ಕರ್ನಾಟಕ ಏಕೀಕರಣ TET, GPSTR, HSTR, PDO, FDA, SDA, All Competative exam notes.

Table of Contents

1. ಡೆಪ್ಯೂಟಿ ಚೆನ್ನಬಸಪ್ಪನವರ ಪಾತ್ರ.

* ಇವರನ್ನು ಕರ್ನಾಟಕದ ಹುಲಿ ಮತ್ತು ಕರ್ನಾಟ ಏಕೀಕರಣ ಚಳುವಳಿಯ ಪಿತಾಮಹ ಎನ್ನುವರು.

2. ಸಾಹಿತ್ಯದ ಪಾತ್ರ.

* ಆಲೂರು ವೆಂಕಟರಾಯರು :-

ಕರ್ನಾಟಕದ ಗತವೈಭವ, ಕರ್ನಾಟಕತ್ವದ ವಿಕಾಸ, ಕರ್ನಾಟಕತ್ವದ ಸೂತ್ರಗಳು, ಕರ್ನಾಟಕತ್ವದ ವೀರ ರತ್ನಗಳು

* ಡಾ|| ಪ್ಲೀಟ್ :-

ಕೆನರ ರಾಜರ ಸಂತತಿಗಳು

* ಶ್ರೀ ವಿಜಯ :-

ಕವಿರಾಜಮಾರ್ಗ

* ರಾಬರ್ಟ್ ಸಿವೆಲ್ :-

ದಿ ಫಾರ್ಗಾಟನ್ ಎಂಪೈರ್ ( ಮರೆತು ಹೋದ ಸಾಮ್ರಾಜ್ಯ).

* ಬಿ.ಎಲ್. ರೈಸ್ :-

ಎಪಿಗ್ರಾಫಿ ಕರ್ನಾಟಕ.

* ಸಂ. ಶಾ.ಜೋಶಿ:-

ಕರ್ನಾಟಕದ ವೀರ ಕ್ಷತ್ರಿಯರು.

* ನೀಲ್ ಮೆಕೆಂಜಿ :-

ಹೊಯ್ಸಳರ ಚರಿತ್ರೆ.

  -: ಪ್ರಮುಖ ಗೀತೆಗಳು :-

* ಹುಯಿಲಗೋಳ ನಾರಾಯಣರಾಯ :-

” ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”

* ಬಿ.ಎಂ.ಶ್ರೀಕಂಠಯ್ಯ:-

” ಹಾರಿಸಿ ಹಾರಿಸಿ ಕನ್ನಡದ ಬಾವುಟ ”

* ಶಾಂತಕವಿ :-

” ರಕ್ಷಿಸು ಕರ್ನಾಟಕ ದೇವಿ ಸಂರಕ್ಷಿಸುವ ಕರ್ನಾಟಕ ದೇವಿ”

* ಮಂಗೇಶ ಪೈ :-

” ತಾಯಿ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ ”

* ಕುವೆಂಪು :-

ಕರ್ನಾಟಕದ ನಾಡಗೀತೆ ಯಾದ ” ಜಯ ಭಾರತ ಜನನಿಯ ತನುಜಾತೆ ”

3. ಸಂಘ ಸಂಸ್ಥೆಗಳ ಪಾತ್ರ.

A. ಕರ್ನಾಟಕ ಭಾಷೋಜ್ಜೀವಿನಿ ಸಭಾ-1887.

B. ಕರ್ನಾಟಕ ವಿದ್ಯಾವರ್ಧಕ ಸಂಘ-1890.

* ಆರ್. ಹೆಚ್. ದೇಶಪಾಂಡೆ ಧಾರವಾಡದಲ್ಲಿ 1890ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು.

C. ಕರ್ನಾಟಕ ಸಾಹಿತ್ಯ ಪರಿಷತ್-1915.

D. ಕರ್ನಾಟಕದ ಸಭೆ-1916.

4. ಪತ್ರಿಕೆಗಳ ಪಾತ್ರ.

* ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆ 1843ರಲ್ಲಿ ಪ್ರಾರಂಭವಾಯಿತು.

