊಂದಿದೆ. ಸಂಸ್ಕೃತದಲ್ಲಿ ಇತಿಹಾಸವೆಂದರೆ ಖಚಿತವಾಗಿ ಘಟಿಸಿದ ಘಟನೆಗಳು ಎಂದರ್ಥ, ಸತ್ಯಾನ್ವೇಷಣೆಯೇ ಇತಿಹಾಸದ ಉದ್ದೇಶ, ವಿಶಾಲವಾದ ಅರ್ಥದಲ್ಲಿ ಇತಿಹಾಸವು ಮಾನವನ ಜೀವನದ ಎಲ್ಲಾ ಆಯಾಮಗಳನ್ನು ಕುರಿತು ಅಧ್ಯಯನ ಮಾಡುತ್ತದೆ.

ಇತಿಹಾಸವನ್ನು ವೈಜ್ಞಾನಿಕವಾಗಿ ಬರೆಯುವ ಕಲೆಯನ್ನು ಮೊದಲಿಗೆ ಗ್ರೀಕರು ವಿಕಸನಗೊಳಿಸಿದರು. ಇತಿಹಾಸವನ್ನು ಬರೆಯಲು ಆರಂಭಿಸಿದವರಲ್ಲಿ ಗ್ರೀಕ್ ಇತಿಹಾಸಕಾರ ಹೆರೊಡೋಟಸ್ ಮೊದಲಿಗನಾಗಿದ್ದು, ಆತನನ್ನು ‘ಇತಿಹಾಸದ ಪಿತಾಮಹ’ ನೆಂದು ಕರೆಯಲಾಗಿದೆ.

1. ಹೆರೊಡೋಟಸ್ (History:)(ಸಾ.ಶ.ಪೂ 484-424).

History:

 

ಹೆರೊಡೋಟಸ್ ಸಾ.ಶ.ಪೂ 5ನೇ ಶತಮಾನದಲ್ಲಿ ಜೀವಿಸಿದ್ದ ಗ್ರೀಕ್ ಇತಿಹಾಸಕಾರ, ಇವನು ಇತಿಹಾಸ ಮತ್ತು ಮಾನವಶಾಸ್ತ್ರಕ್ಕೆ ಗಣನೀಯವಾದ ಕೊಡುಗೆ ಸಲ್ಲಿಸಿದ್ದಾನೆ. ಗ್ರೀಸ್ ಮತ್ತು ಪಶ್ಚಿಮ ಏಷ್ಯಾದಲ್ಲಿ ವ್ಯಾಪಕ ಸಂಚಾರ ಮಾಡಿದ ಹೆರೊಡೋಟಸ್ ಗ್ರೀಕ್ ನಗರ-ರಾಜ್ಯಗಳ ಬಗೆಗೆ ಅನೇಕ ಸಂಗತಿಗಳನ್ನು ಸಂಗ್ರಹಿಸಿ ಅವುಗಳನ್ನು ಒಂಬತ್ತು ಸಂಪುಟಗಳಲ್ಲಿ ಬರೆದಿದ್ದಾನೆ. ಅವುಗಳಲ್ಲಿ ‘ದಿ ಹಿಸ್ಟ್ರಿ ಆಫ್ ಪರ್ಷಿಯನ್ ವಾರ್ಸ್’ (ಪರ್ಷಿಯನ್ ಕದನಗಳ ಇತಿಹಾಸ) ಪ್ರಮುಖವಾದುದಾಗಿದ್ದು ಅದು ಗ್ರೀಕರು ಮತ್ತು ಪರ್ಷಿಯನ್ನರ ನಡುವೆ ನಡೆದ ಕದನಗಳನ್ನು ಕುರಿತದ್ದಾಗಿದೆ. ಇದು ಇತಿಹಾಸದ ಆರಂಭಿಕ ಕೃತಿಯಾಗಿದೆ. ಈತನೇ ಇತಿಹಾಸದ ಅರ್ಥ ಮತ್ತು ವ್ಯಾಪ್ತಿಯನ್ನು ಮೊದಲು ತಿಳಿಸಿದವನು.

