RDWSD Recruitment: ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯ ಸಮಾಲೋಚಕರ ನೇಮಕ: ಪದವೀಧರರಿಗೆ -2024.
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.
ನೀವು ಬಿಇ, ಬಿ.ಟೆಕ್, ಬಿಸಿಎ, ಬಿಎಸ್ಸಿ, ಎಂಟೆಕ್, ಎಂಎಸ್‌ಸಿ, ಎಂಬಿಎ, ಹೀಗೆ ಹಲವು ಪದವಿಗಳನ್ನು ಪಡೆದು, ಸರ್ಕಾರಿ ಉದ್ಯೋಗಕ್ಕಾಗಿ ಮುನ್ನೋಡುತ್ತಿದ್ದೀರಾ.. ಹಾಗಿದ್ರೆ ಇದೋ ಇಲ್ಲಿದೆ ಭರ್ಜರಿ ಜಾಬ್ ಆಫರ್. ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯು ವಿವಿಧ ವಿಭಾಗಗಳಲ್ಲಿ ಸಮಾಲೋಚಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಹುದ್ದೆಗಳಲ್ಲಿ ಆಸಕ್ತಿ ಇರುವವರು ವಿವರಗಳನ್ನು ತಿಳಿದು ಅರ್ಜಿ ಹಾಕಿ.
RDWSD Recruitment: ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ವಿವಿಧ ಯೋಜನೆಗಳಡಿ ಸಮಾಲೋಚಕರ ಭರ್ತಿಗೆ ಇದೀಗ ನೇಮಕ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಗಳನ್ನು ಇಲಾಖೆಯ ಜಿಲ್ಲಾ ತಾಂತ್ರಿಕ ಸಹಾಯಕರ ಘಟಕಗಳಲ್ಲಿ ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ತಾಂತ್ರಿಕ, ತಾಂತ್ರಿಕೇತರ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಮಾಸಿಕ ರೂ.50,000 ದಿಂದ ರೂ.75,000 ವರೆಗೆ ವೇತನವನ್ನು ನೀಡಲಾಗುತ್ತದೆ. ಆಸಕ್ತರು ಹುದ್ದೆಗಳ ವಿವರ, ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆ:
ಸಂಗ್ರಹಣೆ ಸಮಾಲೋಚಕರು :
ಬಿಇ ಅಥವಾ ಬಿ.ಟೆಕ್ ಇನ್ ಸಿವಿಲ್ ಜತೆಗೆ ಕನಿಷ್ಠ 5 ವರ್ಷ ಕಾರ್ಯಾನುಭವ. ಅಥವಾ ಸರ್ಕಾರಿ ಇಲಾಖೆಗಳಲ್ಲಿ ಕನಿಷ್ಠ 2 ವರ್ಷ ಕಾರ್ಯಾನುಭವ.
ಪರಿವೀಕ್ಷಣಾ ಮತ್ತು ಮೌಲ್ಯಮಾಪನ:
ಸಮಾಲೋಚಕರು :
ಬಿಸಿಎ / ಬಿಇ (ಸಿಎಸ್ / ಐಟಿ) ಜತೆಗೆ 5 ವರ್ಷ ಕಾರ್ಯಾನುಭವವನ್ನು ಪಡೆದಿರಬೇಕು. ಅಥವಾ ಕನಿಷ್ಠ 2 ವರ್ಷ ಸರ್ಕಾರಿ ವಲಯದಲ್ಲಿ ಕಾರ್ಯಾನುಭವ ಪಡೆದಿರಬೇಕು.
ಪರಿಸರ ಸಮಾಲೋಚಕರು :
ಬಿಇ / ಬಿ.ಟೆಕ್ / ಎಂ.ಟೆಕ್ ಅನ್ನು ಪರಿಸರ ಇಂಜಿನಿಯರಿಂಗ್ ವಿಷಯದಲ್ಲಿ ಪಡೆದಿರಬೇಕು. ಕನಿಷ್ಠ 5 ವರ್ಷ ಕಾರ್ಯಾನುಭವ ಅಥವಾ ಕನಿಷ್ಠ 2 ವರ್ಷ ಸರ್ಕಾರಿ ವಲಯದಲ್ಲಿ ಕಾರ್ಯಾನುಭವ ಹೊಂದಿರಬೇಕು.
ಸಾಮಾಜಿಕ ಅಭಿವೃದ್ಧಿಸಮಾಲೋಚಕರು :
ಎಂಎಸ್‌ಡಬ್ಲ್ಯೂ / ಎಂಎ ಇನ್ ಸೋಷಿಯಾಲಜಿ / ಪೋಸ್ಟ್ ಗ್ರಾಜುಯೇಟ್ ಇನ್ ರೂರಲ್ ಡೆವಲಪ್ಮೆಂಟ್ / ಎಂಬಿಎ-ಹೆಚ್‌ಆರ್‌ಎಂ / ಎಂಬಿಎ ಇನ್ ಡೆವಲಪ್ಮೆಂಟ್ ಮ್ಯಾನೇಜ್ಮೆಂಟ್ / ಎಂಬಿಎ ಇನ್ ಡೆವಲಪ್ಮೆಂಟ್ ಸ್ಟಡೀಸ್ ಓದಿದ್ದು ಕನಿಷ್ಠ 5 ವರ್ಷ ಕಾರ್ಯಾನುಭವ ಅಥವಾ ಕನಿಷ್ಠ 2 ವರ್ಷ ಸರ್ಕಾರಿ ವಲಯದಲ್ಲಿ ಕಾರ್ಯಾನುಭವ ಹೊಂದಿರಬೇಕು.
