ಭೂಚಿಪ್ಪಿನ ಶಕ್ತಿಗಳು.TET,GPST,HSTR, PDO, FDA, SDA All Competative exam notes.

  -: ಭೂ ಚಿಪ್ಪಿನ ಶಕ್ತಿಗಳು :-

* ಭೂಮಿ ಎರಡು ಬಗೆಯ ಶಕ್ತಿಗಳನ್ನು ಹೊಂದಿದೆ ಈ ಶಕ್ತಿಗಳು ಭೂ ಮೇಲ್ಮೈನ ಸ್ವರೂಪಗಳ ಮೇಲೆ ಪರಿಣಾಮವನ್ನು ನೀಡುತ್ತವೆ. ಅವುಗಳೆಂದರೆ.

1. ಅಂತರ್ಜನಿತ ಶಕ್ತಿಗಳು (Internal Force).

2. ಬಾಹ್ಯ ಶಕ್ತಿಗಳು (External Force ).

 1. ಅಂತರ್ಜನಿಕ ಶಕ್ತಿಗಳು.

* ಇವುಗಳು ಭೂಮಿಯ ಆಂತರಿಕ ಶಕ್ತಿಗಳಾಗಿದ್ದು, ಭೂಮಿಯಲ್ಲಿನ ಮೇಲ್ಮೈ ಸ್ವರೂಪಗಳು ಕ್ಷೀಪ್ರವಾಗಿ ಬದಲಾವಣೆ ಹೊಂದುತ್ತವೆ. ಉದಾಹರಣೆಗೆ – ಜ್ವಾಲಾಮುಖಿಗಳು ಮತ್ತು ಭೂಕಂಪಗಳು.

-: ಜ್ವಾಲಾಮುಖಿಗಳು (Volcanoes).:-

* ಭೂ ಮೇಲ್ಮೈನಲ್ಲಿ ಬಿರುಕು ಅಥವಾ ರಂದ್ರಗಳು ಉಂಟಾಗಿ ಅವುಗಳ ಮೂಲಕ ಭೂಮಿಯ ಒಳಗಿನ ಶಿಲಾ ಪಾಕವು ಹೊರ ಬೀಳುವುದನ್ನು ಜ್ವಾಲಾಮುಖಿ ಎಂದು ಕರೆಯುತ್ತಾರೆ.

-: ಜ್ವಾಲಾಮುಖಿಯ ವಿಧಗಳು :-

1. ಜಾಗೃತ ಜ್ವಾಲಾಮುಖಿಗಳು (Active Volcanoes).

* ನಿರಂತರವಾಗಿ ಸ್ಫೋಟ ಗೊಳ್ಳುವ ಲಾವಾರಸ, ಅನಿಲ, ಬೂದಿ ಇತ್ಯಾದಿಗಳನ್ನು ಹೊರ ಚಿಮ್ಮುವ ಜ್ವಾಲಾಮುಖಿಗಳಿಗೆ ಜಾಗೃತ ಜ್ವಾಲಾಮುಖಿಗಳು ಎನ್ನುವರು.

* ಪ್ರಪಂಚದಾದ್ಯಂತ ಸುಮಾರು 600 ಜಾಗೃತ ಜ್ವಾಲಾಮುಖಿಗಳಿವೆ. ಉದಾಹರಣೆ

ಫಿಲಿಪ್ಪೈನ್ಸ್ – ಪಿನಾಟುಬೊ

ಇಟಲಿ – ಸ್ಟ್ರಾಂಬೋಲಿ ಮತ್ತು ಎಟ್ನಾ

ಯುಎಸ್ಎ – ಸೇಂಟ್ ಹೆಲೆನಾ

ಹವಾಯಿ ದ್ವೀಪ – ಮೌನಲೋವ

2. ಸೂಪ್ತ ಜ್ವಾಲಾಮುಖಿಗಳು (Dormant Volcanoes).