ಹೆರೊಡೋಟಸ್‌ ಪ್ರಕಾರ:- “ಮುಂದಿನ ಪೀಳಿಗೆಯು ನೆನಪಿಡಬೇಕಾದ ಮಹಾನ್ ವೀರರ ಅಥವಾ ಮಹತ್ವಪೂರ್ಣವಾದ ಘಟನೆಗಳ ದಾಖಲೆಯೇ ಇತಿಹಾಸ”. ಈ ವ್ಯಾಖ್ಯೆಯಲ್ಲಿ ಹೆರೊಡೋಟಸ್‌ನು ಭವಿಷ್ಯದ ತಲೆಮಾರುಗಳು ಮಹಾನ್ ವ್ಯಕ್ತಿಗಳ ಸಾಧನೆ ಹಾಗೂ ಮಹತ್ವಪೂರ್ಣ ಘಟನೆಗಳಿಂದ ಕಲಿಯಬಹುದಾದ ಪಾಠಗಳ ಮೇಲೆ ತನ್ನ ವಿಚಾರಗಳನ್ನು ಕೇಂದ್ರೀಕರಿಸಿದ್ದಾನೆ.

https://mahitikannada.com/kpsc-exam-schedule-announced-for-group-c-post-how-will-the-exam-pattern-be-here-is-the-new-information-2024/

2. ಸಂತ ಆಗಸ್ಟೈನ್(History:)

(ಸಾ.ಶ.354-430).

History:

ಆಗಸ್ಟೈನ್ ಒಬ್ಬ ಶ್ರೇಷ್ಠ ಕ್ರಿಶ್ಚಿಯನ್ ಸಂತ ಹಾಗೂ ಚಿಂತಕ. ಈತ ಮಧ್ಯಕಾಲೀನ ಯುಗದ ಚರ್ಚಿನ ಶ್ರೇಷ್ಠ ಇತಿಹಾಸಕಾರ. ಈತನ ‘ದ ಸಿಟಿ ಆಫ್ ಗಾಡ್’ (The City of God) ಕೃತಿಯು ಪ್ರಪಂಚದ ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿದೆ. ಆಗಸ್ಟ್‌ನನ ಪ್ರಕಾರ:- “ಇತಿಹಾಸವು ದೇವರು ಮತ್ತು ಸೈತಾನನ ನಡುವಿನ ಸಂಘರ್ಷದ ಕಥೆಯಾಗಿದ್ದು, ಅಂತಿಮವಾಗಿ ದೇವರು (ಶಿಷ್ಟ) ಸೈತಾನನ (ದುಷ್ಟ) ಮೇಲೆ ಸಾಧಿಸುವ ವಿಜಯದಲ್ಲಿ ಪರ್ಯಾವಸನಗೊಳ್ಳುತ್ತದೆ”.

ಸಂತ ಆಗಸ್ಟೈನ್ ಒಬ್ಬ ಚರ್ಚಿನ ಇತಿಹಾಸಕಾರನಾಗಿದ್ದು ತನ್ನ ಬರವಣಿಗೆಯಲ್ಲಿ ಪವಾಡಗಳು ಮತ್ತು ಸಂತರಿಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದಾನೆ. ಇವನು ಮಾನವನ ಇತಿಹಾಸವು ದೇವರಿಂದ ಮಾರ್ಗದರ್ಶಿಸಲ್ಪಡುತ್ತದೆ ಎಂದು ಬಲವಾಗಿ ನಂಬಿದ್ದನು. ಮಧ್ಯಕಾಲೀನ ಯೂರೋಪಿನ ಇತಿಹಾಸವು ಅನೇಕ ಶತಮಾನಗಳವರೆಗೆ ಪಾದ್ರಿಗಳ ಏಕಸ್ವಾಮ್ಯದಲ್ಲಿತ್ತು. ಇವರು ಜಾತ್ಯಾತೀತ ಮತ್ತು ಧಾರ್ಮಿಕ ಇತಿಹಾಸಗಳೆರಡನ್ನು ಒಂದು ಸಾಧನವಾಗಿ ಚರ್ಚಿನ ನಂಬಿಕೆಯನ್ನು ಜನಪ್ರಿಯಗೊಳಿಸಲು ಬಳಸಿದರು.