ಹಣಕಾಸು ಸಮಾಲೋಚಕರು:
ಎಂಬಿಎ ಇನ್ ಹಣಕಾಸು / ಎಂ.ಕಾಂ ಜತೆಗೆ ಟ್ಯಾಲಿ ಪ್ರಮಾಣ ಪತ್ರ ಪಡೆದಿರಬೇಕು. ಕನಿಷ್ಠ 5 ವರ್ಷ ಕಾರ್ಯಾನುಭವ ಅಥವಾ ಕನಿಷ್ಠ 2 ವರ್ಷ ಸರ್ಕಾರಿ ವಲಯದಲ್ಲಿ ಕಾರ್ಯಾನುಭವ ಹೊಂದಿರಬೇಕು.
ಯಾವ್ಯಾವ ಜಿಲ್ಲೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ?:
ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮೀಣ, ಹಾವೇರಿ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ವಿಜಯನಗರ, ವಿಜಯಪುರ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಕೊಡಗು, ಮಂಗಳೂರು, ರಾಮನಗರ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಧಾರವಾಡ, ಬೀದರ್, ಕಲಬುರಗಿ ಜಿಲ್ಲೆಗಳು.
ಇತರೆ ಅರ್ಹತೆಗಳು ಹಾಗೂ ಮಾನದಂಡಗಳು:
ಹುದ್ದೆ ಅವಧಿ:
ಮೊದಲಿಗೆ 1 ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನಂತರ ಇಲಾಖೆಯ ಬೇಡಿಕೆ ಅನುಸಾರ, ಕಾರ್ಯದಕ್ಷತೆ ಉಳ್ಳವರಿಗೆ ಹುದ್ದೆಯ ಅವಧಿಯನ್ನು ಪ್ರತಿವರ್ಷ ಅಗತ್ಯಕ್ಕೆ ಅನುಗುಣವಾಗಿ ವಿಸ್ತರಣೆ ಮಾಡುವ ಅವಕಾಶ ಇರುತ್ತದೆ.
ವಯಸ್ಸಿನ ಅರ್ಹತೆಗಳು:
ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ವಯಸ್ಸು ಮೀರಿರಬಾರದು.
• ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಹುದ್ದೆಗಾಗಿ ಕನಿಷ್ಠ 3 ಜಿಲ್ಲೆಗಳನ್ನು ಆಯ್ಕೆ ಮಾಡಬೇಕು.
• ಸ್ನಾತಕೋತ್ತರ ಪದವೀಧರರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ.
• ಅಭ್ಯರ್ಥಿಗಳಿಗೆ ಕನ್ನಡ ಓದಲು, ಬರೆಯಲು, ಮಾತನಾಡಲು ಬರಬೇಕು.
• ಅರ್ಜಿ ಸಲ್ಲಿಸುವಾಗ ಹುದ್ದೆಗೆ ಹೇಗೆ ಅರ್ಹರು ಎಂದು 100 ಪದಗಳಲ್ಲಿ ಬರೆದಿರಬೇಕು.
• ಅರ್ಜಿ ಸಲ್ಲಿಸಿ ಶಾರ್ಟ್ ಲಿಸ್ಟ್ ಆದವರು ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಿರುತ್ತದೆ.
• ಆಯ್ಕೆಯಾದವರು 30 ದಿನಗಳೊಳಗಾಗಿ ಹುದ್ದೆಗೆ ವರದಿ ಮಾಡಿಕೊಳ್ಳಲು ರೆಡಿ ಇರಬೇಕು.
• ಇತರೆ ಹೆಚ್ಚಿನ ಮಾಹಿತಿಗಳಿಗಾಗಿ recruitment.rdwsd@gmail.com ಗೆ ಇಮೇಲ್ ಮಾಡಬಹುದು.
ಅರ್ಜಿ ಸಲ್ಲಿಸುವ ವಿಧಾನ:
- ವೆಬ್ ಪೋರ್ಟಲ್
https://www.ksrwspdtsuonline.in/jobapplicationform ಗೆ ಭೇಟಿ ನೀಡಿ, ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ:
ದಿನಾಂಕ: 23-09-2024.
http://www.robertlewandowskicz.biz
last news about robert lewandowski
https://www.robertlewandowskicz.biz
http://robertlewandowski-cz.biz
last news about robert lewandowski
https://www.robertlewandowski-cz.biz