ಐಸಿಸಿ ಅಧ್ಯಕ್ಷ ಚುನಾವಣೆಗೆ ಜಯ್ ಶಾ ಸ್ಪರ್ಧೆ? -2024.
ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ |ಶಾ ಸ್ಪರ್ಧಿಸಿದರೆ ಅವಿರೋಧ ಆಯ್ಕೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜಿಸುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದ ಅವಧಿಯು ಮುಕ್ತಾಯ ಹಂತಕ್ಕೆ ಬಂದಿದ್ದು, ಹಾಲಿ ಅಧ್ಯಕ್ಷಗ್ರೆಗ್ ಬಾರ್ಕ್ಸ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳ ಲಿದೆ. ಈ ಹಿಲೆ 98 ಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯ ದರ್ಶಿ ಜಯ್ ಶಾ ಅವರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಲಿದ್ದಾರೆ ಎನ್ನಲಾ ಗುತ್ತಿದೆ. ತನ್ನ ಅಧಿಕಾರಾ ವಧಿಯಲ್ಲಿ ಭಾರತ ಕ್ರಿಕೆಟ್ ಅನ್ನು ಎತ್ತರಕ್ಕೆ ಕೊಂಡೊ ಯ್ದಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಇದೀಗ ಐಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ವರದಿಯಾಗಿದೆ. ಐಸಿಸಿಯ ನೂತನ ಅಧ್ಯಕ್ಷರ ಆಯ್ಕೆ ಮುಂದಿನ ನವೆಂಬರ್‌ನಲ್ಲಿ ನಡೆಯಲಿದೆ. ಹೀಗಾಗಿ ಈ ಹುದ್ದೆಗೆ ಬಿಸಿಸಿಐನ ಪ್ರಸ್ತುತ ಕಾರ್ಯದರ್ಶಿ ಜಯ್ ಶಾ ಅವರನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಒಂದು ವೇಳೆ ಜಯ್ ಶಾ ಈ ಹುದ್ದೆಗೆ ಆಯ್ಕೆಯಾದರೆ ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾ ಗಲಿದ್ದಾರೆ. ಕ್ರಿಕ್‌ಬಜ್ ವರದಿಯ ಪ್ರಕಾ ರ, ಐಸಿಸಿ ಅಧ್ಯಕ್ಷ ಸ್ಥಾನವನ್ನು ಜಯ್ ಶಾ ವಹಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬುದರ ಕುರಿತು ಇನ್ನೂ ಯಾವುದೇ ನಿರ್ಧಾರವನ್ನು ತೆಗೆದು ಕೊಂಡಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಈ ಹುದ್ದೆಯನ್ನು ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಸ ನಿರ್ವಹಿ ಸುತ್ತಿದ್ದಾರೆ. ಬಾರ್ಕ್ಸ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರೆ ಯುವ ಅವಕಾಶ ಹೊಂದಿದ್ದಾರೆ. ಆದರೆ ಜಯ್ ಶಾ ಚುನಾವಣೆಯಲ್ಲಿ ಸ್ಪರ್ಧಿಸಿ ದರೆ, ಅವರು ಅವಿರೋಧವಾಗಿ ಆಯ್ಕೆ ಯಾಗುವುದು ಖಚಿತ ಎನ್ನಲಾಗಿದೆ.
ಜುಲೈ 19 ರಂದು ಸಮ್ಮೇಳನ.
ಜುಲೈ 19, ರಂದು ಐಸಿಸಿಯ ವಾರ್ಷಿಕ ಸಮ್ಮೇಳನ ನಡೆಯಲಿದ್ದು,ಸಮ್ಮೇಳನದಲ್ಲಿಸಹಾಯಕ ಸದಸ್ಯ ನಿರ್ದೇಶಕರ ಚುನಾವಣೆ ನಡೆಯಲಿದೆ.ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬೋರ್ಡ್ ಆಫ್ ಡೈರೆಕ್ಟರ್‌ನಲ್ಲಿ ಮೂರು ಸ್ಥಾನಗಳಿಗೆ ಹನ್ನೊಂದು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಪ್ರತಿಯೊಬ್ಬರೂ 2 ವರ್ಷಗಳ ಕಾಲ ಅಧಿಕಾರ ಸ್ವೀಕರಿಸಲಿ ದ್ದಾರೆ. ಪ್ರಸ್ತುತ ನಿರ್ದೇಶಕರಾಗಿ ಒಮಾನ್‌ನ ಪಂಕಜ್ ಖಿಮ್ಮಿ, ಸಿಂಗಾಪುರದ ಇಮ್ರಾನ್ ಖವಾಜಾ ಮತ್ತು ಬರ್ಮುಡಾದ ನೀಲ್ ಸ್ಪೀಟ್ ಕಾರ್ಯನಿರ್ವಹಿಸುತ್ತಿದ್ದಾರೆ.
3 ವರ್ಷಗಳಅವಧಿ.
ಐಸಿಸಿ, ಅಧ್ಯಕ್ಷರ ಅಧಿಕಾರಾವಧಿಯನ್ನು ಪರಿಷ್ಕರಿಸಿದೆ ಎಂಬ ವರದಿ ಈಗಾಗಲೇ ಹೊರಬಿದ್ದಿದ್ದು, ಇದನ್ನು ಮೂರು ಅವಧಿಯಿಂದ ಮೂರು ವರ್ಷಗಳ ಎರಡು ಅವಧಿಗೆ ಬದಲಾಯಿಸಲಾಗಿದೆ. ಶಾ ಆಯ್ಕೆಯಾದರೆ ಮೂರು ವರ್ಷಗಳ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರ ನಂತರ, ಅವರು ಬಿಸಿಸಿಐ ನಿಯಮದ ಪ್ರಕಾರ 2028 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಲು ಅರ್ಹರಾಗಿರುತ್ತಾರೆ.
ಧನ್ಯವಾದಗಳು….
https://mahitikannada.com/postal-life-insurance-paying-just-rs-755-will-get-rs-15-lakh-2024/