3. ಕಾರ್ಲ್ ಮಾರ್ಕ್ಸ್(History:)

(1818-1883).

History:

ಕಾರ್ಲ್‌ಮಾರ್ಕ್ಸ್ ಒಬ್ಬ ಜರ್ಮನ್ ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ಇತಿಹಾಸಕಾರ, ಪತ್ರಕರ್ತ ಮತ್ತು ಕ್ರಾಂತಿಕಾರಿ ಸಮಾಜವಾದಿ. ಸಮಾಜ ವಿಜ್ಞಾನಗಳು ಮತ್ತು ಸಮಾಜವಾದಿ ಚಳುವಳಿಗಳ ಬೆಳವಣಿಗೆಯಲ್ಲಿ ಈತನ ಚಿಂತನೆಗಳು ಪ್ರಮುಖ ಪಾತ್ರವಹಿಸಿವೆ. ಈತನನ್ನು ಇತಿಹಾಸದಲ್ಲಿ ಪ್ರಖ್ಯಾತ ಅರ್ಥಶಾಸ್ತ್ರಜ್ಞನೆಂದು ಪರಿಗಣಿಸಲಾಗಿದೆ. ಈತನು ಇತಿಹಾಸವನ್ನು ಹೊಸ ಆರ್ಥಿಕ ದೃಷ್ಟಿಕೋನದಿಂದ ಅರ್ಥೈಸಿ ವ್ಯಾಖ್ಯಾನಿಸಿದನು. ಕಾರ್ಲ್‌ಮಾರ್ಕ್ಸ್‌ನ ಪ್ರಕಾರ “ಇತಿಹಾಸವೆಂದರೆ ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ”. ಈ ವ್ಯಾಖ್ಯೆಯಲ್ಲಿ ಮಾರ್ಕ್ಸ್ನು ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷಕ್ಕೆ ಒತ್ತು ನೀಡಿದ್ದಾನೆ. ಅದುವೇ ಬಡವರು ಮತ್ತು ಶ್ರೀಮಂತರ ನಡುವಿನ ಹೋರಾಟ, ಶೋಷಕರು ಮತ್ತು ಶೋಷಿಸಲ್ಪಡುವವರ ನಡುವೆ ನಿರಂತರ ಸಂಘರ್ಷ ನಡೆಯುತ್ತದೆ ಎಂದು ಮಾರ್ಕ್ಸ್ನು ವಾದಿಸಿದ್ದಾನೆ. ಈತನು ‘ದಾಸ್ ಕ್ಯಾಪಿಟಲ್’ ಮತ್ತು ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’ ಎಂಬ ಎರಡು ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾನೆ.

4. ಜೆ. ಬಿ. ಬ್ಯೂರಿ(History:) (1861-1927).

ಒಬ್ಬ ಐರಿಷ್ ಇತಿಹಾಸಕಾರ ಮತ್ತು ವಿದ್ವಾಂಸ. ಇವನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಆಧುನಿಕ ಇತಿಹಾಸದ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸಿದನು.