* ಜಯ ಕರ್ನಾಟಕ, ವಾಗ್ಭೂಷಣ, ಸಂಯುಕ್ತ ಕರ್ನಾಟಕ, ತರುಣ ಕರ್ನಾಟಕ, ಕರ್ನಾಟಕ ಕೇಸರಿ, ದಿ ಸ್ಟಾರ್, ಹುಬ್ಬಳ್ಳಿ ಗೆಜೆಟ್, ಕರ್ನಾಟಕ ಪ್ರಕಾಶಿತ, ದೇಶಾಭಿಮಾನಿ, ಸೂರ್ಯೋದಯ, ಹನುಮಂತ ರಾವ್ ಮೊಹರೆಯವರ ಕರ್ಮವೀರ.

5. ಆಲೂರು ವೆಂಕಟರಾವ್ ರವರ ಪಾತ್ರ.

* ಇವರನ್ನು ಕರ್ನಾಟಕದ ಕುಲ ಪುರೋಹಿತ ಎಂದು ಕರೆಯುತ್ತಾರೆ.

* ಕರ್ನಾಟಕದ ಕರ್ನಾಟಕ ಚಳುವಳಿಯ ಅದ್ಯ ಪ್ರವರ್ತಕ.

* ವಾಗ್ಭೂಷಣ ಪತ್ರಿಕೆಯಲ್ಲಿ ಬರೆಯುತ್ತಾ ” ಕರ್ನಾಟಕ ಒಂದಾಗದೆ ಕರ್ನಾಟಕಸ್ಥರು ಹೇಳಿಕೆಯು ಎಂದಿಗೂ ಸಾಧ್ಯವಾಗದು” ಎಂದು ಬರೆದರು.

-: ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕದ ಏಕೀಕರಣ ಚಳವಳಿ:-

1.ಕರ್ನಾಟಕ ವಿದ್ಯಾವರ್ಧಕ ಸಂಘ-1890.

ಕನ್ನಡಿಗರನ್ನು ಒಂದುಗೂಡಿಸಲು ಆರ್. ಹೆಚ್. ದೇಶಪಾಂಡೆಯವರು ಧಾರವಾಡದಲ್ಲಿ ಸ್ಥಾಪಿಸಿದರು.

2. ಕರ್ನಾಟಕ ಸಭಾ-1916.

3. ಏಕೀಕರಣಕ್ಕೆ ಪ್ರೇರಣೆ.

4. 1918ರಲ್ಲಿ ಅಖಿಲ ಕರ್ನಾಟಕ ರಾಜಕೀಯ ಪರಿಷತ್ತು ಸ್ಥಾಪನೆಗೊಂಡಿತು.

5. ಬೆಳಗಾವಿ ಕಾಂಗ್ರೆಸ್ ಅಧಿವೇಶನ.

ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನವಾಗಿದ್ದು ಕನ್ನಡಿಗರು ಕರ್ನಾಟಕ ಏಕೀಕರಣ ಬೇಡಿಕೆಯ ಕಡೆಗೆ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

6. ಪ್ರಥಮ ಕರ್ನಾಟಕ ಏಕೀಕರಣ ಸಮ್ಮೇಳನ-1924.

7. ಕರ್ನಾಟಕ ಏಕೀಕರಣ ಸಮಿತಿಯು ತನ್ನ ಪ್ರಥಮ ಏಕೀಕರಣ ಸಮ್ಮೇಳನವನ್ನು ಬೆಳಗಾವಿಯಲ್ಲಿ ಸಿದ್ದಪ್ಪ ಕಂಬಳಿ ಅಧ್ಯಕ್ಷತೆಯಲ್ಲಿ ನಡೆಸಿತು.

8.ಕರ್ನಾಟಕ ಏಕೀಕರಣ ಸಂಘ-1948.

ಕರ್ನಾಟಕ ಏಕೀಕರಣ ಸಭಾ ಮುಂದೆ ಏಕೀಕರಣ ಸಂಘವಾಯಿತು. ಇದರಲ್ಲಿ ” ರಾಮರಾವ್” ಅಧ್ಯಕ್ಷರಾದರು.

-: ಸ್ವಾತಂತ್ರ್ಯ ನಂತರದ ಏಕೀಕರಣ ಚಳುವಳಿ :-

* ಎಸ್.ಕೆ.ಧಾರ್ ಸಮಿತಿ 17 ಜೂನ್ 1948.

