SSC CGL 2024 Recruitment: ಒಟ್ಟು 17727 ಹುದ್ದೆಗಳಿಗೆ ಎಸ್‌ಎಸ್‌ಸಿ ಸಿಜಿಎಲ್ ನೇಮಕಾತಿ- 2024 ಆರಂಭ. ಇಂದೇ ಅರ್ಜಿ ಸಲ್ಲಿಸಿ .
ಎಸ್‌ಎಸ್‌ಸಿ ಸಿಜಿಎಲ್ 2024 ನೇಮಕಾತಿಗೆ ಅಧಿಕ್ರತ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 17727 ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯನ್ನು ಮಾಡಬಹುದು.
ಈ ಲೇಖನದಲ್ಲಿ ಎಸ್‌ಎಸ್‌ಸಿ ಸಿಜಿಎಲ್ 2024 ನೇಮಕಾತಿಗೆ ಅಧಿಕ್ರತ ಅಧಿಸೂಚನೆಯಲ್ಲಿ ಪ್ರಕಟಿಸಿರುವ ಅರ್ಹತಾ ಮಾನದಂಡಗಳ ಅಂದರೆ ಅಭ್ಯರ್ಥಿಗಳ ವಿಧ್ಯರ್ಹತೆ, ಪರೀಕ್ಷಾ ದಿನಾಂಕ, ಹುದ್ದೆಗಳ ವಿವರ, ವೇತನ ಇತರೆ ಪ್ರಮುಖ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ
ಶೈಕ್ಷಣಿಕ ಅರ್ಹತೆ:-
ಯಾವುದೇ ವಿಷಯದಲ್ಲಿ ಬ್ಯಾಚುಲರ್ ಪದವಿ ಹೊಂದಿರಬೇಕು
ಈ ನಿರ್ದಿಷ್ಟ ಹುದ್ದೆಗಳಿಗಾಗಿ ಹೆಚ್ಚುವರಿ ಅರ್ಹತೆ (ಉದಾ., ಸಹಾಯಕ ತಪಾಸಣೆ ಅಧಿಕಾರಿ/ಸಹಾಯಕ ಖಾತೆಗಳ ಅಧಿಕಾರಿ ಹುದ್ದೆಗೆ ಸಿಎ/ಸಿಎಸ್/ಎಂಬಿಎ, ಕಿರಿಯ ಸಾಂಖ್ಯಿಕ ಅಧಿಕಾರಿ ಹುದ್ದೆಗೆ) 12ನೇ ತರಗತಿಯಲ್ಲಿ ಗಣಿತದಲ್ಲಿ ಕನಿಷ್ಠ 60%
ಹುದ್ದೆಗಳ ವೇತನ ಶ್ರೇಣಿ .
ಗುಂಪು ಎ: ಪ್ರತಿ ತಿಂಗಳು ರೂ. 56,100 ರಿಂದ ರೂ. 1,77,500
ಗುಂಪು ಬಿ: ಪ್ರತಿ ತಿಂಗಳು ರೂ. 35,400 ರಿಂದ ರೂ. 1,12,400
ಗುಂಪು ಸಿ: ಪ್ರತಿ ತಿಂಗಳು ರೂ. 25,500 ರಿಂದ ರೂ. 81,100
ಹುದ್ದೆಗಳ ವಿವರ.
ಒಟ್ಟು 17,727 ಹುದ್ದೆಗಳಿಗೆ ಎಸ್‌ಎಸ್‌ಸಿ ಸಿಜಿಎಲ್ 2024 ನೇಮಕಾತಿ ನಡೆಯಲಿದ್ದು, ಅದರಲ್ಲಿ ಸಹಾಯಕ ತಪಾಸಣೆ ಅಧಿಕಾರಿ, ಸಹಾಯಕ ಖಾತೆಗಳ ಅಧಿಕಾರಿ, ಇನ್ಸ್ಪೆಕ್ಟರ್ (ಪರೀಕ್ಷಕ), ಉಪ ನಿರೀಕ್ಷಕ, ಸಹಾಯಕ ವಿಭಾಗ ಅಧಿಕಾರಿ ಹುದ್ದೆಗಳು ಒಳಗೊಂಡಿವೆ
ಪ್ರಮುಖ ದಿನಾಂಕಗಳು.
ಅಧಿಸೂಚನೆ ಬಿಡುಗಡೆ ದಿನಾಂಕ: ಜೂನ್ 24, 2024
ಅಪ್ಲಿಕೇಶನ್ ದಿನಾಂಕಗಳು: ಜೂನ್ 24 ರಿಂದ ಜುಲೈ 24, 2024
ಅಪ್ಲಿಕೇಶನ್ ಶುಲ್ಕ ಪಾವತಿಯ ಕೊನೆ ದಿನಾಂಕ: ಜುಲೈ 25, 2024
ಟಿಯರ್ 1 ಪರೀಕ್ಷಾ ದಿನಾಂಕಗಳು: ಸೆಪ್ಟೆಂಬರ್-ಅಕ್ಟೋಬರ್ 2024 (ನಿಖರ ದಿನಾಂಕಗಳನ್ನು ಇನ್ನೂ ಘೋಷಣೆ ಮಾಡಿರುವುದಿಲ್ಲ )
ವಯೋಮಿತಿ.
18 ರಿಂದ 32 ವರ್ಷ. ಮೀಸಲಾತಿ ವರ್ಗಗಳಿಗೆ ವಯೋ ಸಡಳಿಕೆ ಇರುತ್ತದೆ.
ಎಸ್‌ಎಸ್‌ಸಿ ಸಿಜಿಎಲ್ 2024 ಅರ್ಜಿ ಸಲ್ಲಿಕೆ ವಿಧಾನ.
ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ
ನೀವು ಹೊಸ ಬಳಕೆದಾರರಾಗಿದ್ದರೆ, ಅವಶ್ಯಕ ಮಾಹಿತಿಯನ್ನು, ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆಯನ್ನು ಒದಗಿಸಿ ನೋಂದಣಿ ಮಾಡಿ
ನಂತರ ನಿಮ್ಮ ಇಮೇಲ್‌ಗೆ ಕಳುಹಿಸಲಾದ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ
ಅರ್ಜಿ ಫಾರ್ಮ್ ನಲ್ಲಿ ವಿವರಗಳನ್ನು ಸರಿಯಾಗಿ ನಮೂದಿಸಿ.
ಫೋಟೋ (ಜೆಪಿಇಜಿ, 20-50 KB) ಮತ್ತು ಸಹಿ (10-20 KB) ಗಳನ್ನು ಅಪ್ಲೋಡ್ ಮಾಡಿ
ನಿಮ್ಮ ವರ್ಗಕ್ಕೆ ತಕ್ಕಂತೆ ಶುಲ್ಕ ಪಾವತಿಸಿ, ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