ಜೆ.ಬಿ. ಬ್ಯೂರಿ ಪ್ರಕಾರ ‘ಇತಿಹಾಸವು ಒಂದು ವಿಜ್ಞಾನ; ಹೆಚ್ಚು ಅಲ್ಲ. ಕಡಿಮೆಯೂ ಅಲ್ಲ’, ಬ್ಯೂರಿಯು ಪ್ರತಿಯೊಬ್ಬ ಇತಿಹಾಸಕಾರನು ಒಬ್ಬ ವಿಜ್ಞಾನಿಯ ಹಾಗೆ ಕಾರ್ಯನಿರ್ವಹಿಸಬೇಕೆಂದು. ನಿರ್ದಿಷ್ಟ ದಾಖಲೆಗಳು ಮತ್ತು ಅಂಕಿ-ಅಂಶಗಳನ್ನು ಸಂಗ್ರಹಿಸಬೇಕೆಂದು ಹೇಳಿದ್ದಾನೆ. ಈತನು ವಿಷಯವನ್ನು ವಿಮರ್ಶಾ್ರತ್ಮಕವಾಗಿ ಮೌಲ್ಯಮಾಪನ ಮಾಡಿ ಯಾವುದೇ ಪೂರ್ವಾಗ್ರಹವಿಲ್ಲದೆ ಸತ್ಯವನ್ನು ಹೊರತರಬೇಕೆಂದು ಹೇಳಿದ್ದಾನೆ. ಆದರೆ. ಅವಲೋಕನ ಮತ್ತು ಪ್ರಯೋಗ ಇತಿಹಾಸದಲ್ಲಿ ಸಾಧ್ಯವಿಲ್ಲ. ಅಂತೆಯೇ ಇತಿಹಾಸದ ಘಟನೆಗಳನ್ನು ಪುನರ್ ನಿರ್ಮಾಣಮಾಡಲು ಸಾಧ್ಯವಿಲ್ಲ. ಅದ್ದರಿಂದ ಇತಿಹಾಸ ಪರಿಶುದ್ಧ ವಿಜ್ಞಾನವಲ್ಲ. ಜೆ.ಬಿ.ಬ್ಯೂರಿಯವರೇ ಹೇಳುವಂತೆ “ಇತಿಹಾಸವು ಒಂದು ಪ್ರಾಚೀನ ಕಲೆ ಮತ್ತು ವಿಜ್ಞಾನವಾಗಲು ಹೊರಟಿರುವ ಇತ್ತೀಚಿನ ಆಕಾಂಕ್ಷಿ”. ಇತಿಹಾಸಕಾರ ವಿಷಯವನ್ನು ಪ್ರಸ್ತುತಪಡಿಸುವಲ್ಲಿ ತನ್ನ ಪ್ರತಿಭೆಯನ್ನು ಕ್ರಿಯಾತ್ಮಕವಾದ ರೀತಿಯಲ್ಲಿ ಬಳಸಿಕೊಳ್ಳಬೇಕು.

https://mahitikannada.com/kea-kea-stumbles-in-mandatory-kannada-exam-for-village-administrator-posts-2024/

5. ಅರ್ನಾಲ್ಡ್ ಟಾಯ್ನ್ ಬಿ (History:)(1889-1975).

History:

ಆರ್ನಾಲ್ಡ್ ಟಾಯ್ಸ್ಬಿ ಒಬ್ಬ ಬ್ರಿಟೀಷ್ ಇತಿಹಾಸಕಾರ. ಇವನು ಇತಿಹಾಸದ ಪ್ರಾಧ್ಯಾಪಕನಾಗಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿದನು. ಧರ್ಮ ಮತ್ತು ಇತಿಹಾಸದ ಕುರಿತಾದ ಅನೇಕ ಕೃತಿಗಳನ್ನು ಇವನು ಬರೆದಿದ್ದಾನೆ. ಇವನ ಪ್ರಸಿದ್ಧ ಕೃತಿ ‘ಎ ಸ್ಟಡಿ ಆಫ್ ಹಿಸ್ಟರಿ’ ಹನ್ನೆರಡು ಸಂಪುಟಗಳಲ್ಲಿದೆ. ಇವನು ಜಗತ್ತಿನ 26 ನಾಗರಿಕತೆಗಳನ್ನು ಅಧ್ಯಯನ ಮಾಡಿದ್ದಾನೆ. ಇವನ ಪ್ರಕಾರ – “ಇತಿಹಾಸವು ನಾಗರಿಕತೆಗಳ ಏಳು ಬೀಳಿನ ಕಥೆ”. ಟಾಯ್ಸ್ಬಿ ವಿವರಿಸಿದಂತೆ- ಇತಿಹಾಸವು ಮಾನವನ ಅಧ್ಯಯನವಾಗಿದೆ. ಆದರೆ ಇದು ವ್ಯಕ್ತಿಗಳ, ಅಧಿಕಾರ, ವೈಭವ ಮತ್ತು ಯುದ್ಧಗಳ ಕಥೆಯಲ್ಲ, ಇತಿಹಾಸದಲ್ಲಿ ‘ಮಾನವನಿಗೆ’ ಮಹತ್ವಕೊಡಬೇಕು. ಇತಿಹಾಸವು ಜ್ಞಾನದ ಭಂಡಾರ ಹಾಗೂ ಸಂಸ್ಕೃತಿ ಮತ್ತು ನಾಗರಿಕತೆಗಳ ಬೆಳವಣಿಗೆಯಲ್ಲಿ ಅವನ ಪಾತ್ರವು ಮಹತ್ವದ್ದಾಗಿದೆ ಎಂದು ಟಾಯ್ಸ್ಬಿ ವಿವರಿಸಿದ್ದಾನೆ.