* ಈ ಆಯೋಗದ ಅಧ್ಯಕ್ಷರಾಗಿ ಅಲಹಾಬಾದ್ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಎಸ್.ಕೆ. ಧಾರ್ ಮತ್ತು ನಿವೃತ್ತ ಐಸಿಎಸ್ ಅಧಿಕಾರಿ ಪನ್ನಾ ಲಾಲ್ ಹಾಗೂ ಸಂವಿಧಾನ ರಚನಾ ಮಂಡಳಿಯ ಸದಸ್ಯರಾಗಿದ್ದ ಜಗತ್ ನಾರಾಯಣ ಲಾಲ್ .

* ಈ ಆಯೋಗವು 1948 ಡಿಸೆಂಬರ್ 10ರಂದು ತನ್ನ ವರದಿ ಸಲ್ಲಿಸಿತು.

* ಜೆ.ವಿ.ಪಿ. ಸಮಿತಿಯ 1948.

* 1948 ರಜಪುರ್ ಕಾಂಗ್ರೆಸ್ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಬಗ್ಗೆ ವರದಿ ಮಾಡಲು ಜವಾಹರ್ ಲಾಲ್ ನೆಹರು, ಸರ್ದಾರ್ ವಲ್ಲಬಾಯ್ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. ಇದನ್ನು ಅಧ್ಯಕ್ಷರೇ ಇಲ್ಲದ ಸಮಿತಿ.

* ಪೊಟ್ಟಿ ಶ್ರೀರಾಮುಲು ಉಪವಾಸ ಮತ್ತು ಆಂಧ್ರಪ್ರದೇಶ ರಚನೆ.

* ಪೊಟ್ಟಿ ಶ್ರೀರಾಮುಲು 1952 ಅಕ್ಟೋಬರ್ ನಲ್ಲಿ ಅಮರಣಾಂತ ಉಪವಾಸ ಕೈಗೊಂಡರು. 58ನೇ ದಿನ ಉಪವಾಸದ ನಂತರ 1952 ಡಿಸೆಂಬರ್ 15ರಂದು ಮರಣ ಹೊಂದಿದರು. ಇದರಿಂದ 1952 ಡಿಸೆಂಬರ್ 19ರಂದು ಪ್ರಧಾನಿ ಜವಾಹರ್ ಲಾಲ್ ನೆಹರು ಆಂಧ್ರಪ್ರದೇಶ ರಚನೆಯ ತೀರ್ಮಾನವನ್ನು ಪಾರ್ಲಿಮೆಂಟಿನಲ್ಲಿ ಪ್ರಕಟಿಸಿದರು. ತಕ್ಷಣವೇ ಪಾರ್ಲಿಮೆಂಟಿನಲ್ಲಿ ಆಂಧ್ರಪ್ರದೇಶ ರಚನೆಯನ್ನು ಅನುಮೋದಿಸಿದರು. 1953ರಲ್ಲಿ ಆಂಧ್ರಪ್ರದೇಶವು ರಚನೆಯಾಗಿದೆ.

* ಇದು ಭಾರತದ ಮೊದಲ ಭಾಷಾವಾರು ಪ್ರಾಂತ್ಯ.

* ಫಜಲ್ ಅಲಿ ಆಯೋಗ-1953.

* ಈ ಆಯೋಗವನ್ನು ರಾಜ್ಯಗಳ ಪುನರ್ ವಿಂಗಡಣೆ ಆಯೋಗ ಎನ್ನುವರು.

* ಇದನ್ನು ಡಿಸೆಂಬರ್ 29 1953ರಲ್ಲಿ ರಚಿಸಲಾಯಿತು.

* ಅಧ್ಯಕ್ಷರು ನ್ಯಾಯಮೂರ್ತಿ ಫಜಲ್ ಅಲಿ.

* ಹೃದಯ ನಾಥ್ ಖು೦ಜ್ರು ಮತ್ತು ಕೆ.ಎಂ ಫಣೀಕರ ಇದರ ಸದಸ್ಯರು.

 

WhatsApp Group Join Now
Telegram Group Join Now