* ಒಮ್ಮೆ ಸ್ಪೋಟಿಸಿ ಆನಂತರ ಬಹುಕಾಲ ಕಾರ್ಯಾಚರಣೆ ನಡೆಸದೆ ಸೂಕ್ತವಾಗಿ ಯಾವಾಗಲೂ ಒಮ್ಮೆ ಜಾಗೃತವಾಗಿ ಕಾರ್ಯಾಚರಣೆ ನಡೆಸುವ ಜ್ವಾಲಾಮುಖಿಗಳನ್ನು ಸೂಪ್ತ ಜ್ವಾಲಾಮುಖಿಗಳು ಎನ್ನುವರು. ಉದಾಹರಣೆಗೆ

ಇಟಲಿ – ಮೌಂಟ್ ವೆಸೂವಿಯಸ್

ಜಪಾನ್ – ಪ್ಯೂಜಿಯಾಮ

ಇಂಡೋನೇಷಿಯಾ – ಕ್ರಕಟೋವ

ತಾಂಜೇನಿಯ – ಕಿಲಿಮಂಜರೋ

3. ಲುಪ್ತ ಜ್ವಾಲಾಮುಖಿಗಳು (Extinct Volcanoes).

* ಇವುಗಳು ಪುರಾತನ ಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದು ನಂತರದಲ್ಲಿ ಯಾವುದೇ ಕಾರ್ಯಚರಣೆ ನಡೆಸಿಲ್ಲ. ಉದಾಹರಣೆ

ಅರ್ಜೆಂಟೀನಾ – ಅಕಾಂಕಗುವಾ

ತಾಂಜೇನಿಯಾ – ಗೊರಾಂಗೊರೊ

ಸ್ಕಾಟ್ಲೆಂಡ್- ಆರ್ಥರ್ ಸೀಟ್

-: ಪ್ರಪಂಚದ ಪ್ರಸಿದ್ಧ ಜ್ವಾಲಾಮುಖಿಗಳು :-

* ಮೌಂಟ್ ವೆಸೂವಿಯಸ್ – ಇಟಲಿ

* ಕ್ರಕಟೋವ – ಇಂಡೋನೇಷ್ಯಾ

* ಮೌಂಟ್ ಪಿಲೀ – ವೆಸ್ಟ್ ಇಂಡೀಸ್

* ಮೌಂಟ್ ಪ್ಯೂಜಿಯಾಮ – ಜಪಾನ್

-: ಭೂಕಂಪಗಳು ( Earthquakes) :-

* ಭೂ ಮೇಲ್ಮೈನಲ್ಲಿ ಉಂಟಾಗುವ ನಡುಗುವಿಕೆ, ಕಂಪನ ಹಾಗೂ ಕಂಪನಗಳ ಸರಣಿಯನ್ನು ಭೂಕಂಪ ಎಂದು ಕರೆಯುವರು.

* ಭೂಕಂಪ ಕುರಿತು ವೈಜ್ಞಾನಿಕ ಅಧ್ಯಯನವನ್ನು ಭೂಕಂಪ ಶಾಸ್ತ್ರ ( Seismology) ಎನ್ನುವರು.

* ಭೂಕಂಪ ಅಲೆಗಳ ಆರಂಭ ಸ್ಥಳ, ವೇಳೆ, ವೇಗ ಹಾಗೂ ದಿಕ್ಕನ್ನು ದಾಖಲಿಸುವ ಉಪಕರಣವನ್ನು ಭೂಕಂಪ ಮಾಪಕ (Seismograph) ಎನ್ನುವರು.

-: ಭೂಕಂಪನಗಳು ಉಂಟಾಗಲು ಕಾರಣಗಳು :-

* ಭೂ ರಚನಾ ಕಾರಣಗಳು.

* ಜ್ವಾಲಾ ಮುಖಿ ಸ್ಪೋಟಗಳು.

* ಸ್ತರಭಂಗ.

* ಮಾನವ ನಿರ್ಮಿತ ಅಂಶಗಳು.

-: ಭೂಕಂಪನ ಅಲೆಗಳು :-

1. ಪ್ರಾಥಮಿಕ ಅಲೆಗಳು.

* ಇವುಗಳು ಭೂಕಂಪದ ಒಳ ಕೇಂದ್ರದಿಂದ ಮೊದಲು ಹೊರ ಕೇಂದ್ರವನ್ನು ತಲುಪುತ್ತವೆ. ಇವುಗಳು ನೀಳ ಅಲೆಗಳು ಅತ್ಯಂತ ವೇಗವಾಗಿ ಚಲಿಸುತ್ತವೆ.