6. ಜವಾಹರಲಾಲ್ ನೆಹರು (History:)(1889-1964).

History:

ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿದ್ದ ನೆಹರು ಇತಿಹಾಸದ ಬಗೆಗೆ ಅತೀವ ಆಸಕ್ತಿಯನ್ನು ಹೊಂದಿದ್ದರು. ‘ಡಿಸ್ಕವರಿ ಆಫ್ ಇಂಡಿಯಾ’ ಮತ್ತು ‘ದಿ ಗ್ಲಿಂಪ್ಸ್ಸ್ ಆಫ್ ವರ್ಲ್ಡ್ ಹಿಸ್ಟರಿ’ ಅವರ ಪ್ರಸಿದ್ಧ ಕೃತಿಗಳು. ಅವರು ರಾಜಕೀಯ ಬಂಧಿಯಾಗಿದ್ದಾಗ ಈ ಎರಡೂ ಕೃತಿಗಳನ್ನು ಬರೆದಿದ್ದಾರೆ. ‘ದಿ ಗ್ಲಿಂಪ್ಸ್ಸ್ ಆಫ್ ವರ್ಲ್ಡ್ ಹಿಸ್ಟರಿ’ಯು ನೆಹರುರವರು ತಮ್ಮ ಮಗಳು ಇಂದಿರಾಗಾಂಧಿಯವರಿಗೆ ಬರೆದ ಪತ್ರಗಳ ಸಂಗ್ರಹವಾಗಿದೆ. ನೆಹರು ಪ್ರಕಾರ-“ಅನಾಗರಿಕತೆಯಿಂದ ನಾಗರಿಕತೆಯಡೆಗೆ ಸಾಗಿದ ಮಾನವನ ಕಥೆಯೇ ಇತಿಹಾಸ”. ಯುಗ ಯುಗಗಳಲ್ಲಿ ಮಾನವನು ಪ್ರತಿ ಹಂತದಲ್ಲೂ ಪ್ರಗತಿ ಹೊಂದಲು ಸಂಘರ್ಷ ಮಾಡಿದ್ದಾನೆ ಎಂದು ನೆಹರು ಅಭಿಪ್ರಾಯ ಪಟ್ಟಿದ್ದಾರೆ. ಮಾನವನು ನಾಗರಿಕತೆಯ ಉನ್ನತ ಮಟ್ಟವನ್ನು ತಲುಪಲು ಸಂಘರ್ಷ ಹಾಗೂ ಸಾಮರಸ್ಯಗಳೆರಡು ಸಹಾಯ ಮಾಡಿವೆ ಎಂದಿದ್ದಾರೆ. ಈ ಅಂಶವನ್ನು 4000 ವರ್ಷಗಳಿಗೂ ಹೆಚ್ಚಿನ ಮಾನವನ ಇತಿಹಾಸದ ಹಿನ್ನಲೆಯಲ್ಲಿ ಖಚಿತ ಪಡಿಸಿಕೊಳ್ಳಲಾಗಿದೆ.

ಧನ್ಯವಾದಗಳು……
WhatsApp Group Join Now
Telegram Group Join Now

4 thoughts on “History: Major Historians-2024.”

  1. Ивенты на площадках под открытым небом раскроют вам восторженные моменты радости. Фестивали еды создают возможность расслабиться. Тематические мероприятия часто улучшают. Делайте выбор для восхитительных ивентов в удовольствие!
    Купить билеты в театр для всей семьи

    Reply

Leave a Comment