ದಕ್ಷಿಣ ರೈಲ್ವೆಯಲ್ಲಿ ನೇಮಕಾತಿ ಆರಂಭ: 10th, ಪದವಿ ಪಾಸ್ ಆದವರಿಗೆ ಪರೀಕ್ಷೆ ಇಲ್ಲದೆ ಉದ್ಯೋಗವಕಾಶ! Recruitment in Southern Railway-2024.

ದಕ್ಷಿಣ ರೈಲ್ವೆಯಲ್ಲಿ ನೇಮಕಾತಿ ಆರಂಭ: 10th, ಪದವಿ ಪಾಸ್ ಆದವರಿಗೆ ಪರೀಕ್ಷೆ ಇಲ್ಲದೆ ಉದ್ಯೋಗವಕಾಶ! Recruitment in Southern Railway-2024.

Southern Railway
 

ದಕ್ಷಿಣ ರೈಲ್ವೆಯಲ್ಲಿ ( Southern Railway) ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ರೀತಿಯ ಲಿಖಿತ ಪರೀಕ್ಷೆ ಇಲ್ಲದೆ ಕೇವಲ 10th, PUC, Degree ತೇರ್ಗಡೆ ಹೊಂದಿದವರಿಗೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಉದ್ಯೋಗಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಇವು  ಇಲ್ಲಿ ತಿಳಿಸಲಾಗಿದೆ.

ದಕ್ಷಿಣ ರೈಲ್ವೆಯಲ್ಲಿ (Southern Railway)   ಖಾಲಿ ಹುದ್ದೆಗಳು .

ದಕ್ಷಿಣ ರೈಲ್ವೆ ( Southern Railway)ಕ್ರೀಡಾ ಕೋಟಾದ ಮೀಸಲಾತಿಯ 67 ಹುದ್ದೆಗಳನ್ನು ಭರ್ತಿ ಮಾಡಲಿದೆ. ಓಟ, ಚೆಸ್, ವೇಟ್ ಲಿಫ್ಟಿಂಗ್, ಬಾಸ್ಕೆಟ್‌ಬಾಲ್, ಬಾಕ್ಸಿಂಗ್, ಕ್ರಿಕೆಟ್ ಇತ್ಯಾದಿ ವಿವಿಧ ವಿಭಾಗಗಳಲ್ಲಿ (ಪುರುಷರು/ಮಹಿಳೆಯರು) ಅಥ್ಲೀಟ್‌ಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇತ್ಯಾದಿ ಮಾಹಿತಿ ಕೆಳಗೆ ನೀಡಲಾಗಿದೆ . ಸಂಪೂರ್ಣ ಮಾಹಿತಿಯನ್ನು ಓದಿ ನಂತರ ಅರ್ಜಿಯನ್ನ ಸಲ್ಲಿಸಿ.

ದಕ್ಷಿಣ ರೈಲ್ವೆಯಲ್ಲಿ ( (Southern Railway) ಖಾಲಿ ಹುದ್ದೆಗಳ ವಿವರ .

ದಕ್ಷಿಣ ರೈಲ್ವೆಯಲ್ಲಿ ((Southern Railway) ಒಟ್ಟು 67 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ, ಇವುಗಳಲ್ಲಿ  ಹಂತ 1 ರಲ್ಲಿ 46 ಹುದ್ದೆಗಳು, ಹಂತ 2, 3 ರಲ್ಲಿ 16 ಹುದ್ದೆಗಳು ಹಾಗೂ ಹಂತ 4,5 ರಲ್ಲಿ 5 ಹುದ್ದೆಗಳು ಖಾಲಿ ಇವೆ.

ದಕ್ಷಿಣ ರೈಲ್ವೆಯಲ್ಲಿ  (Southern Railway)   ಶೈಕ್ಷಣಿಕ ಅರ್ಹತೆ .