* ಇವುಗಳು ಘನ, ದ್ರವ ಮತ್ತು ಅನಿಲಗಳ ಮೂಲಕ ಚಲಿಸುತ್ತವೆ.

2. ದ್ವಿತೀಯ ಅಲೆಗಳು.

* ಇವುಗಳನ್ನು ಅಡ್ಡ ಅಲೆಗಳು ಎಂದು ಕರೆಯುತ್ತಾರೆ.

* ಇವು ದ್ರವ ವಸ್ತುಗಳ ಮೂಲಕ ಚಲಿಸಲಾರವು.

* ಪ್ರಾಥಮಿಕ ಅಲೆಗಳ ನಂತರ ಇವು ವರ ಕೇಂದ್ರವನ್ನು ತಲುಪುತ್ತವೆ.

3. ಮೇಲ್ಮೈ ಅಲೆಗಳು.

* ಇವುಗಳನ್ನು ಉದ್ದ ಅಲೆಗಳು ಎಂದು ಕರೆಯುತ್ತಾರೆ.

* ಇವು ಅತ್ಯಂತ ನಿಧಾನಗತಿಯ ಭೂಕಂಪ ಅಲೆಗಳು.

* ಇವು ಅತ್ಯಂತ ಹಾನಿಕಾರಕ ಅಲೆಗಳಾಗಿವೆ.

” ಭೂಕಂಪದ ತೀವ್ರತೆ ಮತ್ತು ಪ್ರಮಾಣವನ್ನು ರಿಕ್ಟರ್ ಮಾಪನದಿಂದ ಅಳತೆ ಮಾಡಲಾಗುತ್ತದೆ.”

-: ಭೂಕಂಪದ ಪರಿಣಾಮಗಳು – ಸುನಾಮಿ:-

* ಸಮುದ್ರ ಮತ್ತು ಸಾಗರ ತಳದಲ್ಲಿ ಉಂಟಾಗುವ ಭೂಕಂಪನಗಳಿಂದ ಸಾಗರಗಳಲ್ಲಿ ಅತಿ ಎತ್ತರವಾದ ಧೈತ್ಯ ಅಲೆಗಳು ತೀರಕ್ಕೆ ಹಪ್ಪಳಿಸುತ್ತವೆ. ಇವುಗಳನ್ನು ಸುನಾಮಿ ಎಂದು ಕರೆಯುತ್ತಾರೆ.

* ಇದು ಜಪಾನ್ ಭಾಷೆಯ ಪದವಾಗಿದ್ದು ಇದರ ಅರ್ಥ ತೀರಕ್ಕೆ ಅಪ್ಪಳಿಸುವ ಎತ್ತರದ ಬಂದರು ಅಲೆಗಳು ಎಂದರ್ಥ.

* 2014 ಡಿಸೆಂಬರ್ 26ರಂದು ಸುನಾಮಿ ಅಲೆಗಳು ಭಾರತ, ಇಂಡೋನೇಷಿಯಾ, ಥೈಲ್ಯಾಂಡ್, ಶ್ರೀಲಂಕಾ ದೇಶಗಳ ತೀರಕ್ಕೆ ಅಪ್ಪಳಿಸಿ ಅಪಾರ ಹಾನಿಯನ್ನು ಉಂಟು ಮಾಡಿವೆ.

* 2011ರ ಮಾರ್ಚ್ 11ರಂದು ಸುನಾಮಿ ಅಲೆಗಳು ಜಪಾನಿನ ಪುಕುಶೀಮ, ಸೆಂಡೈ, ಮೀಯಾಗಿ ಮೊದಲಾದ ಪ್ರದೇಶಗಳಿಗೆ ಅಪ್ಪಳಿಸಿ ಹಾನಿಯನ್ನು ಉಂಟು ಮಾಡುವೆ.

* ಭಾರತದಲ್ಲಿರುವ ಕೆಲವು ಭೂಕಂಪನ ದಾಖಲೆಯ ಕೇಂದ್ರಗಳು – ಗೌರಿಬಿದನೂರು, ಕೊಡೈಕೆನಾಲ್, ಪುಣೆ , ಹೈದರಾಬಾದ್ ಮತ್ತು ಡೆಹರಾಡೂನ್.

 

 

WhatsApp Group Join Now
Telegram Group Join Now