ಶೈಕ್ಷಣಿಕ ಅರ್ಹತೆಯು ಹುದ್ದೆಗಳಿಗೆ ಅನುಸಾರವಾಗಿ ಬದಲಾಗುತ್ತದೆ. ಕನಿಷ್ಠ ಅರ್ಹತೆ SSLC ಇಂದ ಗರಿಷ್ಠ ಪದವಿ ಪೂರ್ಣಗೊಳಿಸಿರಬೇಕು. ಹಂತ-1 ಕ್ರೀಡಾ ವಿಭಾಗಕ್ಕೆ ಅರ್ಜಿ ಸಲ್ಲಿಸಲು SSLC ಮತ್ತು ಐಟಿಐ ಉತ್ತೀರ್ಣರಾಗಿರಬೇಕು. ಹಂತ – 2  ಹಾಗೂ 3 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು PUC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಹಂತ- 4, 5 ಹುದ್ದೆಗಳಿಗೆ Degre ಪೂರ್ಣಗೊಳಿಸಿರಬೇಕು.

ದಕ್ಷಿಣ ರೈಲ್ವೆಯಲ್ಲಿ  (Southern Railway)  ವಯೋಮಿತಿ .

ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯಸ್ಸು 18 ರಿಂದ 25 ವರ್ಷಗಳ ನಡುವೆ ಇರಬೇಕು. ವಯಸ್ಸನ್ನು ಜನವರಿ 1, 2025 ರಿಂದ ಲೆಕ್ಕಹಾಕಲಾಗುತ್ತದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ದಕ್ಷಿಣ ರೈಲ್ವೆಯಲ್ಲಿ  (Southern Railway)      ಅರ್ಜಿ ಶುಲ್ಕ:

 ಸಾಮಾನ್ಯ, OBC ಮತ್ತು EWS ವರ್ಗಗಳಿಗೆ ಅರ್ಜಿ ಶುಲ್ಕ ರೂ. 500. SC, ST, PwD ವರ್ಗಗಳು, ಮಾಜಿ ಸೈನಿಕರು, ಮಹಿಳೆಯರಿಗೆ ಅರ್ಜಿ ಶುಲ್ಕ ರೂ. 250.

ದಕ್ಷಿಣ ರೈಲ್ವೆಯಲ್ಲಿ  (Southern Railway)       ವೇತನದ ವಿವರಗಳು .

ದಕ್ಷಿಣ ರೈಲ್ವೆಯಲ್ಲಿ (Southern Railway) ಹಂತ- 1 ಹುದ್ದೆಗಳಿಗೆ ಕನಿಷ್ಠ ವೇತನ ರೂ. 18,000, ಹಂತ – 2 ರೂ. 19,900, ಹಂತ – 3 ರೂ. 21,700, ಹಂತ – 4 ರೂ. 25,500, ಹಂತ – 5 ರೂ. 29,200.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 

ಈ ರೈಲ್ವೆ ಉದ್ಯೋಗಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಸೆಪ್ಟೆಂಬರ್ 7 ರಂದು ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 6. ಪರೀಕ್ಷೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.

ಆಯ್ಕೆಯ ವಿಧಾನ.

ದಕ್ಷಿಣ ರೈಲ್ವೆ (Southern Railway) ಕ್ರೀಡಾ ಕೋಟಾದ ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಕೇವಲ ದೈಹಿಕ ಪರೀಕ್ಷೆಗಳು ಮಾತ್ರ ಇರುತ್ತವೆ. ಅರ್ಹತೆ ಹೊಂದಿದ ಅಥ್ಲೀಟ್‌ಗಳನ್ನು ಒಟ್ಟು 4 ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ: ಕ್ರೀಡಾ ವಿಚಾರಣೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ಅಂತಿಮವಾಗಿ, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ, ಅರ್ಹತೆ ಹೊಂದಿರುವ ಅಭ್ಯರ್ಥಿಗಳು  ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು. 

ಧನ್ಯವಾದಗಳು….

WhatsApp Group Join Now
Telegram Group Join Now

Leave a Comment